ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಿಯಾಂಕ ಎಂಟ್ರಿಯ ನಂತರ ಕಾಂಗ್ರೆಸ್ ಹೊಸ ಸದಸ್ಯತ್ವಕ್ಕೆ ಎಲ್ಲೆಲ್ಲೂ ಜನಸಾಗರ

|
Google Oneindia Kannada News

ಒಳ್ಳೆಯದಕ್ಕೋ, ಕೆಟ್ಟದಕ್ಕೋ, ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ನೋಡಿದಾಗ 'ಇಂದ್ರಮ್ಮ'ನ್ನ ನೋಡಿದ ಹಾಗೆ ಆಗುತ್ತೆ ಎನ್ನುವುದು ಜನಸಾಮಾನ್ಯರಲ್ಲಿ ಬರುವ ಮಾತು. ಇದರ ಜೊತೆಗೆ, ಮತದಾರರ ಜೊತೆ ಬೆರೆಯುವ ಕಲೆಯೂ ಇವರಿಗೆ ಸಿದ್ದಿಸಿದೆ ಎಂದರೆ ತಪ್ಪಾಗಲಾರದು.

ಇಷ್ಟಿದ್ದರೂ, ಸಕ್ರಿಯ ರಾಜಕಾರಣದಿಂದ ದೂರವಿದ್ದ ಪ್ರಿಯಾಂಕ ಅವರನ್ನು ವಾಪಸ್ ಪಕ್ಷಕ್ಕೆ ಕರೆತಂದಿದ್ದು, ರಾಹುಲ್ ವೈಫಲ್ಯಕ್ಕಾಗಿಯೋ ಅಥವಾ ಕಾಂಗ್ರೆಸ್ಸಿನ ಇತರ ಯುವ ಮುಖಂಡರು ಮೇಲ್ಪಂಕ್ತಿಗೆ ಬರಬಾರದು ಎನ್ನುವ ಉದ್ದೇಶ ಇದರ ಹಿಂದೆ ಇದೆಯೋ, ಗೊತ್ತಿಲ್ಲ? ಒಟ್ಟಿನಲ್ಲಿ ಪ್ರಿಯಾಂಕ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ನಂತರ, ಸದಸ್ಯತ್ವ ನೊಂದಾಣಿಯಲ್ಲಿ ಗಣನೀಯ ಹೆಚ್ಚಳ ಕಂಡು ಬರುತ್ತಿದೆ.

ಒಂದಂತೂ ಗಮನಿಸಬೇಕಾದ ವಿಚಾರವೇನಂದರೆ, ಪ್ರಿಯಾಂಕ ತನ್ನ ಸಹೋದರನಂತೆ ಲೂಸ್ ಟಾಕ್ (ಬಹಳಷ್ಟು ಉದಾಹರಣೆಗಳು ನಮ್ಮ ಮುಂದೆ ಇರುವುದರಿಂದ) ಹೇಳಿಕೆ ನೀಡುವವರಲ್ಲ ಎಂದು ಇದುವರೆಗಿನ ಅವರ ರಾಜಕೀಯ ನಡೆಯಿಂದ ಅರ್ಥ ಮಾಡಿಕೊಳ್ಲಬಹುದಾದ ವಿಚಾರ.

ಪ್ರಿಯಾಂಕಾ ಎಲ್ಲಿಂದ ಸ್ಪರ್ಧಿಸಲಿದ್ದಾರೆ? ಊಹಾಪೋಹಕ್ಕೆ ಕಡೆಗೂ ತೆರೆ! ಪ್ರಿಯಾಂಕಾ ಎಲ್ಲಿಂದ ಸ್ಪರ್ಧಿಸಲಿದ್ದಾರೆ? ಊಹಾಪೋಹಕ್ಕೆ ಕಡೆಗೂ ತೆರೆ!

ವರ್ಷಗಳ ನಂತರ ಮೋದಿ ಮತ್ತು ಅಮಿತ್ ಶಾ ಅವರ ತವರೂರು ಗುಜರಾತ್ ನಲ್ಲಿ ಪ್ರಿಯಾಂಕ, ಪಕ್ಷದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಾನಿಲ್ಲಿ ಭಾಷಣ ಮಾಡಬೇಕು ಎನ್ನುವುದು ನನಗೆ ಮುಂಚಿತವಾಗಿಯೇ ಗೊತ್ತಿರಲಿಲ್ಲ ಎಂದಿದ್ದಾರೆ. ಅಹಮದಾಬಾದ್ ನಲ್ಲಿ ನಡೆದ ಸಭೆಯಲ್ಲಿ ನಿರೀಕ್ಷೆಯಂತೆ, ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಪ್ರಿಯಾಂಕ ಎಂಟ್ರಿಯ ನಂತರ ಹೊಸ ನೊಂದಾಣಿ ಆಗಿದ್ದು ಎಷ್ಟು?

