ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ನೆಹರೂಗೆ ಭವ್ಯ ಸ್ವಾಗತ!: ಟ್ರೋಲ್ ಆದ ಶಶಿ ತರೂರ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಜವಹರಲಾಲ್ ನೆಹರೂ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಅ ಕಾಲದಲ್ಲಿಯೇ ಭವ್ಯ ಸ್ವಾಗತ ಸಿಕ್ಕಿತ್ತು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಮಾಡಿರುವ ಟ್ವೀಟ್ ವ್ಯಾಪಕ ಟ್ರೋಲ್‌ಗೆ ಒಳಗಾಗಿದೆ.

ಅಲ್ಲದೆ, ತರೂರ್ ಅವರು ಇಂದಿರಾ ಹೆಸರನ್ನು ಇಂಡಿಯಾ ಎಂದು ತಪ್ಪಾಗಿ ಹಾಕಿರುವುದನ್ನು ಕೂಡ ಕಟುವಾಗಿ ಟೀಕಿಸಲಾಗಿದೆ. ಸಾಮಾನ್ಯವಾಗಿ ತಮ್ಮ ವಿದ್ವತ್ತನ್ನು ಪ್ರದರ್ಶಿಸುವಂತಹ ಮತ್ತು ವಿಚಾರಶೀಲ ಟ್ವೀಟ್‌ಗಳನ್ನು ಮಾಡುವ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗರನ್ನು ಕೆಣಕುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಅವರ ಟ್ವೀಟ್ ಅವರ ವಿರೋಧಿಗಳಿಗೆ ಆಹಾರವಾಗಿ ಪರಿಣಮಿಸಿದೆ.

ಹ್ಯೂಸ್ಟನ್ ಹೌಡಿ: ಮೋದಿ ಸಮ್ಮುಖದಲ್ಲಿ ನೆಹರೂ ಗುಣಗಾನ ಮಾಡಿದ ಅಮೆರಿಕ ಮುಖಂಡಹ್ಯೂಸ್ಟನ್ ಹೌಡಿ: ಮೋದಿ ಸಮ್ಮುಖದಲ್ಲಿ ನೆಹರೂ ಗುಣಗಾನ ಮಾಡಿದ ಅಮೆರಿಕ ಮುಖಂಡ

ಮೋದಿ ಮತ್ತು ಬಿಜೆಪಿ ವಿರುದ್ಧ ತೀಕ್ಷ್ಣ ಟೀಕೆಗಳನ್ನು ಮಾಡುವ ತರೂರ್ ಅವರು ಮಾಡಿರುವ ತಪ್ಪು, ಉಳಿದವರಂತೆ ಅವರೂ ಸತ್ಯವನ್ನು ಅರಿತುಕೊಳ್ಳದೆ ದುಡುಕಿನ ಹೇಳಿಕೆ ನೀಡುತ್ತಾರೆ ಎನ್ನುವುದಕ್ಕೆ ಸಾಕ್ಷಿ. ಅವರಲ್ಲಿ ಇರುವ ಪ್ರಬುದ್ಧ ರಾಜಕಾರಣಿ ಮಾಯವಾಗಿದ್ದಾನೆ. ಯಾವುದೇ ಸಂಗತಿಯನ್ನು ಪರಾಮರ್ಶಿಸದೆ ಹಂಚಿಕೊಳ್ಳುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದು ಯುಎಸ್‌ಎಸ್‌ಆರ್‌ನಲ್ಲಿ ತೆಗೆದ ಚಿತ್ರ ಎಂದು ಕಾಲ, ಸಂದರ್ಭದೊಂದಿಗೆ ಮಾಹಿತಿ ನೀಡುವ ಮೂಲಕ ಅವರ ತಪ್ಪನ್ನು ತಿದ್ದಿದ್ದಾರೆ.

ಪ್ರಚಾರವಿಲ್ಲದೆ ಜನ ಹೇಗೆ ಸೇರಿದ್ದರು ನೋಡಿ...

ಪ್ರಚಾರವಿಲ್ಲದೆ ಜನ ಹೇಗೆ ಸೇರಿದ್ದರು ನೋಡಿ...

