ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಷ್ಟದಲ್ಲಿರುವ ಕಾಂಗ್ರೆಸ್‌ನಿಂದ ಎರಡು ಬದಲಾವಣೆ, ಒಂದು ನಿರ್ಣಯ!

|
Google Oneindia Kannada News

Recommended Video

ಸಂಕಷ್ಟದಲ್ಲಿರುವ ಕಾಂಗ್ರೆಸ್‌ನಿಂದ ಎರಡು ಬದಲಾವಣೆ, ಒಂದು ನಿರ್ಣಯ! | Oneindia Kannada

ನವದೆಹಲಿ, ಜೂನ್ 29: ಕಾಂಗ್ರೆಸ್ ಪಕ್ಷ ಇಷ್ಟು ಸಂಕಷ್ಟದ ಪರಿಸ್ಥಿತಿಯಲ್ಲಿ ಹಿಂದೆಂದೂ ಬಂದಿರಲಿಲ್ಲ, ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿ ಹೇರಿದ ನಂತರ ನಡೆದ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್‌ 153 ಸೀಟುಗಳಲ್ಲಿ ಗೆದ್ದಿತ್ತು, ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿರುವುದು ಕೇವಲ 52 ಕ್ಷೇತ್ರಗಳಲ್ಲಿ.

ದಶಕಗಳ ಇತಿಹಾಸವಿರುವ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಪಕ್ಷಕ್ಕೆ ಇಂತಹಾ ಪರಿಸ್ಥಿತಿ ಬರುತ್ತದೆಂಬ ಊಹೆ ಹಿರಿಯ ರಾಜಕಾರಣಿಗಳಿಗೆ ಇರಲಿಲ್ಲ. ಆದರೀಗ ಕಾಂಗ್ರೆಸ್ ಅತ್ಯಂತ ಅಪಾಯದಲ್ಲಿದೆ. ಬದಲಾವಣೆ ತುರ್ತಾಗಿ ಆಗಬೇಕಾಗಿದೆ. ಹಾಗಾಗಿಯೇ ರಾಹುಲ್ ಗಾಂಧಿ ರಾಜೀನಾಮೆಯ ನಿರ್ಧಾರ ಮಾಡಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್ಸಿಗರೇ ಅಡ್ಡಿ ಪಡಿಸುತ್ತಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಮುಂದುವರಿಕೆ ಸಾಧ್ಯತೆ ಶೇ 1ರಷ್ಟೂ ಇಲ್ಲ: ಮೊಯ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಮುಂದುವರಿಕೆ ಸಾಧ್ಯತೆ ಶೇ 1ರಷ್ಟೂ ಇಲ್ಲ: ಮೊಯ್ಲಿ

ಆದರೆ ಕಾಂಗ್ರೆಸ್ ಹಿರಿತಲೆಗಳನ್ನು ರಾಹುಲ್ ಗಾಂಧಿ ಅವರು ಒಪ್ಪಿಸಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ಸನಿಹದ ಭವಿಷ್ಯದಲ್ಲಿ ಎರಡು ಪ್ರಮುಖ ಬದಲಾವಣೆ ಮತ್ತು ಒಂದು ಪ್ರಮುಖ ನಿರ್ಣಯವನ್ನು ಕೈಗೊಳ್ಳಲಿದೆ.

ತೆರೆಮರೆಗೆ ಸರಿಯಲಿದ್ದಾರೆಯೇ ರಾಹುಲ್?

ತೆರೆಮರೆಗೆ ಸರಿಯಲಿದ್ದಾರೆಯೇ ರಾಹುಲ್?

ಹೌದು, ಕಾಂಗ್ರೆಸ್ ನ ಪ್ರಸ್ತುತ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಟ್ಟದಿಂದ ಇಳಿದು ಕೇವಲ ಕಾಂಗ್ರೆಸ್‌ನ ಹಿರಿಯರಾಗಿ, ಮಾರ್ಗದರ್ಶಕರಾಗಿ, ಸಲಹೆ-ಸೂಚಕರಾಗಿ, ಸ್ಟಾರ್ ಪ್ರಚಾರಕರಾಗಿ ಮಾತ್ರವೇ ಉಳಿಯಲಿದ್ದಾರೆ.

ಗಾಂಧಿಗಳು ಕ್ಷಮೆ ಕೋರಬೇಕು: ಕಾಂಗ್ರೆಸ್‌ನ ಮಾಜಿ ಪ್ರಧಾನಿ ಮೊಮ್ಮಗ ಆಗ್ರಹಗಾಂಧಿಗಳು ಕ್ಷಮೆ ಕೋರಬೇಕು: ಕಾಂಗ್ರೆಸ್‌ನ ಮಾಜಿ ಪ್ರಧಾನಿ ಮೊಮ್ಮಗ ಆಗ್ರಹ

ರಾಹುಲ್ ಸ್ಥಾನ ತುಂಬಲಿದ್ದಾರಾ ಪ್ರಿಯಾಂಕಾ?

ರಾಹುಲ್ ಸ್ಥಾನ ತುಂಬಲಿದ್ದಾರಾ ಪ್ರಿಯಾಂಕಾ?

