ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ತಂತ್ರ ಬಳಸುತ್ತಿರುವ ಕಾಂಗ್ರೆಸ್‌!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 29: ಲೋಕಸಭೆ ಚುನಾವಣೆಗೆ ಅರ್ಧ ವರ್ಷವೂ ಇಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಈಗಾಗಲೇ ತಂತ್ರಗಳನ್ನು ಹೆಣೆಯುತ್ತಿವೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಧೂಳಿಪಟವಾಗಿರುವ ಕಾಂಗ್ರೆಸ್‌ಗೆ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಹೇಗಾದರೂ ಮಾಡಿ ಈ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಲೇ ಬೇಕಿದೆ. ಹಾಗಾಗಿ ಅದು ಹೆಚ್ಚಿನ ಜಾಗೃತೆಯನ್ನು ಈ ಚುನಾವಣೆಯಲ್ಲಿ ವಹಿಸುತ್ತಿದೆ.

ಈ ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಪಕ್ಷವು ಹಲವು ತಂತ್ರಗಳನ್ನು ಹೆಣೆಯುತ್ತಿದ್ದು, ಅದರಲ್ಲಿ ಒಂದು ತಂತ್ರವನ್ನು ಬಿಜೆಪಿಯಿಂದಲೇ ಎರವಲು ಪಡೆದಿದೆ.

BSP ಜೊತೆ ಮೈತ್ರಿಗೆ ಕಾಂಗ್ರೆಸ್ ನಿಂದಲೇ ಹೈಕಮಾಂಡ್ ಗೆ ಒತ್ತಡ BSP ಜೊತೆ ಮೈತ್ರಿಗೆ ಕಾಂಗ್ರೆಸ್ ನಿಂದಲೇ ಹೈಕಮಾಂಡ್ ಗೆ ಒತ್ತಡ

ಹೌದು, ಕಳೆದ ಲೋಕಸಭೆ ಚುನಾವಣೆ ಗೆಲ್ಲಲುನ ಬಿಜೆಪಿ ಅನುಸರಿಸಿದ್ದ ರಣತಂತ್ರವನ್ನೇ ಕಾಂಗ್ರೆಸ್ ಈ ಬಾರಿ ಅನುಸರಿಸಲು ಮುಂದಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಬೂತ್‌ ಮಟ್ಟದಲ್ಲಿ ಭಾರಿ ಸಂಖ್ಯೆಯ ಕಾರ್ಯಕರ್ತರನ್ನು ಪ್ರಚಾರಕ್ಕೆ ತೊಡಗಿಸಿತ್ತು. ಇದು ಆ ಪಕ್ಷಕ್ಕೆ ಭಾರಿ ಸಹಕಾರಿಯಾಗಿತ್ತು.

ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು

ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು

ಬಿಜೆಪಿ ಕಾರ್ಯಕರ್ತರು ಹಾಗೂ ಆರ್‌ಎಸ್‌ಎಸ್‌ ಸೇರಿ ಬೂತ್‌ ಮಟ್ಟದ ಪ್ರಚಾರ ಜವಾಬ್ದಾರಿಯನ್ನು ಹೊತ್ತಿದ್ದರು. ಅದು ಬಿಜೆಪಿಗೆ ಬಹಳ ಸಹಾಯಕವಾಗಿತ್ತು. ಈಗ ಕಾಂಗ್ರೆಸ್ ಸಹ ಇದೇ ತಂತ್ರವನ್ನು ಅನುಸರಿಸಲು ಮುಂದಾಗಿದೆ.

ಲೋಕಸಭೆ ಚುನಾವಣೆ ನಂತರ ಯಡಿಯೂರಪ್ಪ ಮೂಲೆಗುಂಪಾಗಲಿದ್ದಾರಾ?ಲೋಕಸಭೆ ಚುನಾವಣೆ ನಂತರ ಯಡಿಯೂರಪ್ಪ ಮೂಲೆಗುಂಪಾಗಲಿದ್ದಾರಾ?

