ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐಸಿಸಿ ಚುನಾವಣೆ: ಖರ್ಗೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಜಿ-23 ನಾಯಕರ U-Turn?

|
Google Oneindia Kannada News

ನವದೆಹಲಿ, ಅಕ್ಟೋಬರ್ 1: ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ) ಚುನಾವಣೆಯಲ್ಲಿ ಗಾಂಧಿ ಕುಟುಂಬದ ಆಯ್ಕೆ ಆಗಿರುವ ಮಲ್ಲಿಕಾರ್ಜುನ್ ಖರ್ಗೆ ಅನ್ನು ಜಿ-23 ಬಂಡಾಯ ನಾಯಕ ತಂಡ ಸಹ ಬೆಂಬಲಿಸಿದೆ.

ಮನೀಷ್ ತಿವಾರಿ, ಆನಂದ್ ಶರ್ಮಾ, ಪೃಥ್ವಿರಾಜ್ ಚವಾಣ್ ಮತ್ತು ಭೂಪಿಂದರ್ ಹೂಡಾ ಸೇರಿದಂತೆ ಹಲವು ನಾಯಕರು ಶುಕ್ರವಾರ ಖರ್ಗೆ ನಾಮಪತ್ರಕ್ಕೆ ಸಹಿ ಹಾಕಿದ್ದಾರೆ. ಖರ್ಗೆ ಅನ್ನು ಚುನಾವಣೆಯಲ್ಲಿ ಗಾಂಧಿ ಕುಟುಂಬದ ಆದ್ಯತೆಯ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ. ಆನಂದ್ ಶರ್ಮಾ ನಿವಾಸದಲ್ಲಿ ಗುರುವಾರ ರಾತ್ರಿ ನಡೆದ ನಾಲ್ವರು ನಾಯಕರ ಸಭೆಯ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.

ಎಐಸಿಸಿ ಚುನಾವಣೆಯಲ್ಲಿ ಇತರ ಅಭ್ಯರ್ಥಿಯಾಗಿರುವ ಸಂಸದ ಶಶಿ ತರೂರ್ ಜಿ-23ರ ಭಾಗವಾಗಿರುವುದು ಮಹತ್ವ ಪಡೆದುಕೊಂಡಿದೆ. 23 ಕಾಂಗ್ರೆಸ್ ನಾಯಕರ ಗುಂಪು 2020 ಆಗಸ್ಟ್‌ನಲ್ಲಿ ಸೋನಿಯಾ ಗಾಂಧಿ ಅವರಿಗೆ ಪಕ್ಷದಲ್ಲಿ ರಚನಾತ್ಮಕ ಬದಲಾವಣೆಗಳನ್ನು ಕೋರಿ ಪತ್ರ ಬರೆದಿತ್ತು.

ಪ್ರಣಾಳಿಕೆಯಲ್ಲಿ ಭಾರತ ನಕ್ಷೆಯಲ್ಲಿ ಪ್ರಮಾದ; ಬೇಷರತ್ ಕ್ಷಮೆಯಾಚಿಸಿದ ಶಶಿ ತರೂರ್ಪ್ರಣಾಳಿಕೆಯಲ್ಲಿ ಭಾರತ ನಕ್ಷೆಯಲ್ಲಿ ಪ್ರಮಾದ; ಬೇಷರತ್ ಕ್ಷಮೆಯಾಚಿಸಿದ ಶಶಿ ತರೂರ್

ಸೋನಿಯಾಗೆ ಬರೆದ ಪತ್ರದಲ್ಲಿನ ಅಂಶಗಳ ಉಲ್ಲೇಖ:

"ಎರಡು ವರ್ಷಗಳ ಹಿಂದೆ, 2019 ರಲ್ಲಿ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನಾವು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೆವು. ನಮಗೆ ಎರಡು ಬೇಡಿಕೆಗಳಿದ್ದವು. ಮೊದಲನೆಯದಾಗಿ, ಗೋಚರಿಸುವ ಪೂರ್ಣಾವಧಿಯ ಅಧ್ಯಕ್ಷರಿರಬೇಕು ಮತ್ತು ಎರಡನೆಯದಾಗಿ ಅಧ್ಯಕ್ಷರ ಹುದ್ದೆಗೆ ಚುನಾವಣೆಗಳು ನಡೆಯಬೇಕು. ಎರಡು ವರ್ಷ ತಡವಾಗಿದ್ದರೂ ಈಗ ನಡೆಯುತ್ತಿದೆ,' ಎಂದು ಚೌವಾಣ್ ಹೇಳಿದರು.