'1954ರಲ್ಲಿ ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಅವರ ಮಗಳು ಇಂದಿರಾ ಗಾಂಧಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದ ಚಿತ್ರ. ಯಾವುದೇ ವಿಶೇಷ ಪಿಆರ್ ಪ್ರಚಾರವಿಲ್ಲದೆ, ಎನ್‌ಆರ್‌ಐ ಗುಂಪು ನಿರ್ವಹಣೆಯಿಲ್ಲದೆ ಅಥವಾ ಮಾಧ್ಯಮಗಳ ವಿಜೃಂಭಣೆಯ ಪ್ರಚಾರವಿಲ್ಲದೆ ಅಮೆರಿಕದ ಜನರಲ್ಲಿ ಆ ಕ್ಷಣದಲ್ಲಿ ಹುಟ್ಟಿಕೊಂಡಿದ್ದ ಭಾರಿ ಉತ್ಸಾಹವನ್ನು ನೋಡಿ' ಎಂದು ತರೂರ್ ಟ್ವೀಟ್ ಮಾಡಿದ್ದರು.

ಇಂದಿರಾ ಗಾಂಧಿಯೋ, ಇಂಡಿಯಾ ಗಾಂಧಿಯೋ?

ಇಂದಿರಾ ಗಾಂಧಿಯೋ, ಇಂಡಿಯಾ ಗಾಂಧಿಯೋ?

ಜತೆಗೆ ತರೂರ್ ಅವರು ಇಂದಿರಾ ಗಾಂಧಿ ಅವರ ಹೆಸರನ್ನು ಇಂಗ್ಲಿಷ್‌ನಲ್ಲಿ ಬರೆಯುವಾಗ 'ಇಂಡಿಯಾ ಗಾಂಧಿ' ಎಂದು ಬರೆದಿದ್ದಾರೆ. ಇಂದಿರಾ ಗಾಂಧಿ ನಮಗೆ ಗೊತ್ತು, ಇಂಡಿಯಾ ಗಾಂಧಿ ಯಾರು ಎಂದು ಅನೇಕರು ಪ್ರಶ್ನಿಸಿದ್ದಾರೆ. 'ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ' ಎಂಬ ಮಾತು ಒಂದುಕಾಲದಲ್ಲಿತ್ತು. ತರೂರ್ ಅವರು ಈಗಲೂ ಅದೇ ಜಪ ಮಾಡುತ್ತಿದ್ದಾರೆ. ದೇಶ ಬದಲಾಗಿದೆ, ಕಣ್ತೆರೆದು ನೋಡಿ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾದ ಮೋದಿ-ದೆವೊರಾ ಮಾತುಕತೆಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾದ ಮೋದಿ-ದೆವೊರಾ ಮಾತುಕತೆ

ಯುಎಸ್‌ಎಸ್‌ಆರ್ ಚಿತ್ರ, ಅಮೆರಿಕದ್ದಲ್ಲ

ಯುಎಸ್‌ಎಸ್‌ಆರ್ ಚಿತ್ರ, ಅಮೆರಿಕದ್ದಲ್ಲ

ವಾಸ್ತವವಾಗಿ ಶಶಿ ತರೂರ್ ಅವರು ಹಂಚಿಕೊಂಡ ಚಿತ್ರಕ್ಕೂ ಮತ್ತು ಅವರು ಬರೆದಿರುವ ಪೋಸ್ಟ್‌ಗೂ ಸಂಬಂಧವಿಲ್ಲ. ಅದು 1955ರಲ್ಲಿ ನೆಹರೂ ಮತ್ತು ಇಂದಿರಾ ಗಾಂಧಿ ಅವರು ಯುಎಸ್‌ಎಸ್‌ಆರ್‌ನ (ಈಗಿನ ರಷ್ಯಾ) ಮಾಸ್ಕೋಗೆ ತೆರಳಿದ್ದ ಚಿತ್ರವಾಗಿದೆ. ಆಗ ಸಾರ್ವಜನಿಕ ರಾಲಿಯಲ್ಲಿ ತೆರೆದ ಕಾರ್‌ನಲ್ಲಿ ನೆಹರೂ ಮತ್ತು ಇಂದಿರಾ ಗಾಂಧಿ ತೆರಳಿದ್ದರು.

