ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಯ ಭವಿಷ್ಯಕ್ಕಾಗಿ ಇರಲಿ ಪರಿಸರದ ಕಾಳಜಿ

|
Google Oneindia Kannada News

ಈಗಾಗಲೇ ಜಿಟಿ ಜಿಟಿ ಮಳೆ ಶುರುವಾಗಿದೆ. ಬರದಿಂದ ಒಣಗಿ ಬಿರುಕುಬಿಟ್ಟಿದ್ದ ಇಳೆಗೆ ಜೀವಜಲ ಸಿಕ್ಕಂತಾಗಿದೆ. ಒಣಗಿ ವಿವರ್ಣವಾಗಿದ್ದ ಮರಗಳಿಗೆಲ್ಲ ಹಸಿರಿನ ಸ್ಪರ್ಶ ತಾಕುತ್ತಿದೆ. ಅಸಹನೀಯ ಎಂಬಂಥ ಒಣ ಹವೆಯ ಜಾಗವನ್ನೀಗ ತಂಗಾಳಿ ವ್ಯಾಪಿಸಿದೆ. ಬತ್ತಿದ್ದ ಕರೆ-ಹಳ್ಳಗಳಲ್ಲಿ ಒರತೆ ಒಸರುತ್ತಿದೆ.

ಧೂಳೆಬ್ಬಿಸುತ್ತಿದ್ದ ಮಣ್ಣೀಗ ಮಳೆಯ ಸಿಂಚನಕ್ಕೆ ಹಿತವಾದ ಪರಿಮಳವನ್ನು ಬೀರಿ ಆಹ್ಲಾದನೀಡುತ್ತಿದೆ. ಇಷ್ಟು ದಿನ ಆರ್ಭಟಿಸುತ್ತಿದ್ದ ಸೂರ್ಯ, ಕರಿಮೋಡದ ಮರೆಯಲ್ಲಿ ಕುಳಿತು ಶಾಂತವಾಗಿದ್ದಾನೆ. ಹೀಗೆ ನಿಸರ್ಗ ರಮಣೀಯತೆಯ ಅಂಗಿ ತೊಟ್ಟು ಸಂಭ್ರಮಿಸುತ್ತಿರುವಾಗಲೇ ವಿಶ್ವ ಪರಿಸರ ದಿನ(ಜೂನ್ 5)ವೂ ಅಡಿಯಿಟ್ಟಿದೆ.[ಪರಿಸರ ದಿನದಂದು 'ಯುನೈಟೆಡ್ ವೇ'ನಿಂದ 10,000 ಸಸಿ ನೆಡುವ ಕಾರ್ಯಕ್ರಮ]

ಜಗತ್ತಿನಾದ್ಯಂತ ಇಂದು ವಿಶ್ವ ಪರಿಸರ ದಿನ ಆಚರಣೆಗೊಳ್ಳುತ್ತಿದೆ. ಸಂಭ್ರಮಕ್ಕಿಂತ ಹೆಚ್ಚಾಗಿ ಆತಂಕದಲ್ಲೇ ಪ್ರತಿವರ್ಷ ಈ ಪರಿಸರ ದಿನವನ್ನು, ಜಗತ್ತು ಭರಮಾಡಿಕೊಳ್ಳುತ್ತಿದೆ ಎಂಬುದು ಅಚ್ಚರಿಯಾದರೂ, ವಾಸ್ತವ. 'Connecting People to Nature - in the city and on the land, from the poles to the equator'. (ಜನರನ್ನು ನಿಸರ್ಗಕ್ಕೆ ಬೆಸೆಯುವುದು- ನಗರದೊಳಗೆ ,ಭೂಮಿ ಮೇಲೆ, ಧ್ರುವದಿಂದ ಭೂಮಧ್ಯರೇಖೆಯವರೆಗೆ ) ಎಂಬುದು ಈ ಬಾರಿಯ ವಿಶ್ವ ಪರಿಸರ ದಿನದ ಘೋಷವಾಕ್ಯ.

ದಿನೇ ದಿನೇ ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನ, ಓಜೋನ್ ಪದರದಲ್ಲಿ ಹಿಗ್ಗುತ್ತಿರುವ ರಂದ್ರಗಳು, ಪ್ಲಾಸ್ಟಿಕ್ ನಂಥ ವಸ್ತುಗಳ ಅವ್ಯಾಹತ ಬಳಕೆ ಮತ್ತು ಅವುಗಳ ಅವೈಜ್ಞಾನಿಕ ವಿಲೇವಾರಿ, ಪರಿಸರ ಸ್ವಚ್ಛತೆಯ ಬಗ್ಗೆ ಬಹುಪಾಲು ಜನರ ದಿವ್ಯ ನಿರ್ಲಕ್ಷ್ಯ ಎಲ್ಲವೂ ಸೇರಿ ಮುಂದಿನ ಪೀಳಿಗೆಗೆ ಸ್ವಚ್ಛ ಗಾಳಿಗೂ ಹಾಹಾಕಾರ ಏಳಬಹುದಾದ ಆತಂಕ ಎದುರಾಗಿದೆ.