ಆದಾಗ್ಯೂ, ಸ್ಪರ್ಧಿಸಲು ನಿರ್ಧರಿಸಿದ ನಂತರ ಸಂಸದ ಶಶಿ ತರೂರ್ ಜಿ-23 ನಾಯಕರಿಂದ ಬೆಂಬಲವನ್ನು ಕೇಳಿಲ್ಲ. ಇದರಿಂದ ಖರ್ಗೆ ಅವರನ್ನು ಬೆಂಬಲಿಸುವ ನಿರ್ಧಾರಕ್ಕೆ ಬರಲಾಗಿದೆೆ ಎಂದು ಮೂಲಗಳು ತಿಳಿಸಿವೆ.

Congress G-23 team backing Gandhi candidate Kharge for AICC president over Tharoor

"ಅವರು ಈ ಹಿಂದೆ ಗುಂಪಿನೊಂದಿಗೆ ಬೆಂಬಲ ನೀಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದರು. ಆದರೆ ಬೇರೆಯವರು ಸ್ಪರ್ಧಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಕೊಂಡ ನಂತರದಲ್ಲಿ ಅವರು ಜಿ-23 ನಾಯಕರ ಜೊತೆಗೆ ಸರಿಯಾಗಿ ಮಾತನಾಡಿಲ್ಲ, ತಮ್ಮನ್ನು ಬೆಂಬಲಿಸುವಂತೆ ಯಾವುದೇ ರೀತಿ ಮನವಿ ಮಾಡಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಮತ್ತೊಂದು ಮೂಲವು ತರೂರ್ G-23 ರ "ಎಂದಿಗೂ ಸರಿಯಾದ ಭಾಗವಾಗಿರಲಿಲ್ಲ" ಎಂದು ಹೇಳಲಾಗುತ್ತಿದೆ.

ಖರ್ಗೆ ಮತ್ತು ಶಶಿ ತರೂರ್ ಬಗ್ಗೆ ಹೋಲಿಕೆಯೇ ಇಲ್ಲ:

ಮಲ್ಲಿಕಾರ್ಜುನ್ ಖರ್ಗೆ ಯಾಕೆ ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿದರು ಎಂಬುದನ್ನು ಅವಲೋಕಿಸಿದಾಗ, ಅವರು ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದಾರೆ. ಖರ್ಗೆ ಎಂದರೆ ಎಲ್ಲ ಗುಂಪಿನ ನಾಯಕರು ಸಹ ತಮ್ಮ ಬೆಂಬಲವನ್ನು ನೀಡುತ್ತಾರೆ. ಏಕೆಂದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಮಧ್ಯೆ ಯಾವುದೇ ರೀತಿಯಲ್ಲೂ ಹೋಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಸಂಘಟನಾ ಸಾಮರ್ಥ್ಯವುಳ್ಳ ಖರ್ಗೆಗೆ ವಯಸ್ಸಿನ ಅಡ್ಡಿ:

ಮಲ್ಲಿಕಾರ್ಜುನ್ ಖರ್ಗೆ ಅತ್ಯುತ್ತಮ ಸಂಘಟನಾ ಸಾಮರ್ಥ್ಯವನ್ನು ಹೊಂದಿದ್ದಾರೆ. ಯಾವ ನಾಯಕರು ತಮ್ಮಿಂದ ಏನನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಂಡು ಮುಂದೆ ಸಾಗುವ ಸಹನಾ ಶಕ್ತಿ ಅವರಲ್ಲಿದೆ. ಆದರೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾಗಿ ಖರ್ಗೆ, ದೇಶಾದ್ಯಂತ ಸಂಚಾರ ಮಾಡಬೇಕಾಗುತ್ತದೆ. 80 ವರ್ಷದ ಮಲ್ಲಿಕಾರ್ಜುನ್ ಖರ್ಗೆ, ಪಕ್ಷವು ನಿರೀಕ್ಷಿಸಿದಂತೆ ಸಂಚಾರ ಮಾಡುವುದಕ್ಕೆ ಸಾಧ್ಯವಾಗದೇ ಇರಬಹುದು ಎಂದು ಹೇಳಲಾಗುತ್ತಿದೆೆ.

English summary
Congress G-23 team backing Gandhi candidate Kharge for AICC president over Tharoor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X