ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವಿರೋಧ ಆಯ್ಕೆ

By Sachhidananda Acharya
|
Google Oneindia Kannada News

ನವದೆಹಲಿ, ಡಿಸೆಂಬರ್ 11: ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಹಾಲಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಿ. 16ರಂದು ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಪದಗ್ರಹಣಡಿ. 16ರಂದು ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಪದಗ್ರಹಣ

ಇದೇ ಡಿಸೆಂಬರ್ 16ರಂದು ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪುತ್ರನಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ದೆಹಲಿಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ವೈರಲ್ ಆಯ್ತು ರಾಹುಲ್ ವಿರುದ್ಧ ದನಿ ಎತ್ತಿದ ಶೆಹ್ಜಾದ್ ವಿಡಿಯೋ! ವೈರಲ್ ಆಯ್ತು ರಾಹುಲ್ ವಿರುದ್ಧ ದನಿ ಎತ್ತಿದ ಶೆಹ್ಜಾದ್ ವಿಡಿಯೋ!

Congress officially announces Rahul Gandhi as the President of the Party

ಈ ಮೂಲಕ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳ ಫಲಿತಾಂಶ ಹೊರ ಬೀಳುವ (ಡಿಸೆಂಬರ್ 18) ಎರಡು ದಿನ ಮೊದಲು ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಲ್ಲಿ ರಾಹುಲ್ ಗಾಂಧಿ ಮಾತ್ರ ಉಳಿದಿದ್ದರು. ಮತ್ತು ಎಲ್ಲಾ 89 ನಾಮಪತ್ರಗಳೂ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿಯವರ ಹೆಸರನ್ನು ಸೂಚಿಸಿದ್ದವು.

ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನ ಕೇಂದ್ರ ಚುನಾವಣಾ ಸಮಿತಿ ಅಧ್ಯಕ್ಷರ ಹುದ್ದೆಗೆ ರಾಹುಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ಹೊರಡಿಸಿದೆ.

ತಾಯಿಯ ಕೈಯಿಂದ ಅಧಿಕಾರ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನೆಹರೂ-ಗಾಂಧಿ ಕುಟುಂಬದ ಆರನೇ ವ್ಯಕ್ತಿಯಾಗಿ ರಾಹುಲ್ ಗಾಂಧಿ ಗುರುತಿಸಿಕೊಳ್ಳಲಿದ್ದಾರೆ.

ವೈರಲ್ ಆಯ್ತು ರಾಹುಲ್ ವಿರುದ್ಧ ದನಿ ಎತ್ತಿದ ಶೆಹ್ಜಾದ್ ವಿಡಿಯೋ!ವೈರಲ್ ಆಯ್ತು ರಾಹುಲ್ ವಿರುದ್ಧ ದನಿ ಎತ್ತಿದ ಶೆಹ್ಜಾದ್ ವಿಡಿಯೋ!

ಈ ಹಿಂದೆ ಮೋತಿಲಾಲ್ ನೆಹರೂ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನಂತರ ಜವಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ದೀರ್ಘ ಅವಧಿಗೆ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಇದೀಗ ರಾಹುಲ್ ಗಾಂಧಿಯ ಸರದಿ.

English summary
All India Congress Committee's Central Election Authority officially announces Rahul Gandhi as the President of the Indian National Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X