ತರೂರ್ ವಿರುದ್ಧ ಟೀಕಾಪ್ರಹಾರ

ತರೂರ್ ವಿರುದ್ಧ ಟೀಕಾಪ್ರಹಾರ

ಹಿರಿಯ ರಾಜಕಾರಣಿಯಾದ ನೀವು ಫೋಟೊ ಒಂದನ್ನು ಖಚಿತಪಡಿಸಿಕೊಳ್ಳದೆ ಹಾಕುತ್ತೀರಲ್ಲ ಎಂದು ಕೆಲವರು ಕಿಡಿಕಾರಿದ್ದಾರೆ. ಯಾವುದೇ ಪಿಆರ್ ಪ್ರಚಾರವಿಲ್ಲದೆ ಇಷ್ಟು ಜನ ಸೇರಿದ್ದರು ಎಂದು ಮೋದಿ ಅವರನ್ನು ಟೀಕಿಸಲು ಹೇಳಿದ್ದೀರಿ. ಆದರೆ ನೆಹರೂ ಅವರು ತೆರಳಿರುವ ತೆರೆದ ಕಾರ್ ನೋಡಿ. ಅದು ವ್ಯವಸ್ಥಿತ ಪಿಆರ್ ಪ್ರಚಾರದ ಮೂಲಕವೇ ನಡೆದಿದೆ ಎಂದು ಅನೇಕರು ಹೇಳಿದ್ದಾರೆ. ಆಗಿನ ಕಾಲದಲ್ಲಿ ಯುಎಸ್‌ಎಸ್‌ಆರ್ ಸರ್ಕಾರವು ವಿದೇಶಿ ನಾಯಕರನ್ನು ಸ್ವಾಗತಿಸಲು ರಾಲಿಗಳನ್ನು ನಡೆಸುವ ಸಂಪ್ರದಾಯ ಹೊಂದಿದ್ದರು ಎಂದು ಕೆಲವರು ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ಸಿಗುವ ಗೌರವ ಎಂದ ತರೂರ್

ಭಾರತಕ್ಕೆ ಸಿಗುವ ಗೌರವ ಎಂದ ತರೂರ್

ತಮ್ಮ ಟ್ವೀಟ್‌ನಲ್ಲಿ ತಪ್ಪಾಗಿರುವುದನ್ನು ಅರಿತ ಶಶಿ ತರೂರ್ ಅದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. 'ಇದು ನನಗೆ ಫಾರ್ವರ್ಡ್ ಬಂದ ಚಿತ್ರ. ಇದು ಯುಎಸ್‌ಎಸ್‌ಆರ್ ಭೇಟಿಯ ಚಿತ್ರವೇ ಹೊರತು ಅಮೆರಿಕದ್ದಲ್ಲ ಎಂದು ಹೇಳಲಾಗಿದೆ. ಹಾಗಿದ್ದರೂ ಇದರ ಸಂದೇಶವೇನೂ ಬದಲಾಗುವುದಿಲ್ಲ. ವಾಸ್ತವವೆಂದರೆ ಮಾಜಿ ಪ್ರಧಾನಿಯವರು ಕೂಡ ವಿದೇಶದಲ್ಲಿ ಜನಪ್ರಿಯತೆಯನ್ನು ಹೊಂದಿದ್ದರು. ನರೇಂದ್ರ ಮೋದಿ ಅವರಿಗೆ ಗೌರವ ದೊರೆತರೆ ಅದು ಭಾರತದ ಪ್ರಧಾನಿಗೆ ಗೌರವ ದೊರೆತಂತೆ. ಅದು ಭಾರತಕ್ಕೆ ದೊರೆತ ಗೌರವ' ಎಂದು ತರೂರ್ ಸಮರ್ಥಿಸಿಕೊಂಡಿದ್ದಾರೆ. ಆದರೆ 'ಇಂದಿರಾ', 'ಇಂಡಿಯಾ' ಕುರಿತಾದ ಪ್ರಮಾದಕ್ಕೆ ಅವರು ಪ್ರತಿಕ್ರಿಯೆ ನೀಡಿಲ್ಲ.

ಮಾತು ಸಾಕು, ಕೆಲಸ ಜಾಸ್ತಿ ಮಾಡಬೇಕಿದೆ: ಪ್ರಧಾನಿ ಮೋದಿಮಾತು ಸಾಕು, ಕೆಲಸ ಜಾಸ್ತಿ ಮಾಡಬೇಕಿದೆ: ಪ್ರಧಾನಿ ಮೋದಿ

English summary
Congress MP Shashi Tharoor trolled by netizens for calling Indira Gandhi as India Gandhi and sharing a photo of Nehru visit to USSR and said it was in US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X