ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಿ ಶಕ್ತಿಗಳ ಭಾಷೆಯಲ್ಲಿ ಕಾಂಗ್ರೆಸ್ ಮಾತನಾಡುತ್ತಿದೆ: ಕಿರಣ್ ರಿಜಿಜು

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 28: ಭಾರತೀಯ ಸೇನಾ ಪಡೆ ಯೋಧರ ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಿಡುಗಡೆ ಮಾಡಿರುವ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು, ಕಾಂಗ್ರೆಸ್ ಪ್ರತ್ಯೇಕತಾವಾದಿಗಳು, ಪಾಕಿಸ್ತಾನಿ ಶಕ್ತಿಗಳ ರೀತಿ ಮಾತನಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

"ಐದು ದಶಕ ದೇಶವನ್ನು ಆಳಿದ ಕಾಂಗ್ರೆಸ್ ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ತಾನಿ ಶಕ್ತಿಗಳ ರೀತಿಯಲ್ಲಿ ಮಾತನಾಡುತ್ತಿರುವುದು ಅಚ್ಚರಿಯನ್ನು ಉಂಟುಮಾಡಿದೆ," ಎಂದು ಕಿರಣ್ ರಿಜಿಜು ಪ್ರತಿಕ್ರಿಯೆ ನೀಡಿದ್ದಾರೆ.

ಉಗ್ರರ ಹುಟ್ಟಡಗಿಸಿದ್ದ ಸರ್ಜಿಕಲ್ ಸ್ಟ್ರೈಕ್‌ನ ವಿಡಿಯೋ ಬಿಡುಗಡೆಉಗ್ರರ ಹುಟ್ಟಡಗಿಸಿದ್ದ ಸರ್ಜಿಕಲ್ ಸ್ಟ್ರೈಕ್‌ನ ವಿಡಿಯೋ ಬಿಡುಗಡೆ

ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ಗೆ ದಾಖಲೆ ಕೇಳಿತ್ತು. ಇದೀಗ ಸಾಕ್ಷಿ ನೀಡಿದರೆ, ಅವರು ಇದೆಲ್ಲಾ ಪ್ರಚಾರಕ್ಕೆ ಎನ್ನುತ್ತಿದ್ದಾರೆ ಎಂಬುದಾಗಿ ರಿಜಿಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Congress language is in tune with Pakistani establishment: Kiren Rijiju

ಇಂದು ಬೆಳಿಗ್ಗೆ ವಿವಿಧ ಚಾನೆಲ್ ಗಳಲ್ಲಿ ಪ್ರಸಾರವಾದ ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, "ಆಡಳಿತ ಪಕ್ಷಕ್ಕೆ ಗೊತ್ತಿರಲಿ, ಅವರು ಸೈನಿಕರ ಬಲಿದಾನವನ್ನು ಮತಗಳಿಕೆಯ ಸಾಧನವನ್ನಾಗಿ ಬಳಸಿಕೊಳ್ಳಬಾರದು. ಹುತಾತ್ಮರಾಗಿದ್ದು ಸೈನಿಕರು, ಆದರೆ ವೈಭವೀಕರಣಗೊಳ್ಳುತ್ತಿರುವುದು ಮೋದೀ...' ಎಂದು ಬಿಜೆಪಿಗೆ ತಪರಾಕಿ ನೀಡಿದ್ದರು.

English summary
"Surprised that Congress that ruled India for more than 5 decades, is speaking in a language which is in tune with separatists and Pakistani establishment. Congress demanded proof of surgical strike, and now when proof has started emerging, they're saying it's for publicity," said Union minister Kiren Rijiju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X