ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿಗೆ ಕಾಂಗ್ರೆಸ್ ನ ಬೆಂಬಲವಿತ್ತು ಆದರೆ ಅನುಷ್ಠಾನಕ್ಕಲ್ಲ

|
Google Oneindia Kannada News

ಕೊಚ್ಚಿ, ನವೆಂಬರ್ 18 : ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಯ ಬಗ್ಗೆ ಇರುವ ಆಲೋಚನೆಯನ್ನು ಕಾಂಗ್ರೆಸ್ ಬೆಂಬಲಿಸಿತ್ತೇ ವಿನಃ ಅದನ್ನು ಜಾರಿಗೆ ತಂದಿರುವ ರೀತಿಯನ್ನು ಅಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದಾರೆ.

ಮೋದಿ ಸರ್ಕಾರಕ್ಕೆ ಸಿಕ್ತು ಮೂಡಿ ಬೆಂಬಲ, ರೇಟಿಂಗ್ ಏರಿಕೆಮೋದಿ ಸರ್ಕಾರಕ್ಕೆ ಸಿಕ್ತು ಮೂಡಿ ಬೆಂಬಲ, ರೇಟಿಂಗ್ ಏರಿಕೆ

ಯುಡಿಎಫ್ ಕೊಚ್ಚಿಯಲ್ಲಿ ಶನಿವಾರ(ನ.18)ರಂದು ಕಾಂಗ್ರೆಸ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಎಸ್ಸ್ಟಿ ಕೇವಲ ಒಂದು ಕಲ್ಪನೆಯಾಗಿದ್ದು ಅದಕ್ಕೆ ಕಾಂಗ್ರೆಸ್ ನ ಬೆಂಬಲವಿತ್ತು. ಸಾಕಷ್ಟು ಸಿದ್ಧತೆ ಹಾಗೂ ಎಚ್ಚರಿಕೆಗಳನ್ನು ತೆಗೆದುಕೊಂಡ ಬಳಿಕ ಅದನ್ನು ನಾವು ಜಾರಿಗೆ ತರುತ್ತಿದ್ದೆವು ಆದರೆ ಬಿಜೆಪಿ ಸರ್ಕಾರ ಹಾಗೆ ಮಾಡಿಲ್ಲ. ಯಾವ ಸಿದ್ಧತೆಯೂ ಇಲ್ಲದೆ ಘೋಷಣೆ ಮಾಡಿದ್ದಾರೆ ಎಂದರು.

Congress never against GST but improper implication : Manmohan

ನೋಟು ನಿಷೇಧದ ಬಗ್ಗೆ ಕಿಡಿಕಾರಿದ ಅವರು, ನೋಟು ನಿಷೇಧವೊಂದು ತಪ್ಪು ನಿರ್ಧಾರ, ಸಾಕಷ್ಟು ಭರವೆಸಗಳನ್ನು ನೀಡುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿತ್ತು ಆದರೆ ಭರವಸೆ ಈಡೇರಿಸುವಲ್ಲಿ ಎಡವಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೆಟ್ಟ ನೀತಿಗಳ ವಿರುದ್ಧ ಹೋರಾಡಲು ಎಡ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಬೇಕು.

ಪಕ್ಷದ ನಾಯಕರೂ ಕೂಡ ರಾಷ್ಟ್ರೀಯ ಪಕ್ಷದೊಂದಿಗೆ ಸಹಕಾರ ನೀಡಬೇಕು. ಬಿಜೆಪಿ ಕೆಟ್ಟ ನೀತಿ ಹಾಗೂ ಒಡಕು ನೀತಿ ವಿರುದ್ಧ ಹೋರಾಡಬೇಕು ಎಂದು ಹೇಳಿದರು.

English summary
Former prime minister Dr. Manmohan singh clarified that the congress party was assent with GST system, but not with how the NDA implemented the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X