ಪೂರ್ವ ಉತ್ತರಪ್ರದೇಶದ ಉಸ್ತುವಾರಿಯನ್ನಾಗಿ ಪ್ರಿಯಾಂಕ ನಿಯೋಜನೆ

ಪೂರ್ವ ಉತ್ತರಪ್ರದೇಶದ ಉಸ್ತುವಾರಿಯನ್ನಾಗಿ ಪ್ರಿಯಾಂಕ ನಿಯೋಜನೆ

ಲೋಕಸಭಾ ಚುನಾವಣೆಗೂ ಮುನ್ನ, ಪೂರ್ವ ಉತ್ತರಪ್ರದೇಶದ ಉಸ್ತುವಾರಿಯನ್ನಾಗಿ ಪ್ರಿಯಾಂಕ ಅವರನ್ನು ಎಐಸಿಸಿ ನಿಯೋಜಿಸಿದೆ. ವಾರಣಾಸಿ, ಗೋರಖಪುರ ಮುಂತಾದ ಹಲವು ಪ್ರಮುಖ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವಂತಹ ಭಾಗವಿದು. ಪ್ರಿಯಾಂಕ ರಾಜಕಾರಣಕ್ಕೆ ಎಂಟ್ರಿ ಕೊಡುವ ಸುಳಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗಿದ್ದು, ಸಹೋದರ ರಾಹುಲ್ ತನ್ನ, ಪಕ್ಷದ ಮತ್ತು ಕುಟುಂಬದ ವರ್ಚಸ್ಸನ್ನು ಸಾಬೀತು ಪಡಿಸುವಲ್ಲಿ ವಿಫಲವಾಗುತ್ತಾ ಬರುತ್ತಿದ್ದದ್ದು.

ಪ್ರಿಯಾಂಕಾ ಗಾಂಧಿ ಮೊದಲ ಭಾಷಣದಲ್ಲಿ ಮೋದಿ ವಿರುದ್ಧ ವಾಗ್ದಾಳಿ ಪ್ರಿಯಾಂಕಾ ಗಾಂಧಿ ಮೊದಲ ಭಾಷಣದಲ್ಲಿ ಮೋದಿ ವಿರುದ್ಧ ವಾಗ್ದಾಳಿ

ಎಂಟ್ರಿ ಕೊಟ್ಟ ಒಂದೇ ಗಂಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್

ಎಂಟ್ರಿ ಕೊಟ್ಟ ಒಂದೇ ಗಂಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್

46ವರ್ಷದ ಪ್ರಿಯಾಂಕ ರಾಜಕೀಯ ಎಂಟ್ರಿಗೆ ಕಾಂಗ್ರೆಸ್ ಮುಖಂಡರಿಂದ ಮತ್ತು ಕಾರ್ಯಕರ್ತರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಗೊತ್ತೇ ಇದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟ ಒಂದೇ ಗಂಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಅವರನ್ನು ಫಾಲೋ ಮಾಡಲಾರಂಭಿಸಿದರು. ಫೆಬ್ರವರಿ ತಿಂಗಳಲ್ಲಿ ಪ್ರಿಯಾಂಕ ಟ್ವಿಟ್ಟರ್ ಗೆ ಪ್ರವೇಶಿಸಿದ್ದರು. ಅಂದಿನಿಂದ ಇಂದಿನವರೆಗೆ (ಮಾ 13) ಸುಮಾರು 2.5ಲಕ್ಷ ಫಾಲೋವರ್ಸ್ ಅನ್ನು ಪ್ರಿಯಾಂಕ ಹೊಂದಿದ್ದಾರೆ.

'ನನ್ನಿಂದ ಪವಾಡ ನಿರೀಕ್ಷಿಸಬೇಡಿ, ಬೂತ್ ಮಟ್ಟದಲ್ಲಿ 'ಕೈ' ಬಲಪಡಿಸಿ' 'ನನ್ನಿಂದ ಪವಾಡ ನಿರೀಕ್ಷಿಸಬೇಡಿ, ಬೂತ್ ಮಟ್ಟದಲ್ಲಿ 'ಕೈ' ಬಲಪಡಿಸಿ'

