ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Haath Se Haath Jodo: ಭಾರತ್ ಜೋಡೋ ಬೆನ್ನಲ್ಲೇ ಯುಪಿಯಲ್ಲಿ ಹಾಥ್ ಸೇ ಹಾಥ್ ಜೋಡೋ ಅಭಿಯಾನ ಆರಂಭಿಸಿದ ಕಾಂಗ್ರೆಸ್

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಮುಗಿಯುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಮತ್ತೊಂದು ಯಾತ್ರೆ ಆರಂಭಿಸಿದ ಪಕ್ಷ. ಮಾಹಿತಿಗಾಗಿ ಮುಂದೆ ಓದಿ.

|
Google Oneindia Kannada News

ಲಕ್ನೋ, ಜನವರಿ. 29: 2024 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಜನರನ್ನು ತಲುಪಲು ಕಾಂಗ್ರೆಸ್ ತನ್ನ 'ಭಾರತ್ ಜೋಡೋ ಯಾತ್ರೆ'ಯ ಮುಂದಿನ ಭಾಗವಾಗಿ ಉತ್ತರ ಪ್ರದೇಶದಲ್ಲಿ 'ಹಾಥ್ ಸೇ ಹಾಥ್ ಜೋಡೋ' ಅಭಿಯಾನವನ್ನು ಪ್ರಾರಂಭಿಸಿದೆ.

ಹಾಥ್ ಸೇ ಹಾಥ್ ಜೋಡೋ ರಾಜ್ಯ ಮಟ್ಟದ ಅಭಿಯಾನವಾಗಿದ್ದು, ಕಾಂಗ್ರೆಸ್‌ನ ಭವಿಷ್ಯವನ್ನು ಬಲಪಡಿಸುತ್ತದೆ. ಈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ಸಾಗಿದ ಭಾರತ್ ಜೋಡೋ ಯಾತ್ರೆಯ ವಿಸ್ತರಣೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರುBharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು

ಈ ಹೊಸ ಅಭಿಯಾನವು ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಗಟ್ಟಿಯಾಗಿಸಲು ನಡೆಸಲಾಗುತ್ತಿದೆ. 542 ಸದಸ್ಯರ ಲೋಕಸಭೆಗೆ ಉತ್ತರ ಪ್ರದೇಶದಿಂದ 80 ಸದಸ್ಯರು ಆಯ್ಕೆಯಾಗಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ 'ಭಾರತ್ ಜೋಡೋ ಯಾತ್ರೆ' ಅಂತಿಮ ಹಂತದಲ್ಲಿದ್ದು, ಭಾನುವಾರ ನಗರದ ಲಾಲ್ ಚೌಕ್‌ನಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ.

ಎರಡು ತಿಂಗಳು ನಡೆಯಲಿರುವ 'ಹಾಥ್ ಸೇ ಹಾಥ್ ಜೋಡೋ'

ಎರಡು ತಿಂಗಳು ನಡೆಯಲಿರುವ 'ಹಾಥ್ ಸೇ ಹಾಥ್ ಜೋಡೋ'

ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಾಥ್ ಸೇ ಹಾಥ್ ಜೋಡೋ ಅಭಿಯಾನದ ಭಾಗವಾಗಿ ಫೆಬ್ರವರಿಯಲ್ಲಿ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

'ಹಾಥ್ ಸೇ ಹಾಥ್ ಜೋಡೋ' ಅಭಿಯಾನವು ಕೇಂದ್ರ ಸರ್ಕಾರದ ವೈಫಲ್ಯಗಳ ತಳಮಟ್ಟದ ಜನರಿಗೆ ತಿಳಿಸುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮುಂದಿನ ಎರಡು ತಿಂಗಳ ಅವಧಿಯಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸಲು ರಾಜ್ಯಾದ್ಯಂತ ಹಳ್ಳಿಗಳು, ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲಿ ಅಭಿಯಾನ ನಡೆಸಲಿದ್ದಾರೆ.

ರೈತರು, ಯುವಕರ ಸಮಸ್ಯೆಗಳನ್ನು ಜನರ ಮುಂದಿಡುತ್ತೇವೆ

ರೈತರು, ಯುವಕರ ಸಮಸ್ಯೆಗಳನ್ನು ಜನರ ಮುಂದಿಡುತ್ತೇವೆ

"ಸಮಾಜದಲ್ಲಿ ಕಂಡುಬರುವ ದ್ವೇಷ ಮತ್ತು ಉತ್ತರ ಪ್ರದೇಶದ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಜನರಿಗೆ ತಿಳಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ನಾವು ರೈತರ ಆತ್ಮಹತ್ಯೆ, ಯುವಜನತೆಗೆ ಆಗಿರುವ ದ್ರೋಹ, ಅವರ ಕನಸುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಗೆ ಛಿದ್ರಗೊಳಿಸಿವೆ ಎಂಬ ವಿಷಯಗಳ ಕುರಿತು ಸರ್ಕಾರದ ವಿರುದ್ಧ 'ಚಾರ್ಜ್ ಶೀಟ್'ನಲ್ಲಿ ಕೆಲವು ಸಂಗತಿಗಳನ್ನು ಮಂಡಿಸಿದ್ದೇವೆ" ಎಂದು ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ 849 ಬ್ಲಾಕ್‌ಗಳ ಉಸ್ತುವಾರಿಗಳನ್ನು ಪ್ರಚಾರಕ್ಕೆ ಅಂತಿಮಗೊಳಿಸಲಾಗಿದೆ. ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಗ್ರಾಮದಿಂದ ಗ್ರಾಮಕ್ಕೆ ತೆರಳಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.