ಶುದ್ಧ ನೀರಿನ ಅಭಾವವನ್ನು ಬಹುತೇಕ ಎಲ್ಲ ದೇಶಗಳೂ ಎದುರಿಸುತ್ತಿವೆ. ಅಭಿವೃದ್ಧಿ ಕಾರ್ಯದ ನೆಪದಲ್ಲಿ ಧರೆಗುರುಳಿದ ಅಸಂಖ್ಯ ಮರಗಳು ಇರುವುದೊಂದೇ ಭೂಮಿ ಅದನ್ನು ಉಳಿಸಿಕೊಳ್ಳಿ ಎಂದು ಸಾರಿ ಹೇಳುತ್ತಿವೆ. ಪ್ರತಿ ವ್ಯಕ್ತಿಯೂ ತನ್ನ ಉಳಿವಿಗಾಗಿ, ತನ್ನ ಮುಂದಿನ ಪೀಳಿಗೆ ಉಳಿವಿಗಾಗಿ, ಜಗತ್ತಿನ ಉಳಿವಿಗಾಗಿ ಪರಿಸರ ರಕ್ಷಣೆಯನ್ನು ಆದ್ಯ ಕರ್ತವ್ಯ ಎಂದುಕೊಳ್ಳಬೇಕಿದೆ. ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ವೈಯಕ್ತಿಕವಾಗಿ ತೊಡಗಿಕೊಳ್ಳುವ ಸಂಕಲ್ಪವನ್ನು ಇಂದು ಟ್ವಿಟ್ಟರಿನಲ್ಲಿಯೂ ಹಲವರು ಕೈಗೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ...[ಉದ್ಯಾನನಗರಿ ಬೆಂಗಳೂರಿನಲ್ಲಿ ವಿಶ್ವ ಪರಿಸರ ದಿನದ ಸಂಭ್ರಮ]

ಪರಿಸರ ರಕ್ಷಣೆ ಕುರಿತು ಬದ್ಧತೆಯಿರಲಿ

ಪರಿಸರ ರಕ್ಷಣೆ ಮತ್ತು ಭೂಮಿಯ ಪಾಲನೆಯ ಬಗೆಗಿನ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿಕೊಳ್ಳಲು ವಿಶ್ವ ಪರಿಸರ ದಿನ ಸಕಾಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಪರಿಸರದೊಂದಿಗೆ ಬೆಸೆಯೋಣ

ಪರಿಸರದೊಂದಿಗೆ ಬೆಸೆಯಲು ಮತ್ತು ಆ ಮೂಲಕ ಆರೋಗ್ಯಕರ, ಸ್ವಚ್ಛ ಮತ್ತು ಮಾಲಿನ್ಯ ಮುಕ್ತ ಪರಿಸರವನ್ನು ಪಡೆಯಲು ವಿಶ್ವ ಪರಿಸರ ದಿನದಂದು ಪಣತೊಡೋಣ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.[15 ವರ್ಷಗಳ ಹಿಂದೆ ಹಸಿರು ಬೆಂಗಳೂರು ಹೇಗಿತ್ತು?]

ಪ್ಲಾಸ್ಟಿಕ್ ಮುಕ್ತವಾಗಿಸೋಣ

ನಮ್ಮ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪ್ರಯತ್ನಿಸೋಣ ಎಂದು ಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್, ಪರಳು ಶಿಲ್ಪದ ಮೂಲಕ ಜಾಗೃತಿ ಮೂಡಿಸಿದ್ದಾರೆ.

ಪರಿಸರ ನಮ್ಮೆಲ್ಲರ ಜೀವನ

ಪರಿಸರದ ಬಗ್ಗೆ ಕಾಳಜಿ ತೋರಿಸುವುದು ಹಂಗಿನ ಕೆಲಸ ಎಂದುಕೊಳ್ಳಬೇಕಿಲ್ಲ. ಪರಿಸರ ನಮ್ಮೆಲ್ಲರ ಜೀವನ ಎಂದು ಸದ್ಗುರು ಜಗ್ಗಿ ವಾಸುದೇವ ಟ್ವೀಟ್ ಮಾಡಿದ್ದಾರೆ.[ಅಣ್ಣಗಳಿರಾ ಅಕ್ಕಗಳಿರಾ ಇರುವುದೊಂದೇ ಭೂಮಿ]

ಸಂಕಷ್ಟದಲ್ಲಿರುವ ಪರಿಸರವ ಕಾಪಾಡೋಣ

ಪರಿಸರ ದಿನದ ಶುಭಾಶಯಗಳು. ಪರಿಸರ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಪ್ರತಿಯೊಬ್ಬರೂ ಪರಿಸರದೊಂದಿಗೆ ಬೆಸೆಯುವುವದು ಜನರು ಮತ್ತು ಭೂಮಿಯ ಹಿತದೃಷ್ಟಿಯಿಂದಲೂ ಅತ್ಯಗತ್ಯ ಎಂದು ವಿಶ್ವಸಂಸ್ಥೆಯ ಪರಿಸರ ವಿಭಾಗದ ಮುಖ್ಯಸ್ಥ ಎರಿಕ್ ಸೊಲ್ಹೆಮ್ ಟ್ವೀಟ್ ಮಾಡಿದ್ದಾರೆ.[ಕಾಡು]

English summary
World is celebrating Environment day, today. 'Connecting People to Nature – in the city and on the land, from the poles to the equator' is the theme of 2017 world environment day. Here are some twitter statements on environment day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X