ಮತ್ತೊಂದು ಪ್ರಮುಖ ಬದಲಾವಣೆ ಎಂದರೆ, ಇನ್ನು ಮುಂದೆ ಕಾಂಗ್ರೆಸ್‌ನ ಮುಖವಾಗಿ ಪ್ರಿಯಾಂಕಾ ಗಾಂಧಿ ಅವರು ರಾಹುಲ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಆಗಲಿದ್ದಾರೆ. ಅಲ್ಲದೆ ಕಾಂಗ್ರೆಸ್‌ನ ಅತ್ಯಂತ ಪ್ರಮುಖ ಹುದ್ದೆಯನ್ನು ನಿಭಾಯಿಸಲಿದ್ದಾರೆ. ಅದು ಅಧ್ಯಕ್ಷ ಸ್ಥಾನವೂ ಆಗಿರಬಹುದು ಎನ್ನಲಾಗುತ್ತಿದೆ.

ಪಕ್ಷ ಸಂಘಟಿಸಲು ಪ್ರಮುಖ ನಿರ್ಣಯ

ಪಕ್ಷ ಸಂಘಟಿಸಲು ಪ್ರಮುಖ ನಿರ್ಣಯ

ಇನ್ನೂ ಪ್ರಮುಖ ನಿರ್ಣಯವನ್ನೊಂದು ಕಾಂಗ್ರೆಸ್ ತಳೆಯಲಿದ್ದು, ಇಡೀಯ ದೇಶದಾದ್ಯಂತ ರಾಜ್ಯವಾರು ಪಾದಯಾತ್ರೆಯಲ್ಲಿ ಕಾಂಗ್ರೆಸ್ ಹಮ್ಮಿಕೊಳ್ಳುವ ಭಾರಿ ಬೃಹತ್ ಯೋಜನೆ ರೂಪಿಸುತ್ತಿದೆ. ಕಳೆದು ಹೋಗಿರುವ ಪಕ್ಷದ ವರ್ಚಸ್ಸನ್ನು ಪುನರ್‌ ಸ್ಥಾಪಿಸಲು ಪಾದಯಾತ್ರೆ ಅತ್ಯಂತ ಅವಶ್ಯಕ ಎಂದು ಕಾಂಗ್ರೆಸ್‌ನ ಯೋಚನಾ ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಹಿರಿಯ ಕಾಂಗ್ರೆಸ್ಸಿಗರನ್ನು ಬೆಚ್ಚುವಂತೆ ಮಾಡಿದ ರಾಹುಲ್ ನಿರ್ಧಾರಹಿರಿಯ ಕಾಂಗ್ರೆಸ್ಸಿಗರನ್ನು ಬೆಚ್ಚುವಂತೆ ಮಾಡಿದ ರಾಹುಲ್ ನಿರ್ಧಾರ

ಲೋಕಸಭೆ ಚುನಾವಣೆ ನಂತರ ಸಾಕಷ್ಟು ಬದಲಾವಣೆ

ಲೋಕಸಭೆ ಚುನಾವಣೆ ನಂತರ ಸಾಕಷ್ಟು ಬದಲಾವಣೆ

ಈಗಾಗಲೇ ಲೋಕಸಭೆ ಚುನಾವಣೆ ನಂತರ ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ನಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ಕಡೆ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರನ್ನೇ ಬದಲಾವಣೆ ಮಾಡಲಾಗಿದೆ. ಇನ್ನು ಕೆಲವು ಕಡೆ ಅಧ್ಯಕ್ಷರೇ ಮುಂದುವರೆದು ರಾಜೀನಾಮೆ ನೀಡಿ ಹೋಗಿದ್ದಾರೆ. ಕರ್ನಾಟಕದಲ್ಲಿ ಅಧ್ಯಕ್ಷ, ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಕೆಪಿಸಿಸಿಯನ್ನು ವಿಸರ್ಜಿಸಲಾಗಿದೆ.

ರಾಹುಲ್ ಗಾಂಧಿ ಸ್ಥಾನಕ್ಕೆ ಯಾರು?

ರಾಹುಲ್ ಗಾಂಧಿ ಸ್ಥಾನಕ್ಕೆ ಯಾರು?

ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಪಟ್ಟದಿಂದ ಕೆಳಗೆ ಇಳಿಯುವ ತಮ್ಮ ನಿರ್ಧಾರಕ್ಕೆ ಅಚಲರಾಗಿದ್ದಾರೆ. ಹಾಗಾಗಿ ಅವರ ಸ್ಥಾನಕ್ಕೆ ಯಾರು? ಎಂಬ ಪ್ರಶ್ನೆ ಎದ್ದಿದೆ. ಪ್ರಿಯಾಂಕಾ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆಯೂ ಚರ್ಚೆ ಏರ್ಪಟ್ಟಿದೆ. ಆದರೆ ಗಾಂಧಿ ಕುಟುಂಬದ ಸದಸ್ಯರನ್ನು ಅಧ್ಯಕ್ಷರನ್ನಾಗಿಸುವುದು ಬೇಡವೆಂಬ ಚರ್ಚೆಯೂ ಚಾಲ್ತಿಯಲ್ಲಿದೆ.

English summary
Indian congress party planing to do two main changes in the party. And also planing to do Padayathra accross the cuntry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X