ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ- ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಲ್ಲ

|
Google Oneindia Kannada News

Recommended Video

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಲ್ಲವಂತೆ | Oneindia Kannada

ನವದೆಹಲಿ, ಅಕ್ಟೋಬರ್ 24: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಯುಪಿಎಯ ಒಮ್ಮತದ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆ 2019ನ್ನು ಎದುರಿಸಲಿದ್ದಾರೆ ಎಂಬ ಸುದ್ದಿ ಬಗ್ಗೆ ಕಾಂಗ್ರೆಸ್ಸಿನಲ್ಲೇ ಸ್ಪಷ್ಟತೆ ಇಲ್ಲ.

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲ್ಲ ಎಂದು ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಹೇಳಿದ್ದಾರೆ. ಆದರೆ, ರಾಹುಲ್ ಗಾಂಧಿಯೇ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ. ನಮ್ಮ ಪಕ್ಷದ ಅಧ್ಯಕ್ಷರೇ ಪ್ರಧಾನಿ ಅಭ್ಯರ್ಥಿ ಆಗುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ: ಚಿದಂಬರಂ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ: ಚಿದಂಬರಂ

ಇತ್ತೀಚೆಗೆ ಮಾಜಿ ಕೇಂದ ಸಚಿವ ಪಿ.ಚಿದಂಬರಂ ಅವರು ಸಿಎನ್ಎನ್ ನ್ಯೂಸ್ 18 ಜತೆ ಮಾತನಾಡಿ, ಪ್ರಧಾನಿ ಅಭ್ಯರ್ಥಿಯನ್ನು ಮಹಾಘಟಬಂಧನ್ ನ ಪಕ್ಷಗಳು ಒಮ್ಮತದಿಂದ ಆಯ್ಕೆಮಾಡಲಿವೆ. ಕಾಂಗ್ರೆಸ್ ಇನ್ನೂ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಲ್ಲ, ಒಂದಿಬ್ಬರು ಹೇಳುತ್ತಿದ್ದಾರೆ ಅಷ್ಟೆ, ಎಐಸಿಸಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ ಎಂದಿದ್ದರು.

Congress wont name Rahul Gandhi as PM candidate in 2019

ಈ ಬಗ್ಗೆ ಖರ್ಗೆ ಅವರು ಪ್ರತಿಕ್ರಿಯಿಸಿ, ಅವರ ಹೇಳಿಕೆ ವೈಯಕ್ತಿಕವಾದದ್ದು. ಯಾವ ಸಂದರ್ಭದಲ್ಲಿ ಮತ್ತು ಯಾವ ಅರ್ಥದಲ್ಲಿ ಚಿದಂಬರಂ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ರಾಹುಲ್ ಗಾಂಧಿಯವರೇ ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿಯೆನ್ನುವುದು ನಿಸ್ಸಂಶಯ ಎಂದಿದ್ದಾರೆ.

ಜೇಟ್ಲಿ ಮಗಳ ಖಾತೆಗೆ ಚೋಕ್ಸಿ ಹಣ ಹಾಕಿದ್ದಾರೆ: ರಾಹುಲ್ ಗಂಭೀರ ಆರೋಪ ಜೇಟ್ಲಿ ಮಗಳ ಖಾತೆಗೆ ಚೋಕ್ಸಿ ಹಣ ಹಾಕಿದ್ದಾರೆ: ರಾಹುಲ್ ಗಂಭೀರ ಆರೋಪ

ಪ್ರಧಾನಿ ಅಭ್ಯರ್ಥಿ ಘೋಷಿಸದಿರುವುದೇ ರಣತಂತ್ರ?: ಸುಮಾರು 14 ವರ್ಷಗಳ ಹಿಂದೆ ಅನುಸರಿಸದ ರಣತಂತ್ರವನ್ನು ಈಗಲೂ ಅನುಸರಿಸಲು ಯುಪಿಎ ಮುಂದಾಗಿದೆಯೇ? ಎನ್ಡಿಎಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಯಾವ ಅಭ್ಯರ್ಥಿಯನ್ನು ಹೆಸರಿಸದೆ ಚುನಾವಣೆ ಎದುರಿಸಲು ಕಾಂಗ್ರೆಸ್ ಮುಂದಾಗುವ ಸಾಧ್ಯತೆ ಹೆಚ್ಚಿದೆ ಈ ಬಗ್ಗೆ ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಕೂಡಾ ಸುಳಿವು ನೀಡಿದ್ದಾರೆ.

ಚೌಕಿದಾರ ಮೋದಿ ಹೃದಯದಲ್ಲಿ ಬಡವರಿಗೆ ಜಾಗವಿಲ್ಲ: ರಾಹುಲ್ ಗಾಂಧಿಚೌಕಿದಾರ ಮೋದಿ ಹೃದಯದಲ್ಲಿ ಬಡವರಿಗೆ ಜಾಗವಿಲ್ಲ: ರಾಹುಲ್ ಗಾಂಧಿ

2014ರ ಫಲಿತಾಂಶ: ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸಿವ ಅಲೈಯನ್ಸ್ (ಯುಪಿಎ) ಮೈತ್ರಿಕೂಟಕ್ಕೆ 2014ಕ್ಕೆ ಮಹಾ ಸೋಲು ಉಂಟಾಗಿತ್ತು. ಕೇವಲ 44 ಲೋಕಸಭಾ ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಶೇ 19.52ರಷ್ಟು ಮಾತ್ರ ಗಳಿಸಿತ್ತು.

English summary
The Congress party says it won't name Rahul Gandhi as the prime ministerial candidate of a prospective alliance in next year's general election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X