ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಕೇರ್ಸ್ ಫಂಡ್: ಸಾಲು ಸಾಲು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್

|
Google Oneindia Kannada News

ನವದೆಹಲಿ, ಆಗಸ್ಟ್ 20: ಪಿಎಂ ಕೇರ್ಸ್ ನಿಧಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ ವರ್ಗಾವಣೆ ಮಾಡದಿರುವ ಕುರಿತಾದ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಕಾಂಗ್ರೆಸ್ ನಿರಾಶೆ ವ್ಯಕ್ತಪಡಿಸಿದೆ.

Recommended Video

Silk Board Metro ನಿಲ್ದಾಣದ ಬಳಿ ಬಸ್ ಟರ್ಮಿನಲ್ | Oneindia Kannada

'ಪಿಎಂ ಕೇರ್ಸ್ ಫಂಡ್‌ನ ನ್ಯಾಯಬದ್ಧತೆ ಮತ್ತು ಕಾನೂನಾತ್ಮಕ ಹೊಣೆಗಾರಿಕೆಯ ಕುರಿತಾಗಿ ಸುಪ್ರೀಂಕೋರ್ಟ್ ತನ್ನ ತೀರ್ಮನ್ನು ನೀಡಿದೆ. ಈ ತೀರ್ಪು ಅಂತಿಮ. ಆದರೆ ಇದು ಶೈಕ್ಷಣಿಕ ವಲಯದಲ್ಲಿ ಸುದೀರ್ಘ ಸಮಯ ಚರ್ಚೆಯಲ್ಲಿ ಇರಲಿದೆ' ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಪಿಎಂ ಕೇರ್ಸ್ ನಿಧಿ ವರ್ಗಾವಣೆ ಇಲ್ಲ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ಪಿಎಂ ಕೇರ್ಸ್ ನಿಧಿ ವರ್ಗಾವಣೆ ಇಲ್ಲ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

'ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಲು ಅವಕಾಶವೇ ಬಾರದ ಪಿಎಂ ಕೇರ್ಸ್ ಫಂಡ್‌ನ ಬೇರೆ ಆಯಾಮಗಳೂ ಇವೆ. ಈ ನಿಧಿಯ ನಿರ್ವಹಣೆಗೆ ಚಟುವಟಿಕೆಗಳು, ವಿವರ ಬಹಿರಂಗಪಡಿಸುವಿಕೆ ಮತ್ತು ಪಾರದರ್ಶಕತೆಗೆ ಸಂಬಂಧಿಸಿದಂತೆ ಅನೇಕ ಆತಂಕಗಳಿವೆ' ಎಂದು ಅವರು ಹೇಳಿದ್ದಾರೆ.

 Congress Leader P Chidambaram Raises Series Of Questions On PM Cares Fund

ಮಾರ್ಚ್ 2020ರ ಮೊದಲ ಐದು ದಿನಗಳಲ್ಲಿ ಪಿಎಂ ಕೇರ್ಸ್ ಫಂಡ್‌ಗೆ 3076 ಕೋಟಿ ರೂ ದೇಣಿಗೆ ನೀಡಿದವರು ಯಾರು? ಇವುಗಳಲ್ಲಿ ಚೀನಾ ಮೂಲದ ಸಂಸ್ಥೆಗಳೂ ಇವೆಯೇ? ಏಪ್ರಿಲ್ 1ರಿಂದ ಸಂಗ್ರಹಿಸಿರುವ ಮೊತ್ತವೆಷ್ಟು? ಮತ್ತು ಅವುಗಳ ದಾನಿಗಳು ಯಾರು?

ಪಿಎಂ ಕೇರ್ಸ್‌ ಫಂಡ್‌ಗೆ ಚೀನಾದಿಂದ ಅನುದಾನ: ಕಾಂಗ್ರೆಸ್ ಪ್ರತ್ಯಾರೋಪಪಿಎಂ ಕೇರ್ಸ್‌ ಫಂಡ್‌ಗೆ ಚೀನಾದಿಂದ ಅನುದಾನ: ಕಾಂಗ್ರೆಸ್ ಪ್ರತ್ಯಾರೋಪ

ಕೋವಿಡ್-19 ಸಂಬಂಧಿತ ಚಟುವಟಿಕೆಗಳಿಗೆ ಈ ಫಂಡ್‌ನ ಹಣವನ್ನು ಹಂಚಿಕೆ ಮಾಡುವುದಕ್ಕೆ ಇರುವ ಕಾರ್ಯವಿಧಾನಗಳೇನು? ನಿಧಿ ಆರಂಭವಾದಾಗಿನಿಂದ ಅದರ ಹಣವನ್ನು ಪಡೆದುಕೊಂಡವರು ಯಾರು? ಹಣ ಸ್ವೀಕೃತಿದಾರರಿಂದ ಅದರ ಬಳಕೆಯ ಪ್ರಮಾಣಪತ್ರ ಸಿಕ್ಕಿದೆಯೇ ಅಥವಾ ಅದಕ್ಕೆ ಕೇಳಲಾಗಿದೆಯೇ? ಈ ನಿಧಿಯು ಆರ್‌ಟಿಐ ವ್ಯಾಪ್ತಿಯಾಚೆಗೆ ಬರುವುದಾದರೆ ಈ ಎಲ್ಲ ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು? ಎಂದು ಚಿದಂಬರಂ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.

English summary
Former Finance Minister P Chidambaram and Congress leader have made a series of questions on PM Cares Fund for COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X