ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಪೈಲಟ್ ಅಮಾನತು: ಕೊನೆಗೂ ಮೌನ ಮುರಿದ ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಜುಲೈ 15: ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಚಿನ್ ಪೈಲಟ್ ತಲೆದಂಡದ ನಂತರ, ಕೊನೆಗೂ ರಾಹುಲ್ ಗಾಂಧಿ ಈ ವಿಚಾರದಲ್ಲಿ ಮೌನ ಮುರಿದಿದ್ದಾರೆ.

Recommended Video

Dhoni ಜೊತೆ ಆಡೋದು ತುಂಬಾ ಖುಷಿ ಕೊಡುತ್ತೆ ಎಂದ Pant | Oneindia Kannada

ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐನ ಸಭೆಯಲ್ಲಿ ಮಾತನಾಡುತ್ತಿದ್ದ ರಾಹುಲ್, "ಪಕ್ಷ ತೊರೆಯಲು ಬಯಸುವವರು ಪಕ್ಷವನ್ನು ಬಿಟ್ಟು ಹೋಗಬಹುದು. ಇದರಿಂದ, ನಿಮ್ಮಂತಹ ಯುವ ಮುಖಂಡರಿಗೆ ಪಕ್ಷದ ಬಾಗಿಲು ತೆರೆದಂತಾಗುತ್ತದೆ" ಎಂದು ಹೇಳಿದರು.

ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಮಾಡಲಾಗದಿದ್ದನ್ನು ರಾಜಸ್ಥಾನದಲ್ಲಿ ಗೆಹ್ಲೋಟ್ ಮಾಡಿ ತೋರಿಸಿದರುಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಮಾಡಲಾಗದಿದ್ದನ್ನು ರಾಜಸ್ಥಾನದಲ್ಲಿ ಗೆಹ್ಲೋಟ್ ಮಾಡಿ ತೋರಿಸಿದರು

ಸಚಿನ್ ಪೈಲಟ್ ಹೆಸರನ್ನು ರಾಹುಲ್ ಗಾಂಧಿ ಉಲ್ಲೇಖಿಸದಿದ್ದರೂ, ವಿದ್ಯಾರ್ಥಿ ಘಟಕದ ಸಭೆಯಲ್ಲಿ ರಾಹುಲ್ ಗಾಂಧಿ, ಪೈಲಟ್ ಅವರನ್ನು ಉಲ್ಲೇಖಿಸಿಯೇ ಈ ಮಾತನ್ನು ಹೇಳಿದ್ದಾರೆ. ಆಮೂಲಕ, ಸಚಿನ್ ಪೈಲಟ್, ಕಾಂಗ್ರೆಸ್ ತೊರೆಯುವುದಿದ್ದರೆ ಅಭ್ಯಂತರವಿಲ್ಲ ಎನ್ನುವ ನಿರ್ಧಾರಕ್ಕೆ ಕಾಂಗ್ರೆಸ್ ಬಂದಂತಿದೆ ಎಂದೇ ವ್ಯಾಖ್ಯಾನಿಸಲಾಗುತ್ತದೆ.

ಮಧ್ಯಪ್ರದೇಶದ ಯುವ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ರೀತಿಯಲ್ಲಿಯೇ ಸಚಿನ್ ಪೈಲಟ್ ಕಾಂಗ್ರೆಸ್ ತೊರೆಯಬಹುದು ಎನ್ನುವ ಮಾತಿಗೆ ಸದ್ಯ ಪೈಲಟ್ ಪ್ರತಿಕ್ರಿಯೆ ನೀಡಿ, ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾಗಿದೆ.

'ಭಾರತ ಎಲ್ಲೆಡೆ ಅಧಿಕಾರ ಕಳೆದುಕೊಳ್ತಿದೆ' ಮೋದಿ ಸರ್ಕಾರದ ವಿರುದ್ಧ ರಾಹುಲ್ ಕಿಡಿ'ಭಾರತ ಎಲ್ಲೆಡೆ ಅಧಿಕಾರ ಕಳೆದುಕೊಳ್ತಿದೆ' ಮೋದಿ ಸರ್ಕಾರದ ವಿರುದ್ಧ ರಾಹುಲ್ ಕಿಡಿ

