ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರವನ್ನು ಪ್ರಶ್ನಿಸಲು ಕಾಂಗ್ರೆಸ್ ಪಕ್ಷದಿಂದ ಐಎನ್‌ಸಿ ಟಿವಿ

|
Google Oneindia Kannada News

ನವದೆಹಲಿ, ಏಪ್ರಿಲ್ 25: ಕಾಂಗ್ರೆಸ್ ಪಕ್ಷವು ತನ್ನದೇ ಸ್ವಂತ ಡಿಜಿಟಿಲ್ ವೇದಿಕೆ 'ಐಎನ್‌ಸಿ ಟಿವಿ'ಯನ್ನು ಪಂಚಾಯತ್ ರಾಜ್ ದಿನ ಏಪ್ರಿಲ್ 24ರಂದು ಆರಂಭಿಸಿದೆ. ಆಡಳಿತಾರೂಢ ಸರ್ಕಾರವನ್ನು ಪ್ರಶ್ನಿಸುವಲ್ಲಿ ಪ್ರಮುಖ ಮಾಧ್ಯಮಗಳು ವಿಫಲವಾಗಿವೆ, ಪ್ರಶ್ನೆಗಳನ್ನು ಕೇಳಲು ಐಎನ್‌ಸಿ ಟಿವಿಗೆ ಚಾಲನೆ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಜೊತೆಗೆ ಪಕ್ಷದ ಸಂದೇಶಗಳು, ವಿಚಾರಗಳನ್ನು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಅದು ಈ ಚಾನೆಲ್ ಆರಂಭಿಸಲಾಗಿದೆ, ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಸಲುವಾಗಿ ಕಾಂಗ್ರೆಸ್ ಈ ವೇದಿಕೆಯನ್ನು ಬಳಸಿಕೊಳ್ಳಲಿದೆ ಎಂದರು.

ಕೊರೊನಾ ಲಸಿಕೆ ಅಪ್ಡೇಟ್: ಬೆಲೆ, ನೋಂದಣಿ ಸಂಪೂರ್ಣ FAQsಕೊರೊನಾ ಲಸಿಕೆ ಅಪ್ಡೇಟ್: ಬೆಲೆ, ನೋಂದಣಿ ಸಂಪೂರ್ಣ FAQs

ಈಗಾಗಲೇ ಕಾಂಗ್ರೆಸ್ ತನ್ನ ಮುಖವಾಣಿಯಾಗಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹೊಂದಿದೆ. ಈಗ ಯೂಟ್ಯೂಬ್‌ನಲ್ಲಿ ತನ್ನದೇ ಚಾನೆಲ್ ಹೊಂದಲಿದ್ದು, ಪಕ್ಷಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಜನರಿಗೆ ತಲುಪಿಸಲಿದೆ.

Congress launches digital platform INC TV to asking questions

ಕೋವಿಡ್ 2ನೇ ಅಲೆ ಹೆಚ್ಚಾಗಿದ್ದು, ದೇಶದಲ್ಲಿ ಆಮ್ಲಜನಕದ ಕೊರತೆ ಎದುರಾಗಿದ್ದು, ಜೀವರಕ್ಷಕ ಔಷಧ ಲಭ್ಯತೆಯೂ ಸಿಗದಂತಾಗಿದೆ, ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಹಿರಿಯ ಮುಖಂಡ ಅಜಯ್ ಮಾಕೇನ್ ಆರೋಪಿಸಿದ್ದಾರೆ.

ಸರ್ಕಾರವನ್ನು ಪ್ರಶ್ನಿಸಿ, ಸತ್ಯಾಸತ್ಯತೆ ಮುಂದಿಡಲು ಕಾಂಗ್ರೆಸ್ ತನ್ನ ಐಟಿ ಸೆಲ್ ಬಲಪಡಿಸಿಕೊಂಡಿದ್ದು, 5 ಲಕ್ಷಕ್ಕೂ ಅಧಿಕ ಮಂದಿ ನೇಮಕ ಮಾಡಿಕೊಂಡಿದೆ.

English summary
Congress leader KC Venugopal said that the mainstream media is afraid of asking questions to the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X