ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಪಿಚ್ಚರ್: ಹಳ್ಳಿಗರ ಸಿಟ್ಟಿಗೆ ಸಿಲುಕಿ ನೂರು ದಾಟಲಿಲ್ಲ ಭಾಜಪ

|
Google Oneindia Kannada News

ಗುಜರಾತ್ ನಲ್ಲಿ ಬಿಜೆಪಿ ಮೇಲಿನ ಒಲವು ನಗರ ಪ್ರದೇಶಗಳಲ್ಲಿ ಕಡಿಮೆ ಆಗಿಲ್ಲ. ಆದರೆ ನಿಜವಾದ ಸಿಟ್ಟು ವ್ಯಕ್ತವಾಗಿರುವುದು ಗ್ರಾಮೀಣ ಪ್ರದೇಶದಲ್ಲೇ. ಚುನಾವಣಾ ಪೂರ್ವ ಸಮೀಕ್ಷೆಯಲ್ಲೂ ಈ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಆದರೆ ಫಲಿತಾಂಶ ಬಂದ ನಂತರ ಈ ವಿಚಾರ ಪಕ್ಕಾ ಆಗಿದೆ. ಅಸಲಿಗೆ ಸೀಟಿನ ಲೆಕ್ಕಾಚಾರದಲ್ಲಿ ಗುಜರಾತ್ ನಲ್ಲಿ ಆಗಿದ್ದೇನು?

ಗುಜರಾತ್ ಫಲಿತಾಂಶ, ಬಿಜೆಪಿಗೆ 'ಹೀನಾಯ ಗೆಲುವು': ಕುಮಾರಸ್ವಾಮಿಗುಜರಾತ್ ಫಲಿತಾಂಶ, ಬಿಜೆಪಿಗೆ 'ಹೀನಾಯ ಗೆಲುವು': ಕುಮಾರಸ್ವಾಮಿ

ನಗರ ಪ್ರದೇಶಗಳಲ್ಲಿನ ಒಟ್ಟು ಸ್ಥಾನ 55ರಲ್ಲಿ ಬಿಜೆಪಿ 43 ಹಾಗೂ ಕಾಂಗ್ರೆಸ್ 12ರಲ್ಲಿ ವಿಜಯ ಮಾಲೆ ಧರಿಸಿದೆ. ಇನ್ನು ಗ್ರಾಮೀಣ ಪ್ರದೇಶದ ಒಟ್ಟು ಸ್ಥಾನ 127ರಲ್ಲಿ 56ರಲ್ಲಿ ಮಾತ್ರ ಬಿಜೆಪಿ ವಿಜಯಿಯಾಗಿದ್ದರೆ, ಕಾಂಗ್ರೆಸ್ 71 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಇಲ್ಲಿ ಫಲಿತಾಂಶದ ನಿಜವಾದ ವ್ಯತ್ಯಾಸ ಕಂಡುಬರುತ್ತಿದೆ.

 Congress grab the seats from BJP in rural Gujarat

ಅಪನಗದೀಕರಣದ ನಕಾರಾತ್ಮಕ ಪ್ರಭಾವ ಹೆಚ್ಚಿನ ಮಟ್ಟದಲ್ಲಿ ಆಗಿರುವುದು ಗ್ರಾಮೀಣ ಪ್ರದೇಶದಲ್ಲೇ. ಅದರ ಮೇಲೆ ಬರೆ ಎಳೆದಂತೆ ಬಂದಿದ್ದು ಜಿಎಸ್ ಟಿ ಜಾರಿ. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗದ ಪ್ರಭಾವ, ನಗದು ಹೊಂದಿಸಲು ಪಟ್ಟ ಪಡಿಪಾಟಲು ಇಂಥ ಅಂಶಗಳೆಲ್ಲ ಬಿಜೆಪಿಗೆ ಉಲ್ಟಾ ಹೊಡೆಯಬಹುದು ಎಂಬ ಆತಂಕ ಬಹುತೇಕ ನಿಜವಾದಂತಿದೆ.

ಆದರೆ, ಅಧಿಕಾರ ಕೇಂದ್ರದಿಂದ ಬಿಜೆಪಿಯನ್ನು ದೂರ ಮಾಡುವಂಥ ಬೆಳವಣಿಗೆ ಆಗಿಲ್ಲ ಎಂಬುದೇ ಕೇಸರಿ ಪಕ್ಷಕ್ಕೆ ಸಮಾಧಾನಕರ ವಿಚಾರ.

English summary
Gujarat assembly election result out on Monday (December 18th). How the urban and rural seats divided between Congress and BJP? Here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X