ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ವಲಸಿಗರಿಗೆ ಕಾಂಗ್ರೆಸ್ ರಕ್ಷಣೆ?: ವಿಕಿಲೀಕ್ಸ್ ಮಾಹಿತಿ ಬಹಿರಂಗ

|
Google Oneindia Kannada News

ನವದೆಹಲಿ, ಆಗಸ್ಟ್ 3: ಮತ ಬ್ಯಾಂಕ್‌ಗಾಗಿ ಅಸ್ಸಾಂನಲ್ಲಿರುವ ಅಕ್ರಮ ವಲಸಿಗರಿಗೆ ರಕ್ಷಣೆ ನೀಡಲು ಕಾಂಗ್ರೆಸ್ ಮುಂದಾಗಿತ್ತೇ? ಹೌದು ಎನ್ನುತ್ತಿದೆ ವಿಕಿಲೀಕ್ಸ್ ಬಹಿರಂಗಪಡಿಸಿರುವ ಮಾಹಿತಿ.

ಗಡಿಯೊಳಗೆ ಅಕ್ರಮವಾಗಿ ಒಳನುಸುಳಿ ಬಂದಿದ್ದ ಬಾಂಗ್ಲಾದೇಶದ ವಲಸಿಗರನ್ನು ಮತಬ್ಯಾಂಕ್‌ಆಗಿ ಪರಿವರ್ತಿಸಿಕೊಳ್ಳಲು ಕಾಂಗ್ರೆಸ್ ತಂತ್ರ ರೂಪಿಸಿತ್ತು ಎಂದು ವಿಕಿಲೀಕ್ಸ್ ಮಾಹಿತಿ ತಿಳಿಸಿದೆ.

ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರ

2006ರ ಮೇ ತಿಂಗಳಿನಲ್ಲಿ ಅಸ್ಸಾಂನಲ್ಲಿನ ನಡೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವುದನ್ನು ತಡೆಯಲು ವಿದೇಶಿಗರ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಹೇಳುವ ಮೂಲಕ ವಲಸಿಗ ಮುಸ್ಲಿಮರಿಗೆ ಭರವಸೆ ನೀಡಿದ್ದರು ಎಂದು ವಿಕಿಲೀಕ್ಸ್ ಹೇಳಿದೆ.

congress protection of illegal bangladeshi migrants wikileaks revealed

2005ರ ಜುಲೈನಲ್ಲಿ ಅಕ್ರಮ ವಲಸಿಗರ ಕಾಯ್ದೆ ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರಿಂದ ಕಾಂಗ್ರೆಸ್‌ಗೆ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಕಳೆದುಕೊಳ್ಳುವ ಭೀತಿ ಎದುರಾಗಿತ್ತು.

ಈ ಕಾಯ್ದೆಯಲ್ಲಿ ಅಸ್ಸಾಂನಲ್ಲಿರುವ ವಿದೇಶಿಗರನ್ನು ಗುರುತಿಸುವುದು, ಪತ್ತೆ ಮಾಡುವುದು ಮತ್ತು ಗಡಿಪಾರು ಮಾಡುವುದು ಒಳಗೊಂಡಿತ್ತು. ಅಲ್ಲದೆ, 1971ರ ಬಳಿಕ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ರಕ್ಷಿಸುವ ಅಂಶವೂ ಇದರಲ್ಲಿತ್ತು.

ಆದರೆ, ವಿದೇಶಿ ಕಾಯ್ದೆಯನ್ನು ಜಾರಿಗೆ ತರದೇ ಇರುವ ಮೂಲಕ ಮುಸ್ಲಿಮರನ್ನು ಓಲೈಸಲು ಕಾಂಗ್ರೆಸ್ ಮುಂದಾಗಿತ್ತು. ಚುನಾವಣೆ ಸಂದರ್ಭದ ಭೇಟಿಯಲ್ಲಿ ಸೋನಿಯಾ ಗಾಂಧಿ, ಕಾಯ್ದೆಗೆ ತಿದ್ದುಪಡಿ ತರುವುದಾಗಿ ಹೇಳಿದ್ದರು.

ಅಸ್ಸಾಂನಲ್ಲಿ ಬಾಂಗ್ಲಾದೇಶಿ ವಲಸಿಗರ ಕಾರಣದಿಂದ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿನ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ 13 ಮುಸ್ಲಿಂ ಶಾಸಕರಿದ್ದಾರೆ.

ಹಾಗೆಯೇ, ಗಡಿಪಾರಿನಿಂದ ತಪ್ಪಿಸಿಕೊಳ್ಳಲು ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ ತಮ್ಮ ರಕ್ಷಣೆಗೆ ಬರುವ ಕಾಂಗ್ರೆಸ್‌ನ ಆಯ್ಕೆ ಕೂಡ ಅನಿವಾರ್ಯವಾಗಿತ್ತು ಎಂದು ವಿಕಿಲೀಕ್ಸ್ ಹೇಳಿದೆ.

English summary
WikiLeaks cable dated 2006 February 16, alleged that congress has tried to appease Muslims by not enforcing the Foreigners act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X