ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶ್ಲೀಲ ವಿಡಿಯೋ ನೋಡಿದ್ದಕ್ಕೆ ಸದನದಿಂದ ಶಾಸಕ ಅಮಾನತು

By Mahesh
|
Google Oneindia Kannada News

ಭುವನೇಶ್ವರ, ಡಿ.16: ಸದನದಲ್ಲಿ ಅಶ್ಲೀಲ ವಿಡಿಯೋ ನೋಡಿ ಸಿಕ್ಕಿ ಬಿದ್ದ ಕಾಂಗ್ರೆಸ್ ಶಾಸಕ ನಬಾ ಕಿಶೋರ್ ದಾಸ್ ಅವರನ್ನು ಒಡಿಶಾ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ. ಆದರೆ, ಅಮಾನತು ಆದೇಶ ಕೇವಲ 7 ದಿನಕ್ಕೆ ಸೀಮಿತವಾಗಿದ್ದು, ವಿಪಕ್ಷಗಳು ಹೆಚ್ಚಿನ ಪ್ರಮಾಣದ ತನಿಖೆ ಹಾಗೂ ಶಿಕ್ಷೆಗೆ ಆಗ್ರಹಿಸಿವೆ.

ಒಡಿಶಾದ ವಿಧಾನಸಭೆ ಆಧಿವೇಶನ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಮೊಬೈಲ್ ಫೋನಿನಲ್ಲಿ ನೋಡಬಾರದ್ದು ನೋಡಿ ಸಿಕ್ಕಿ ಬಿದ್ದಿದ್ದರು. ಈ ಬಗ್ಗೆ ಕೊನೆಗೂ ಸ್ಪೀಕರ್ ನಿರಂಜನ್ ಪೂಜಾರಿ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಇದಕ್ಕೂ ಮುನ್ನ ಸದನದ ಶಿಸ್ತು ಪಾಲನಾ ಸಮಿತಿಗೆ ಈ ವಿಷಯ ತಲುಪಿ ನಂತರ ಮುಖ್ಯ ಸಚೇತಕ ಅನಂತ್ ದಾಸ್ ಅವರು ನಿರ್ಣಯಕ್ಕೆ ಮನ್ನಣೆ ನೀಡಿದ್ದರು.

MLA Naba Kishore Das

ಬಿಜೆಪಿ ಗರಂ: ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಡಿ ಯತ್ನಿಸುತ್ತಿದೆ. ಸದನ ಸಮಿತಿ ವರದಿ ಬರುವ ಮುನ್ನವೇ ಆತುರವಾಗಿ ಅಮಾನತು ನಿರ್ಣಯ ಮಂಡಿಸಿ, ಜಾರಿಗೊಳಿಸಲಾಗಿದೆ ಎಂದು ಬಿಜೆಪಿ ಶಾಸಕ ವರ್ಧನ್ ಸಿಂಗ್ ದೇವ್ ಪ್ರತಿಕ್ರಿಯಿಸಿದ್ದಾರೆ.

ಒಡಿಶಾದ ಹಿರಿಯ ಕಾಂಗ್ರೆಸ್ ನಾಯಕ ನಬಾ ಕಿಶೋರ್ ದಾಸ್ ಅವರ ಮೇಲೆ ಅಸೆಂಬ್ಲಿಯಲ್ಲಿ ಪ್ರಶ್ನೋತ್ತರ ವೇಳೆ ನಡೆಯುವಾಗ ಅಶ್ಲೀಲ ವಿಡಿಯೋ ನೋಡಿದ ಆರೋಪ ಹೊರೆಸಲಾಗಿದೆ. ಕಾಂಗ್ರೆಸ್ ಶಾಸಕರ ಈ ಕೃತ್ಯದಿಂದ ನಾವೆಲ್ಲ ತಲೆತಗ್ಗಿಸುವಂತಾಗಿದೆ. ಸದನದ ಮರ್ಯಾದೆ ಮಣ್ಣುಪಾಲಾಗಿದೆ. ತಕ್ಷಣವೇ ಶಾಸಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಿಜೆಡಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಪ್ರಮೀಳಾ ಮಲ್ಲಿಕ್ ಅವರು ಆಗ್ರಹಿಸಿದ್ದಾರೆ. ಅದರೆ, ಆರೋಪವನ್ನು ಅಲ್ಲಗೆಳೆದಿರುವ ಕಾಂಗ್ರೆಸ್ ನಾಯಕ, ನಾನು ಇದಕ್ಕೆ ಸದನದಲ್ಲೇ ಉತ್ತರಿಸುತ್ತೇನೆ ಎಂದಿದ್ದರು.

ಝಾರುಗುಡದ ಶಾಸಕ ಕಿಶೋರ್ ಅವರು ಸದನದಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿರುವ ದೃಶ್ಯಾವಳಿಗಳನ್ನು ಸ್ಥಳೀಯ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿತ್ತು.

ನನ್ನ ಮೊಬೈಲ್ ನಲ್ಲಿ ವಿಡಿಯೋ ಆಟೋ ಪ್ಲೇ ಆಯಿತು. ಏನು ಎಂದು ನೋಡುತ್ತಿದ್ದೆ ಅಷ್ಟೇ. ಇಂಟರ್ನೆಟ್ ಆನ್ ಮಾಡಿದ ತಕ್ಷಣ ಈ ರೀತಿ ಆಗಿದ್ದು, ತಕ್ಷಣ ಆಫ್ ಮಾಡಿದೆ. ನಾನು ಅಡಲ್ಟ್ ವಿಡಿಯೋ ನೋಡೇ ಇಲ್ಲ ಎಂದು ದಾಸ್ ಅವರು ಪ್ರತಿಕ್ರಿಯಿಸಿದ್ದಾರೆ. ದಾಸ್ ಅವರ ಹೇಳಿಕೆಗೆ ಕಾಂಗ್ರೆಸ್ ಶಾಸಕ ಪ್ರಫುಲ ಮಾಂಝಿ ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

English summary
Senior Congress legislator Naba Kishore Das was on Tuesday suspended from the Odisha Assembly for a period of seven days for allegedly watching an obscene video on his mobile phone inside the House on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X