ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking : ಕಾನೂನಿಗಿಂತ ದೊಡ್ಡವರಾ ಸೋನಿಯಾ?; ಜೋಶಿ ಪ್ರಶ್ನೆ

|
Google Oneindia Kannada News

ನವದೆಹಲಿ, ಜುಲೈ 21: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆ ಮಾಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಲೋಕಸಭಾ ಕಲಾಪದಲ್ಲಿ ಗದ್ದಲ ನಡೆಸಿದರು.

ಗುರುವಾರ ವಿರೋಧ ಪಕ್ಷದ ಗದ್ದಲಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಸಮಧಾನ ವ್ಯಕ್ತಪಡಿಸಿದರು. ಗುರುವಾರ ಕಲಾಪ ಆರಂಭವಾಗುತ್ತಿದ್ದಂತೆ ಗದ್ದಲ ನಡೆದಿದ್ದು, ಕಲಾಪವನ್ನು ಸ್ಪೀಕರ್ ಶುಕ್ರವಾರಕ್ಕೆ ಮುಂದೂಡಿದರು.

ಸೋನಿಯಾ ಗಾಂಧಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವ ಮುನ್ನ ಸಂಸತ್ತಿನಲ್ಲಿ ಕೆಲವು ವಿರೋಧ ಪಕ್ಷದ ನಾಯಕರ ಘೋಷಣೆಗಳ ನಡುವೆಯೇ ಪ್ರಹ್ಲಾದ್ ಜೋಶಿ ಲೋಕಸಭೆಯಲ್ಲಿ ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡರು. "ಕಾಂಗ್ರೆಸ್‌ನವರು ಅವರು ಕಾನೂನಿಗಿಂತ ಹೆಚ್ಚಿನವರು ಎಂದು ಭಾವಿಸಿದ್ದಾರೆ" ಎಂದು ಟೀಕಿಸಿದರು.

Congress Leaders protest party thinks they are above law says Pralhad Joshi

"ಸೋನಿಯಾ ಗಾಂಧಿ ಸೂಪರ್ ಹ್ಯೂಮನ್ ಬೀಯಿಂಗಾ?. ಕಾನೂನಿಗಿಂತ ದೊಡ್ಡವರಾ?. ಕಾನೂನಿಗೂ ಅವರಿಗೂ ಸಂಬಂಧವೇ ಇಲ್ಲವೇ?. ಕಾನೂನಿಗೂ ಅವರಿಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಖಂಡನೀಯ" ಎಂದು ಜೋಶಿ ವಾಗ್ದಾಳಿ ನಡೆಸಿದರು.

ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಜಾರಿ ನಿರ್ದೇಶನಾಲಯ ವಿಚಾರಣೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಕಲಾಪಕ್ಕೆ ಅಡ್ಡಿ ಪಡಿಸಿದರು.

ಸಚಿವ ಪ್ರಹ್ಲಾದ್ ಜೋಶಿ, "ಇವರಿಗೆ ಏನು ಬೇಕು?. ಈಗ ಸೋನಿಯಾ ಗಾಂಧಿ ಪರ ಪ್ರತಿಭಟಿಸುತ್ತಿರುವವರು ಬುಧವಾರ ಬೆಲೆ ಏರಿಕೆ ಕುರಿತು ಚರ್ಚೆಗೆ ಒತ್ತಾಯಿಸಿದ್ದರು. ಎರಡೂ ಸದನದಗಳ ಅಧ್ಯಕ್ಷರು ಸ್ವತಃ ಚರ್ಚೆಗೆ ಅವಕಾಶ ನೀಡೋದಾಗಿ ಹಲವು ಬಾರಿ ಭರವಸೆ ನೀಡಿದ್ದರೂ ಪ್ರತಿಪಕ್ಷಗಳು ಸುಗಮವಾಗಿ ಸದನ ನಡೆಸಲು ಸಹಕರಿಸುತ್ತಿಲ್ಲ" ಎಂದು ಆರೋಪಿಸಿದರು.

ನ್ಯಾಷನಲ್ ಹೆರಾಲ್ಡ್ ಪ್ರತ್ರಿಕೆ ಖರೀದಿ ಅವ್ಯವಹಾರ ಮತ್ತು ಹಣ ವರ್ಗಾವಣೆ ಆರೋಪದ ಹಿನ್ನೆಲೆ ಗುರುವಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದರು. ಮೂರು ಗಂಟೆಗಳ ವಿಚಾರಣೆ ಬಳಿ ಸೋನಿಯಾ ಗಾಂಧಿ ವಿಚಾರಣೆ ಅಂತ್ಯಗೊಂಡಿತು. ನಂತರ ಜುಲೈ 25ರಂದು ಮತ್ತೆ ವಿಚಾರಣೆಗೆ ಬರುವಂತೆ ಸೋನಿಯಾ ಗಾಂಧಿ ಅವರಿಗೆ ಇಡಿ ಸಮನ್ಸ ಜಾರಿ ಮಾಡಿತು.

English summary
Union minister of coal, mines and parliamentary affairs Pralhad Joshi upset with Congress leaders after they protest in parliment to support party president Sonia Gandhi in the issue of ED probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X