ಕೋಟಿಗೂ ಹೆಚ್ಚು ಬೂತ್ ಕಾರ್ಯಕರ್ತರ ನೇಮಕ

ಕೋಟಿಗೂ ಹೆಚ್ಚು ಬೂತ್ ಕಾರ್ಯಕರ್ತರ ನೇಮಕ

ಬೂತ್‌ ಮಟ್ಟದಲ್ಲಿ ಒಂದು ಕೋಟಿಗೂ ಹೆಚ್ಚು ಕಾರ್ಯಕರ್ತರನ್ನು ನೇಮಿಸಲು ಕಾಂಗ್ರೆಸ್‌ ಹೈಕಮಾಂಡ್ ಯೋಜನೆ ರೂಪಿಸುತ್ತಿದೆ. ಜೊತೆಗೆ ಬೂತ್‌ ಮಟ್ಟದ ಕಾರ್ಯಕರ್ತರನ್ನು ಸಾಮಾಜಿಕ ಜಾಲತಾಣದ ಮೂಲಕ ನಿರಂತರ ಸಂಪರ್ಕದಲ್ಲಿರುವಂತೆ ಮಾಡುವ ಬಗ್ಗೆ ಯೋಜನೆ ತಯಾರಾಗುತ್ತಿದೆ.

ಲೋಕಸಭೆ ಚುನಾವಣೆ : ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಅಧಿಕೃತ ಒಪ್ಪಿಗೆಲೋಕಸಭೆ ಚುನಾವಣೆ : ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಅಧಿಕೃತ ಒಪ್ಪಿಗೆ

ವಿಧಾನಸಭೆ ಚುನಾವಣೆಯಲ್ಲಿ ಪ್ರಯೋಗ

ವಿಧಾನಸಭೆ ಚುನಾವಣೆಯಲ್ಲಿ ಪ್ರಯೋಗ

ಈ ವರ್ಷಾಂತ್ಯ ಹಾಗೂ 2019 ರ ಆರಂಭದಲ್ಲಿ ನಡೆಯುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಇದನ್ನು ಕಾರ್ಯರೂಪಕ್ಕೆ ತರಲು ಕಾಂಗ್ರೆಸ್ ನಿರ್ಧಾರಿಸಿದೆ. ಭಾರಿ ಸಂಖ್ಯೆಯ ವಾಟ್ಸ್‌ಆಫ್‌ ಹಾಗೂ ಫೇಸ್‌ಬುಕ್ ಗ್ರೂಫ್‌ಗಳನ್ನು ನಿರ್ಮಿಸಲು ಸಹ ಕಾಂಗ್ರೆಸ್ ಐಟಿ ಸೆಲ್‌ಗೆ ನಿರ್ದೇಶನಗಳನ್ನು ನೀಡಲಾಗಿದೆ.

ಬೂತ್ ಮಟ್ಟದ ಪ್ರಚಾರವೇ ಪ್ರಮುಖ ಆಯುಧ

ಬೂತ್ ಮಟ್ಟದ ಪ್ರಚಾರವೇ ಪ್ರಮುಖ ಆಯುಧ

ಕಳೆದ ಬಾರಿ ಬೂತ್‌ ಮಟ್ಟದ ಪ್ರಚಾರ, ಸಾಮಾಜಿಕ ಜಾಲತಾಣಗಳ ಸೂಕ್ತ ಬಳಕೆ ಹಾಗೂ ಮೋದಿ ಹವಾ ಮೂರು ಅಂಶಗಳಿಂದ ಬಿಜೆಪಿ ಭಾರಿ ಬಹುಮತ ಪಡೆದಿತ್ತು. ಈಗ ಅದೇ ಬೂತ್‌ ಮಟ್ಟದ ಪ್ರಚಾರ, ಹಾಗೂ ಸಾಮಾಜಿಕ ಜಾಲತಾಣ ಹಾಗೂ ಮೋದಿ ವಿರುದ್ಧ ಪ್ರಚಾರವನ್ನು ಕಾಂಗ್ರೆಸ್‌ ಈ ಲೋಕಸಭೆ ಚುನಾವಣೆಯಲ್ಲಿ ಬಳಸಲಿದೆ.

English summary
Congerss reqruiting more than one crore booth level party workers to campaign for Lok Saba elections 2019. Same strategy used by BJP in last Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X