ಸಾರ್ವಜನಿಕ ಕಲ್ಯಾಣ ವಿಷಯಗಳ ಕುರಿತು ಜನರಿಗೆ ತಿಳುವಳಿಕೆ

ಸಾರ್ವಜನಿಕ ಕಲ್ಯಾಣ ವಿಷಯಗಳ ಕುರಿತು ಜನರಿಗೆ ತಿಳುವಳಿಕೆ

'ಕಾಂಗ್ರೆಸ್ ಮಾಜಿ ಸಂಸದರು, ಶಾಸಕರು, ಎಂಎಲ್‌ಸಿಗಳು ಹಾಗೂ ಪ್ರಾದೇಶಿಕ ಅಧ್ಯಕ್ಷರು ಮತ್ತು ಯುಪಿಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ 'ಹಾಥ್ ಸೇ ಹಾಥ್ ಜೋಡೋ ಯಾತ್ರೆ' ಮೂಲಕ ಸಾರ್ವಜನಿಕ ಕಲ್ಯಾಣ ವಿಷಯಗಳನ್ನು ತೆಗೆದುಕೊಂಡು ಜನರ ಮುಂದಿಡುತ್ತೇವೆ' ಎಂದು ಅಶೋಕ್ ಸಿಂಗ್ ಹೇಳಿದ್ದಾರೆ.

ಹರಿಯಾಣದ ರಾಜ್ಯಸಭಾ ಸಂಸದ ಮತ್ತು ಉತ್ತರ ಪ್ರದೇಶದ ಈ ಪ್ರಚಾರದ ಉಸ್ತುವಾರಿ ದೀಪೇಂದರ್ ಹೂಡಾ ಅವರು ಒಂದೆರಡು ದಿನಗಳಲ್ಲಿ ಲಕ್ನೋಗೆ ಬರಲಿದ್ದಾರೆ. ಕೇಂದ್ರ ಮತ್ತು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ಹಳ್ಳಿಗಳಲ್ಲಿ ಸಭೆಗಳನ್ನು ಆಯೋಜಿಸುವ ಮೂಲಕ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ನಿರುದ್ಯೋಗ, ಹಣದುಬ್ಬರ, ಬಿಜೆಪಿ ಸರ್ಕಾರ ನಡೆಸಿದ ದೌರ್ಜನ್ಯ ವಿವರಣೆ

ನಿರುದ್ಯೋಗ, ಹಣದುಬ್ಬರ, ಬಿಜೆಪಿ ಸರ್ಕಾರ ನಡೆಸಿದ ದೌರ್ಜನ್ಯ ವಿವರಣೆ

ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಹಾಲಿ ಹಾಗೂ ಮಾಜಿ ಸಚಿವರು, ಸಂಸದರು, ಶಾಸಕರಿಗೆ ಜಿಲ್ಲಾ ಸಮನ್ವಯಾಧಿಕಾರಿಗಳ ಜವಾಬ್ದಾರಿ ನೀಡಲಾಗಿದೆ. ಪಕ್ಷದ ಎಲ್ಲಾ ಪ್ರಾಂತೀಯ ಅಧ್ಯಕ್ಷರು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಕಾಂಗ್ರೆಸ್‌ನ ಪಶ್ಚಿಮ ಉತ್ತರ ಪ್ರದೇಶ ಘಟಕದ ಮುಖ್ಯಸ್ಥ ನಸೀಮುದ್ದೀನ್ ಸಿದ್ದಿಕಿ ತಿಳಿಸಿದ್ದಾರೆ.

ಜನರಿಗೆ ಹಸ್ತಾಂತರಿಸಲಿರುವ ರಾಹುಲ್ ಗಾಂಧಿಯವರ ಪತ್ರವು ನಿರುದ್ಯೋಗ, ಹಣದುಬ್ಬರ ಮತ್ತು ಬಿಜೆಪಿ ಸರ್ಕಾರ ನಡೆಸಿದ ದೌರ್ಜನ್ಯದ ಸಮಸ್ಯೆಗಳನ್ನು ಎತ್ತಿ ಹಿಡಿಯಲಿದೆ. ಇದರ ಜೊತೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ತಮ್ಮ ಪ್ರಯಾಣದ ಸಮಯದಲ್ಲಿನ ಅನುಭವಗಳನ್ನು ವಿವರಿಸುತ್ತದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

'ಭಾರತ್ ಜೋಡೋ ಯಾತ್ರೆ' ಯು ಬ್ಲಾಕ್‌ಗಳ ಮಟ್ಟಕ್ಕೆ ತಲುಪಲಿರುವ "ಹಾಥ್ ಸೆ ಹಾಥ್ ಜೋಡೋ ಯಾತ್ರೆಯಾಗಿದೆ. ಈ ಅಭಿಮಾನದಲ್ಲಿ ಪ್ರತಿ ಮನೆಗೆ ಭೇಟಿ ನೀಡಲಾಗುತ್ತದೆ. ರಾಹುಲ್ ಗಾಂಧಿಯವರ ಪತ್ರವನ್ನು ಹಸ್ತಾಂತರಿಸಲಾಗುತ್ತದೆ. ಈ ಎರಡು ತಿಂಗಳ ಅವಧಿಯಲ್ಲಿ ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ 'ಎಂದು ನಸೀಮುದ್ದೀನ್ ಸಿದ್ದಿಕಿ ಹೇಳಿದ್ದಾರೆ.

English summary
Congress Launches 'Haath Se Haath Jodo' campaign in Uttar Pradesh to Connect people in the hinterlands ahead of the 2024 Lok Sabha elections. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X