ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಪ್ರಧಾನಿಯಾಗಲು ಮಿತ್ರಪಕ್ಷಗಳೇ ಬಿಡಲ್ಲ: ಅನಂತ್ ಕುಮಾರ್

By Mahesh
|
Google Oneindia Kannada News

ನವದೆಹಲಿ, ಜುಲೈ 25: 'ಕಾಂಗ್ರೆಸ್ ನಿಂದಲೇ ಪ್ರಧಾನಿ ಆಗಬೇಕೆಂದಿಲ್ಲ. ಮಿತ್ರ ಪಕ್ಷಗಳ ಪೈಕಿ ಯಾರೇ ಪ್ರಧಾನಿ ಆದರೂ ಚಿಂತೆಯಿಲ್ಲ. ಆದರೆ ಬಿಜೆಪಿ ಅಥವಾ ಆರೆಸ್ಸೆಸ್ ಬೆಂಬಲದ ಯಾವುದೇ ಪಕ್ಷ ಅಧಿಕಾರಕ್ಕೆ ಬರಬಾರದು' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಉದಾರತೆ ಮೆರೆದಿದ್ದರ ಬಗ್ಗೆ ಸಂಸದ ಅನಂತ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.

ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮುನ್ನ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಅನಂತಕುಮಾರ್, ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ - ಮಿತ್ರಪಕ್ಷಗಳಿಂದ ಬೆಂಬಲ ಎಂದಿಗೂ ಸಿಗುವುದಿಲ್ಲ. ಸಿಡಬ್ಯೂಸಿ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಪಟ್ಟಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

ಲೋಕಸಮರದಲ್ಲಿ ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್ 'ಉದಾರ ನೀತಿ'ಲೋಕಸಮರದಲ್ಲಿ ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್ 'ಉದಾರ ನೀತಿ'

ಆದರೆ, ಕಾಂಗ್ರೆಸ್ ಕೇಂದ್ರೀಯ ಸಮಿತಿ ಸಭೆಯ ನಿರ್ಧಾರದ ನಂತರ ಪ್ರತಿಪಕ್ಷಗಳಲ್ಲಿ ಊಹೆಗೂ ಹೆಚ್ಚು ವ್ಯತಿರಿಕ್ತ ಪ್ರತಿಕ್ರಿಯೆ ಬಂದಿದೆ. ಕಾಂಗ್ರೆಸ್ ನಿರ್ಧಾರದ ದಿನವೇ ನಾವು ಪ್ರತಿಪಕ್ಷಗಳಲ್ಲಿ ಈ ನಿರ್ಧಾರದ ಮೇಲೆ ಬಿರುಕು ಉಂಟಾಗುವ ನಿರೀಕ್ಷೆಯನ್ನು ಹೊಂದಿದ್ದೆವು. ಇಷ್ಟು ಬೇಗ ಅದರ ಪರಿಣಾಮ ಹೊರಬೀಳುತ್ತದೆ ಎನ್ನುವುದನ್ನು ನಾವೂ ಊಹಿಸಿರಲಿಲ್ಲ ಎಂದರು.

Congress want Rahul Gandhi as Prime Minister, allies think alike : Anath Kumar

ರಾಹುಲ್ ಗಾಂಧಿ ತಮ್ಮ ಉಮೇದುವಾರಿಕೆಯನ್ನು ಪ್ರತಿಪಕ್ಷಗಳು ಸ್ವೀಕರಿಸುತ್ತಿಲ್ಲಾ ಎನ್ನುವುದನ್ನು ಮನಗೊಂಡಿದ್ದಾರೆ
. ಹೀಗಾಗಿ, ಉದಾರತೆ ಮಾತುಗಳು ಹೊರ ಬಂದಿವೆ. ಪ್ರತಿಪಕ್ಷಗಳ ವ್ಯತಿರಿಕ್ತ ಪ್ರತಿಕ್ರಿಯೆಗಳಿಂದ ಕಾಂಗ್ರೆಸ್ ಪಕ್ಷ ಹತಾಶೆಯಿಂದ ಯಾರು ಬೇಕಾದರೂ ಪ್ರಧಾನಿ ಪಟ್ಟಕ್ಕೇರಬಹುದು ಎನ್ನುವ ಹೇಳಿಕೆಯನ್ನು ನೀಡಿದೆ.

ಲೋಕಸಭೆ ಚುನಾವಣೆ 2019: ಸಿದ್ದರಾಮಯ್ಯ ಹೆಗಲಿಗೆ ರಾಜ್ಯ ಉಸ್ತುವಾರಿಲೋಕಸಭೆ ಚುನಾವಣೆ 2019: ಸಿದ್ದರಾಮಯ್ಯ ಹೆಗಲಿಗೆ ರಾಜ್ಯ ಉಸ್ತುವಾರಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ಮೇಲೆ ಹಕ್ಕುಚ್ಯುತಿ ಮಂಡನೆಯ ವಿಷಯದಲ್ಲಿ ಯಾವುದೇ ಹುರಳಿಲ್ಲ. ಈ ನಿಲುವಳಿ ಸೂಚನೆಯನ್ನು ಮುಂದುವರೆಸಿದ್ದೇ ಆದಲ್ಲಿ ಕಾಂಗ್ರೆಸ್ಸಿಗೆ ಮತ್ತೊಮ್ಮೆ ಮುಖಭಂಗ ಅನುಭವಿಸಲಿದೆ ಹಾಗೂ ಅವರ ಸತ್ಯಾಸತ್ಯತೆ ಮತ್ತೊಮ್ಮೆ ಹೊರಬೀಳಿದೆ ಎಂದರು.

English summary
The Congress would like Rahul Gandhi to be the next Prime Minister the after the 2019 Lok Sabha election. But, alliance won't allow this happen said Union Minister Ananth Kumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X