ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸುಳ್ಳುಗಳನ್ನು ದಾಖಲೆ ಮೂಲಕ ಹೊರಗೆಳೆದ ಕಾಂಗ್ರೆಸ್‌ನ ಸುರ್ಜೇವಾಲಾ

|
Google Oneindia Kannada News

ನವದೆಹಲಿ, ಅಕ್ಟೋಬರ್ 04: ಬೆಲೆ ಏರಿಕೆ ಆನೆ ಗಾತ್ರದಲ್ಲಿರಲು, ಸುಂಕ ಕಡಿತವನ್ನು ಸೊಳ್ಳೆಯ ಆಕಾರದಷ್ಟು ಮಾಡಿದೆ ಎಂದು ಕಾಂಗ್ರೆಸ್‌ ಪಕ್ಷವು ಕೇಂದ್ರದ ಅಬಕಾರಿ ಸುಂಕ ಕಡಿತ ನಿರ್ಧಾರವನ್ನು ಟೀಕಿಸಿದೆ.

ಕಾಂಗ್ರೆಸ್‌ನ ವಕ್ತಾರ ರಣದೀಪ್ ಸರ್ಜೇವಾಲಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹಲವು ದಾಖಲೆಗಳು, ಅಂಕಿ-ಅಂಶಗಳ ಮೂಲಕ ಕೇಂದ್ರದ ವಿರುದ್ಧ ವಾಗ್ದಾಳಿ ಮಾಡಿದರು. ಕೇಂದ್ರ ಇಳಿಸಿರುವ ಅಬಕಾರಿ ಸುಂಕ ಕೇವಲ ಕಣ್ಣೊರೆಸುವ ತಂತ್ರ ಎಂದು ಆರೋಪಿಸಿದರು.

ತೈಲ ಬೆಲೆ ಇಳಿಕೆ , ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ ತೈಲ ಬೆಲೆ ಇಳಿಕೆ , ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ

ಅರುಣ್ ಜೇಟ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ ಪ್ರತಿ ಮಾತಿಗೂ ಅಗತ್ಯ ದಾಖಲೆಗಳನ್ನು ಪ್ರದರ್ಶಿಸಿ ಎದುರು ಪ್ರಶ್ನೆಗಳನ್ನು ಕೇಳಿದ ಸುರ್ಜೇವಾಲಾ ಅರುಣ್ ಜೇಟ್ಲಿ ಅವರು ಸುಳ್ಳು ಹೇಳಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಅಬಕಾರಿ ಸುಂಕ ಇಳಿಕೆ, ತೈಲ ಕಂಪನಿಗಳ ಷೇರುಗಳು ಕುಸಿತ ಅಬಕಾರಿ ಸುಂಕ ಇಳಿಕೆ, ತೈಲ ಕಂಪನಿಗಳ ಷೇರುಗಳು ಕುಸಿತ

ಯುಪಿಎ ಅವಧಿಯಲ್ಲಿ ಕಚ್ಚಾತೈಲ ಬೆಲೆ ಎಷ್ಟಿತ್ತು ಆಗ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿತ್ತು ಹಾಗೂ ಬಿಜೆಪಿಯಲ್ಲಿ ಇರುವ ಕಚ್ಚಾ ತೈಲ ಬೆಲೆ ಎಷ್ಟು, ಇಂಧನ ಬೆಲೆ ಎಷ್ಟು ಎಂಬುದನ್ನು ಹೋಲಿಸಿ ಹೇಳಿದ ಸುರ್ಜೇವಾಲಾ ಬಿಜೆಪಿಯು ಪರಿಸ್ಥಿತಿಯನ್ನು ನಿಭಾಯಿಸಲು ಪೂರ್ಣವಾಗಿ ವಿಫಲವಾಗಿದೆ ಎಂದರು.

ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಜೇಟ್ಲಿ ಸುದ್ದಿಗೋಷ್ಠಿಯ ಪೂರ್ಣ ವಿವರಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಜೇಟ್ಲಿ ಸುದ್ದಿಗೋಷ್ಠಿಯ ಪೂರ್ಣ ವಿವರ

