ಬಿಜೆಪಿಯ 'ಒಗ್ಗಟ್ಟಿನ ನಾಯಕತ್ವ' ಸಂಭ್ರಮಿಸೋಣ: ಕಾಂಗ್ರೆಸ್ ಲೇವಡಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 07: ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ.

ರಾಜ್ಯ ಬಿಜೆಪಿ ನಾಯಕರಲ್ಲಿನ ಭಿನ್ನಮತ, ಪರಸ್ಪರ ವಿರೋಧಿ ಹೇಳಿಕೆಗಳನ್ನು ಬಳಸಿಕೊಂಡಿರುವ ಕಾಂಗ್ರೆಸ್, ಬಿಜೆಪಿ ಮುಖಂಡರನ್ನು ಟೀಕಿಸುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಬಿಜೆಪಿ ಸಂಸ್ಥಾಪನಾ ದಿನ: ಟ್ವಿಟ್ಟರ್‌ನಲ್ಲಿ ಶುಭಾಶಯ ವಿನಿಮಯ

ಬಿಜೆಪಿಯನ್ನು ಅಣಕಿಸುವ ವಿಡಿಯೊ

ಬಿಜೆಪಿಯು ಏಪ್ರಿಲ್ 6ರಂದು ತನ್ನ 38ನೇ ಸಂಸ್ಥಾಪನಾ ದಿನವನ್ನು ಆಚರಿಸಿದೆ. ಬಿಜೆಪಿಯ ಸಂಸ್ಥಾಪನಾ ದಿನದಂದು 'ಕರ್ನಾಟಕ ಬಿಜೆಪಿಯ ಒಗಟ್ಟಿನ ನಾಯಕತ್ವ'ವನ್ನು ಸಂಭ್ರಮಿಸೋಣ ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿ ಮಾಡಿದೆ.

ಕರ್ನಾಟಕದಲ್ಲಿ ಈ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಬಿಜೆಪಿ ಸರ್ಕಾರವು ಭ್ರಷ್ಟಾಚಾರ ಮತ್ತು ಒಳಜಗಳಗಳ ಮೇಲೆ ಸಂಸ್ಥಾಪನೆಗೊಂಡಿತ್ತು ಎಂಬುದನ್ನು ಯಾರೂ ಮರೆತಿಲ್ಲ ಎಂಬುದಾಗಿ ಕಾಂಗ್ರೆಸ್‌ ಟ್ವೀಟ್ ಮಾಡಿದೆ.

congress made funny video of bjp leaders

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖಂಡರಾದ ಕೆ.ಎಸ್. ಈಶ್ವರಪ್ಪ, ಶೋಭಾ ಕರಂದ್ಲಾಜೆ, ಸುರೇಶ್‌ ಕುಮಾರ್, ಸಿ.ಟಿ. ರವಿ ಮುಂತಾದವರು ಪರಸ್ಪರ ವಾಗ್ದಾಳಿ ನಡೆಸುವ ಹೇಳಿಕೆಗಳ ತುಣುಕನ್ನು ಸೇರಿಸಿ ಕಾಂಗ್ರೆಸ್‌ ವಿಡಿಯೊ ತಯಾರಿಸಿದೆ.

ವಿರೋಧ ಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಅಮಿತ್ ಶಾ

'ಯಡಿಯೂರಪ್ಪ ತಪ್ಪಿತಸ್ಥ ಜೈಲಿಗೆ ಹೋಗಿ ಬಂದವರು ಎಂದು ಟೀಕಿಸುತ್ತೀರಲ್ಲ ಈಶ್ವರಪ್ಪ, ಹಾಗೇಕೆ ಹೇಳಿದಿರಿ? ನಾನು ಅಧಿಕಾರಕ್ಕೆ ಬರದೇ ಹೋಗಿದ್ದರೆ ನೀವು ಸರ್ಕಾರದ ಐಷಾರಾಮಿ ಕಾರುಗಳಲ್ಲಿ ಓಡಾಡಲು ಸಾಧ್ಯವಾಗುತ್ತಿತ್ತೇ?' ಎಂದು ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ ಅವರನ್ನು ಪ್ರಶ್ನಿಸುವ ವಿಡಿಯೊ ತುಣುಕು ಇದರಲ್ಲಿದೆ.

'ಪಕ್ಷ ಒಡೆಯದಂತೆ ಮತ್ತು ಹೊಸ ಪಕ್ಷ ಕಟ್ಟದಂತೆ ಯಡಿಯೂರಪ್ಪ ಅವರನ್ನು ಪದೇ ಪದೇ ಕೇಳಿಕೊಂಡೆ. ಆದರೆ ಅವರು ಕೆಜೆಪಿ ಕಟ್ಟಿದರು' ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ ವಿಡಿಯೊವನ್ನು ಸೇರಿಸಲಾಗಿದೆ. ಈ ವಿಡಿಯೊ 2.07 ನಿಮಿಷದಷ್ಟಿದ್ದು, ಸಾವಿರಾರು ಜನರು ವೀಕ್ಷಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
karnataka congress has made funny video of state bjp leaders by mocking them as "let's celebrate united leadership of karnataka bjp'.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