ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಕಾಂಗ್ರೆಸ್ ಪ್ರಣಾಳಿಕೆ, ಪೆಟ್ರೋಲ್, ಡೀಸೆಲ್ 10 ರು. ಅಗ್ಗ

By Mahesh
|
Google Oneindia Kannada News

ಅಹಮದಾಬಾದ್, ಡಿಸೆಂಬರ್ 04 : ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಗಳ ಮುಖಂಡರ ವೈಯಕ್ತಿಕ ವಾಗ್ದಾಳಿ, ವಿಡಿಯೋ ವಾರ್, ಮೀಸಲಾತಿ ಸಮರದ ನಡುವೆ ಈಗ ಪ್ರಣಾಳಿಕೆ ಬಗ್ಗೆ ಭಾರಿ ಕುತೂಹಲ ಹುಟ್ಟಿಕೊಂಡಿದೆ.

ಕಾಂಗ್ರೆಸ್ ಅಧ್ಯಕ್ಷೆ ಭರತ್ ಸಿಂಗ್ ಸೋಲಂಕಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಮತ್ತು ರಣೀಪ್ ಸುರ್ಜೆವಾಲ್ ಉಪಸ್ಥಿತಿಯಲ್ಲಿ ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಗುಜರಾತ್ ಅನ್ನು ಎಲ್ಲರೂ ನೈಜ ಅರ್ಥದಲ್ಲಿ ಅಭಿವೃದ್ಧಿಪಡಿಸುವುದಾಗಿ ಪಕ್ಷದ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಸ್ಯಾಮ್ ಪಿಟ್ರೋಡಾ ಮತ್ತು ಮಧುಸೂದನ್ ಮಿಸ್ತ್ರಿ ಈ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದಾರೆ ಎಂಬುದು ಗಮನಾರ್ಹ ಸಂಗತಿ.

Congress releases Manifesto for Gujarat Election 2017


ಪ್ರಣಾಳಿಕೆಯ ಮುಖ್ಯಾಂಶಗಳು:

* ಅಧಿಕಾರಕ್ಕೆ ಬಂದ ನಂತರ ರೈತರ ಮೇಲಿನ ಎಲ್ಲಾ ಸಾಲಮನ್ನಾ ಮಾಡಲಾಗುವುದು. 16 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ನೀಡಲಾಗುವುದು.

* ಪಾಟೀದರ್ ಸಮುದಾಯದವರಿಗೆ ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅವಕಾಶ.

* ಮಾರಾಟ ತೆರಿಗೆ ಇಳಿಸುವುದರಿಂದ ಪೆಟ್ರೋಲ್, ಡೀಸೆಲ್ ದರ 10 ರು.ನಷ್ಟು ಅಗ್ಗವಾಗಲಿದೆ.

* ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗು ಸ್ಮಾರ್ಟ್ ಫೋನ್ ವಿತರಣೆ.

* 32 ಲಕ್ಷ ಯುವಕರಿಗೆ ಉದ್ಯೋಗ ನೀಡಲು 32,000 ಕೋಟಿ ರು ಪ್ಯಾಕೇಜ್. ನಿರುದ್ಯೋಗಿಗಳಿಗೆ 4,000ರು ಭತ್ಯೆ.

* ಮಹಿಳೆಯರ ವಿರುದ್ಧದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ.

* ಎಸ್ ಸಿ, ಎಸ್ಟಿ ಹಾಗೂ ಒಬಿಸಿ ಸಮುದಾಯಗಳ ಮೀಸಲಾತಿಯಲ್ಲಿನ ಗೊಂದಲಕ್ಕೆ ಪರಿಹಾರ.

English summary
Gujarat Congress released its Manifesto for Gujarat Election 2017. Congress has promised complete loan waiver for farmers, reduction in petrol price, laptop to college students, employment to 32 lakh youth, reservation for Patidar community in Education and Employment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X