ಪಕ್ಷ ವಿರೋಧಿ ಚಟುವಟಿಕೆಯನ್ನು ಸಹಿಸುವುದಿಲ್ಲ

ಸಚಿನ್ ಪೈಲಟ್ ಬಂಡಾಯ ಎದ್ದಾಗ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಪಿಲ್ ಸಿಬಲ್ ಕೂಡಾ ಬೇಸರ ವ್ಯಕ್ತಪಡಿಸಿದ್ದರು. ಪಕ್ಷ ಎತ್ತ ಸಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಎನ್‌ಎಸ್‌ಯುಐ ಸಭೆಯಲ್ಲಿ ರಾಹುಲ್ ಗಾಂಧಿ, ಪಕ್ಷ ವಿರೋಧಿ ಚಟುವಟಿಕೆಯನ್ನು ಸಹಿಸುವುದಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.

ಕಮಲ್ ನಾಥ್ ಮತ್ತು ಅಶೋಕ್ ಗೆಹ್ಲೋಟ್

ಕಮಲ್ ನಾಥ್ ಮತ್ತು ಅಶೋಕ್ ಗೆಹ್ಲೋಟ್

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಯುವ ನಾಯಕರಿಗೇ ಮಣೆ ಹಾಕಬೇಕೆಂದು ರಾಹುಲ್ ಗಾಂಧಿ ಒತ್ತಡ ತಂದಿದ್ದರು. ಆದರೆ, ಕಮಲ್ ನಾಥ್ ಮತ್ತು ಅಶೋಕ್ ಗೆಹ್ಲೋಟ್, ಇಬ್ಬರೂ, ಸೋನಿಯಾ ಗಾಂಧಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಆ ವೇಳೆಯೇ, ಸಿಂಧಿಯಾ ಮತ್ತು ಪೈಲಟ್, ಹೈಕಮಾಂಡ್ ವಿರುದ್ದ ಬೇಸರಗೊಂಡಿದ್ದರು.

ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡ ಸಂಜಯ್ ಝಾ

ಸಚಿನ್ ಪೈಲಟ್ ಪರ ಹೇಳಿಕೆ ನೀಡಿದ್ದಕ್ಕಾಗಿ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡ ಸಂಜಯ್ ಝಾ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಝೂ, ""ಕಾಂಗ್ರೆಸ್ ಸಿದ್ಧಾಂತಕ್ಕೆ ನಾನು ನಿಷ್ಠನಾಗಿದ್ದೇನೆ. ನನ್ನ ನಿಷ್ಠೆಯು ಯಾವುದೇ ವ್ಯಕ್ತಿ ಅಥವಾ ಕುಟುಂಬಕ್ಕೆ ಅಲ್ಲ. ನಾನು ಗಾಂಧಿ-ನೆಹರೂ ಆದರ್ಶವಾದಿಯಾಗಿ ಉಳಿದಿದ್ದೇನೆ. ಯುದ್ಧ ಈಗ ಪ್ರಾರಂಭವಾಗಿದೆ" ಇದು ಝೂ ಮಾಡಿರುವ ಟ್ವೀಟ್.

ಪ್ರಿಯಾ ದತ್ ಟ್ವೀಟ್

'ನನ್ನ ಇನ್ನೋರ್ವ ಸ್ನೇಹಿತ ಪಕ್ಷ ತೊರೆದರು. ಸಿಂಧಿಯಾ ಮತ್ತು ಪೈಲಟ್ ನನ್ನ ಸ್ನೇಹಿತರಾಗಿದ್ದವರು. ಇಬ್ಬರು ಯುವ ನಾಯಕರು, ಸಾಮರ್ಥ್ಯವುಳ್ಲವರು ಪಕ್ಷದಿಂದ ಹೊರಹೋಗುತ್ತಿರುವುದು ವಿಷಾದನೀಯ. ಪಕ್ಷದ ಕಷ್ಟದ ಸಮಯದಲ್ಲಿ ಸಂಘಟನೆ ಮಾಡಿದ್ದವರು. ಮಹತ್ವಾಕಾಂಕ್ಷೆ ಹೊಂದುವುದು ತಪ್ಪಲ್ಲ"ಎಂದು ಪ್ರಿಯಾ ದತ್ ಟ್ವೀಟ್ ಮಾಡಿದ್ದಾರೆ.

English summary
If Anybody Wants To Leave The Party They Will. Rahul Gandhi At An NSUI Meeting Today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X