ಯುಪಿಎ ಅವಧಿಯಲ್ಲಿ ಕಚ್ಚಾತೈಲ ಬೆಲೆ 107 ಡಾಲರ್ ಇತ್ತು

ಯುಪಿಎ ಅವಧಿಯಲ್ಲಿ ಕಚ್ಚಾತೈಲ ಬೆಲೆ 107 ಡಾಲರ್ ಇತ್ತು

ಕಚ್ಚಾತೈಲ ಬೆಲೆ ಯು ಪ್ರಸ್ತುತ 86 ಡಾಲರ್ ಆಗಿದೆ ಹಾಗಾಗಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ ಎಂದು ಅರುಣ್ ಜೇಟ್ಲಿ ನೀಡಿದ ಕಾರಣ ಸುಳ್ಳು ಎಂದು ಹೇಳಿದ ಸುರ್ಜೇವಾಲಾ. ಯುಪಿಎ ಆಡಳಿತ ಅವಧಿಯಲ್ಲಿ ಕಚ್ಚಾತೈಲ ಬೆಲೆ 107 ಡಾಲರ್ ಇತ್ತು ಆದರೆ ಪೆಟ್ರೋಲ್‌ ಬೆಲೆ 75 ದಾಟಿರಲಿಲ್ಲ ಎಂದು ಸುರ್ಜೇವಾಲಾ ಹೇಳಿದರು.

ಲೂಟಿ ಮಾಡಿದ 13 ಲಕ್ಷ ಕೋಟಿ ಎಲ್ಲಿ?

ಲೂಟಿ ಮಾಡಿದ 13 ಲಕ್ಷ ಕೋಟಿ ಎಲ್ಲಿ?

ಕಳೆದ ನಾಲ್ಕು ವರ್ಷದ ಅಂತರರಾಷ್ಟ್ರೀಯ ಇಂಧನ ಬೆಲೆಯ ಸರಾಸರಿ ಲೆಕ್ಕ ಹಾಕಿದರೆ ಕೇವಲ 18 ಡಾಲರ್ ಆಗುತ್ತದೆ ಇಷ್ಟು ವರ್ಷಗಳಲ್ಲಿ ಕೇಂದ್ರವು 13 ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದೆ ಆ ಹಣವನ್ನು ಎಲ್ಲಿ ವಿನಿಯೋಗಿಸಲಾಗಿದೆ ಎಂದು ಅವರು ಪ್ರಶ್ನೆ ಮಾಡಿದರು. ಯಾವ ವರ್ಷದಲ್ಲಿ ಕಚ್ಚಾತೈಲ ಬೆಲೆ ಎಷ್ಟು ಇತ್ತು ಎಂಬುದನ್ನು ಅವರು ದಾಖಲೆ ಸಮೇತ ತೋರಿಸಿದರು.

ನಾಲ್ಕು ವರ್ಷದಲ್ಲಿ 12 ಬಾರಿ ಅಬಕಾರಿ ಸುಂಕ ಏರಿಸಿದ್ದಾರೆ

ನಾಲ್ಕು ವರ್ಷದಲ್ಲಿ 12 ಬಾರಿ ಅಬಕಾರಿ ಸುಂಕ ಏರಿಸಿದ್ದಾರೆ

ಮೋದಿ ಸರ್ಕಾರವು ಕಳೆದ ನಾಲ್ಕು ವರ್ಷದಲ್ಲಿ 12 ಬಾರಿ ಅಬಕಾರಿ ಸುಂಕ ಏರಿಸಿದ್ದಾರೆ ಎಂದ ಸುರ್ಜೇವಾಲಾ. ಒಂದು ಬಾರಿ 1.50 ರೂಪಾಯಿ ಕಡಿತ ಮಾಡಿ ದೊಡ್ಡ ಸಾಧನೆ ಮಾಡಿದಂತೆ ಕೇಂದ್ರ ಬೀಗುತ್ತಿದೆ ಎಂದು ಅವರು ಹೇಳಿದರು. ಯುಪಿಎ ಅವಧಿಯಲ್ಲಿ ಪೆಟ್ರೋಲ್‌ ಮೇಲೆ ಅಬಕಾರಿ ಸುಂಕ 9 ರೂಪಾಯಿ ಇತ್ತು ಮೋದಿ ಅವಧಿಯಲ್ಲಿ 19 ರೂಪಾಯಿ ದಾಟಿದೆ. ಡೀಸೆಲ್‌ ಮೇಲೆ 3 ರೂಪಾಯಿ ಅಬಕಾರಿ ಸುಂಕ ಇತ್ತು ಅದನ್ನು 15 ರೂಪಾಯಿಗೂ ಹೆಚ್ಚು ಮಾಡಿದ್ದಾರೆ ಎಂದ ಸುರ್ಜೇವಾಲಾ ಮೋದಿ ಸರ್ಕಾರ ಅಬಕಾರಿ ಸುಂಕ ಏರಿಸಿದ ದಿನಾಂಕ ಸಮೇತ ದಾಖಲೆ ಮುಂದಿಟ್ಟರು.