ಹತ್ತು ಲಕ್ಷಕ್ಕೂ ಹೆಚ್ಚು ಜನರು ಕಾಂಗ್ರೆಸ್ ಪಕ್ಷದ ನೊಂದಾಣಿ ಮಾಡಿಕೊಂಡಿದ್ದಾರೆ

ಹತ್ತು ಲಕ್ಷಕ್ಕೂ ಹೆಚ್ಚು ಜನರು ಕಾಂಗ್ರೆಸ್ ಪಕ್ಷದ ನೊಂದಾಣಿ ಮಾಡಿಕೊಂಡಿದ್ದಾರೆ

ಇದಕ್ಕಿಂತಲೂ ಗಮನಿಸಬೇಕಾದ ವಿಚಾರವೇನಂದರೆ, ಪ್ರಿಯಾಂಕ ರಾಜಕೀಯ ಪ್ರವೇಶದ ನಂತರ, ಹತ್ತು ಲಕ್ಷಕ್ಕೂ ಹೆಚ್ಚು ಜನರು ಕಾಂಗ್ರೆಸ್ ಪಕ್ಷದ ನೊಂದಾಣಿ ಮಾಡಿಕೊಂಡಿದ್ದಾರೆ. ಚುನಾವಣೆಯ ವೇಳೆ, ಪಕ್ಷದ ಪರವಾಗಿ ಪ್ರಚಾರ ಮಾಡಲು, ಮನೆಮನೆ ತೆರಳಲು ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಹೆಚ್ಚಿನ ಬಲ ಬಂತಾಗಿದೆ.

ತಮಿಳುನಾಡಿನಲ್ಲಿ ಕೂಡಾ, ಎರಡುವರೆ ಲಕ್ಷ ಹೊಸ ನೊಂದಾಣಿ

ತಮಿಳುನಾಡಿನಲ್ಲಿ ಕೂಡಾ, ಎರಡುವರೆ ಲಕ್ಷ ಹೊಸ ನೊಂದಾಣಿ

ಕಾಂಗ್ರೆಸ್ ಪಕ್ಷದ ಡೇಟಾ ವಿಭಾಗದ ಪ್ರಕಾರ, ಪ್ರಿಯಾಂಕ ಎಂಟ್ರಿಯ ಹೆಚ್ಚಿನ ಲಾಭ ಉತ್ತರಪ್ರದೇಶದ ಕಾಂಗ್ರೆಸ್ ಘಟಕಕ್ಕೆ ಆಗಿದೆ. ಒಂದೂವರೆ ಲಕ್ಷವಿದ್ದ ಬೂತ್ ವರ್ಕರ್ಸ್ ಸಂಖ್ಯೆ ಮೂರೂವರೆ ಲಕ್ಷಕ್ಕೆ ಏರಿದೆ. ಇದೇ ರೀತಿ ತಮಿಳುನಾಡಿನಲ್ಲಿ ಕೂಡಾ, ಎರಡುವರೆ ಲಕ್ಷ ಹೊಸ ನೊಂದಾಣಿಯನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ.

ಬೂತ್ ಲೆವೆಲ್ ಕಾರ್ಯಕರ್ತರ ಸಂಖ್ಯೆ 5.4 ಮಿಲಿಯನ್ ನಿಂದ 6.4 ಮಿಲಿಯನ್ ಗೆ

ಬೂತ್ ಲೆವೆಲ್ ಕಾರ್ಯಕರ್ತರ ಸಂಖ್ಯೆ 5.4 ಮಿಲಿಯನ್ ನಿಂದ 6.4 ಮಿಲಿಯನ್ ಗೆ

ಒಟ್ಟಾರೆಯಾಗಿ, ದೇಶದಲ್ಲಿ ಪ್ರಿಯಾಂಕ ರಾಜಕೀಯ ಪ್ರವೇಶದ ನಂತರ ಪಕ್ಷದ ಬೂತ್ ಲೆವೆಲ್ ಕಾರ್ಯಕರ್ತರ ಸಂಖ್ಯೆ 5.4 ಮಿಲಿಯನ್ ನಿಂದ 6.4 ಮಿಲಿಯನ್ ಗೆ ಏರಿದೆ. ಇದು ಕಳೆದ ನಾಲ್ಕು ವಾರದಲ್ಲಾದ ಬದಲಾವಣೆ. ಫೆಬ್ರವರಿ ಆರರಂದು, ಪ್ರಿಯಾಂಕ, ಪೂರ್ವ ಉತ್ತರಪ್ರದೇಶದ ಉಸ್ತುವಾರಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದರು.

English summary
Priyanka Gandhi’s entry to the political landscape seems to have given a boost to the Congress cadre across the country with more than one million fresh registration of booth workers recorded since her induction, the party’s data analytics department has assessed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X