ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಈಗ ಅಧಿಕಾರದಲ್ಲಿರುವ 3 ರಾಜ್ಯಗಳಲ್ಲಿ ಹೀನಾಯ ಸೋಲು?

|
Google Oneindia Kannada News

ನವದೆಹಲಿ, ಮೇ 20: ಇತ್ತೀಚೆಗೆ ನಡೆದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಾಲಾಗಿದ್ದ 3 ರಾಜ್ಯಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಲಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಉತ್ತರ ಪ್ರದೇಶದಷ್ಟೇ ಈ ಬಾರಿ ಕುತೂಹಲ ಮೂಡಿಸಿದ್ದ ಮೂರು ರಾಜ್ಯಗಳೆಂದರೆ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ. ಈ ಹಿಂದೆ ಈ ಮೂರು ರಾಜ್ಯಗಳ ವಿಧಾನಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಜೊತೆಗೆ ಲೋಕಸಭೆಯಲ್ಲೂ ಪ್ರತಿಪಕ್ಷ ಮುಂಚೂಣಿಯಲ್ಲಿತ್ತು. ಆದರೆ ಕಳೆದ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು.

'ಎಕ್ಸಿಟ್ ಪೋಲ್ ನಂಬಬೇಡಿ, ಮೇ 23ಕ್ಕೆ ನಿಮಗೆ ಅಚ್ಚರಿ ಕಾದಿದೆ' 'ಎಕ್ಸಿಟ್ ಪೋಲ್ ನಂಬಬೇಡಿ, ಮೇ 23ಕ್ಕೆ ನಿಮಗೆ ಅಚ್ಚರಿ ಕಾದಿದೆ'

ಛತ್ತೀಸ್‌ಗಢದ 10 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನಾಲ್ಕಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ ಎಂದು ಸಮೀಕ್ಷೆಗಳು ಹೇಳಿವೆ. ಹೀಗಾಗಿ ಕಳೆದ ಬಾರಿ 9 ಸ್ಥಾನ ಗೆದ್ದಿದ್ದ ಬಿಜೆಪಿಗೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇಲ್ಲ.

Congress will loss 3 states in Lok sabha elections

ಛತ್ತೀಸ್‌ಗಢದಲ್ಲಿ ಏಕಾಂಗಿಯಾಗಿ ಅಧಿಕಾರಕ್ಕೆ ಬಂದಿದ್ದರೆ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಹುಮತದ ತೀರಾ ಸನಿಹಕ್ಕೆ ಬಂದು, ಇತರೆ ಸಣ್ಣಪಕ್ಷಗಳ ಬಲದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಹೀಗಾಗಿ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಇದೇ ಸಾಧನೆಯನ್ನು ಮುಂದುವರೆಸಲಿದೆ ಎಂದು ಹೇಳಲಾಗಿತ್ತು.

ಇಂಡಿಯಾ ಟುಡೇ - ಏಕ್ಸಿಸ್ ಎಕ್ಸಿಟ್ ಪೋಲ್: ದ.ಭಾರತದಲ್ಲಿ ಯಾರಿಗೆ ಮೇಲುಗೈ? ಇಂಡಿಯಾ ಟುಡೇ - ಏಕ್ಸಿಸ್ ಎಕ್ಸಿಟ್ ಪೋಲ್: ದ.ಭಾರತದಲ್ಲಿ ಯಾರಿಗೆ ಮೇಲುಗೈ?

ಇನ್ನು ಮಧ್ಯಪ್ರದೇಶದಲ್ಲಿ 29ರ ಪೈಕಿ 23 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ, ರಾಜಸ್ಥಾನದ 25 ಕ್ಷೇತ್ರಗಳ ಪೈಕಿ 22 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಹೆಚ್ಚೆಂದರೆ 15 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿವೆ. ಈ ಬಾರಿ ಬಿಜೆಪಿ 51 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.

English summary
Congress will lose 3 states Madhyapradesh, Rajasthan and Chhattisgarh In Lok Sabha elections even after assebly win.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X