ಕಡಿಮೆ ಹಣಕ್ಕೆ ಬೇರೆ ದೇಶಕ್ಕೆ ಪೆಟ್ರೋಲ್ ಮಾರುತ್ತಿದೆ ಕೇಂದ್ರ

ಕಡಿಮೆ ಹಣಕ್ಕೆ ಬೇರೆ ದೇಶಕ್ಕೆ ಪೆಟ್ರೋಲ್ ಮಾರುತ್ತಿದೆ ಕೇಂದ್ರ

ದೆಹಲಿಯಲ್ಲಿ ಪೆಟ್ರೋಲ್‌ 90 ರೂಪಾಯಿ ದಾಟಿದೆ ಆದರೆ ಮೋದಿ ಸರ್ಕಾರ 15 ದೇಶಗಳಿಗೆ ಪೆಟ್ರೋಲ್‌ ಅನ್ನು 37 ರೂಪಾಯಿ ಲೀಟರ್‌ನಂತೆ ಮಾರಾಟ ಮಾಡುತ್ತಿದ್ದಾರೆ. ಡೀಸೆಲ್‌ ಅನ್ನು 27 ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದು ಸರ್ಕಾರವೇ ಆರ್‌ಟಿಐ ಮೂಲಕ ನೀಡಿರುವ ಮಾಹಿತಿ ಎಂದು ಸುರ್ಜೇವಾಲಾ ಮತ್ತೊಂದು ದಾಖಲೆ ಮುಂದಿಟ್ಟರು. ನಮ್ಮ ದೇಶದ ಜನರಿಗೆ ಬಳಸಲು ಇಂಧನ ಕೊರತೆ ಇರುವಾಗ ಕಡಿಮೆ ಬೆಲೆಯಲ್ಲಿ ಬೇರೆ ದೇಶಗಳಿಗೆ ಇಂಧನ ಮಾರುತ್ತಿರುವುದೇಕೆ ಎಂದು ಸುರ್ಜೇವಾಲಾ ಪ್ರಶ್ನಿಸಿದರು.

ಬಿಜೆಪಿ ರಾಜ್ಯಗಳೇ ಹೆಚ್ಚು ವ್ಯಾಟ್‌ ವಿಧಿಸಿರುವುದು

ಬಿಜೆಪಿ ರಾಜ್ಯಗಳೇ ಹೆಚ್ಚು ವ್ಯಾಟ್‌ ವಿಧಿಸಿರುವುದು

ರಾಜ್ಯಗಳಿಗೆ ವ್ಯಾಟ್‌ ಕಡಿಮೆ ಮಾಡಲು ಹೇಳಿದ ಕ್ರಮವನ್ನು ಟೀಕಿಸಿದ ಸುರ್ಜೇವಾಲಾ. ಪೆಟ್ರೋಲ್, ಡೀಸೆಲ್ ಮೇಲೆ ಅತಿ ಹೆಚ್ಚು ವ್ಯಾಟ್ ವಿಧಿಸಿರುವುದು ಬಿಜೆಪಿ ಆಡಳಿತ ರಾಜ್ಯಗಳೇ ಎಂದರು. ಚತ್ತೀಸ್‌ಘಡ, ಗುಜರಾತ್, ಜಾರ್ಕಂಡ್, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಅಸ್ಸಾಂಗ ರಾಜ್ಯಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲೆ ಅತಿ ಹೆಚ್ಚು ವ್ಯಾಟ್‌ ವಿಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪೆಟ್ರೋಲ್, ಡೀಸೆಲ್ ಜಿಎಸ್‌ಟಿಗೆ ಸೇರಿಸಿ

ಪೆಟ್ರೋಲ್, ಡೀಸೆಲ್ ಜಿಎಸ್‌ಟಿಗೆ ಸೇರಿಸಿ

ಯುಪಿಎ ಅವಧಿಯಲ್ಲಿ ಬೆಲೆ ಅತಿ ಹೆಚ್ಚು ಇತ್ತು ಆದರೂ ನಾವು ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ನೀಡಿದೆವು ಆದರೆ ಬಿಜೆಪಿಯು ತನ್ನ ಕೆಟ್ಟ ನೀತಿಗಳಿಂದ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾಗಿದೆ ಎಂದ ಸುರ್ಜೇವಾಲಾ. ನಮ್ಮ ಬೇಡಿಕೆ ಒಂದೇ ಪೆಟ್ರೋಲ್‌, ಡೀಸೆಲ್‌ ಅನ್ನು ಜಿಎಸ್‌ಟಿ ಅಡಿಗೆ ತನ್ನಿ ಎಂದು ಮನವಿ ಮಾಡಿದರು.

English summary
AICC communication in charge held a press meet about reducing excise duty. He shows some documents what was the crude oil price when UPA in power and what is the price when BJP in power. He slams BJP for telling lie to the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X