ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#MeinBhichowkidar ಅಭಿಯಾನದ ವಿರುದ್ಧ ಕಾಂಗ್ರೆಸ್ ಆಕ್ರೋಶ

|
Google Oneindia Kannada News

ಬೆಂಗಳೂರು, ಮಾರ್ಚ್ 17 : #MeinBhichowkidar ಎಂಬ ಘೋಷಣೆ ಅಭಿಯಾನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಖಾತೆಯನ್ನು Chowkidar Narendra Modi ಎಂದು ಬದಲಿಸಿಕೊಂಡಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು ತಮ್ಮ ಟ್ವಿಟರ್ ಖಾತೆಯ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದು, 'Chowkidar' 'ಕಾವಲುಗಾರ ಎಂಬುದನ್ನು ಸೇರಿಸಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಈ ಕುರಿತು ಚರ್ಚೆಗಳು ಆರಂಭವಾಗಿವೆ.

#RaGaFromKarnataka ಕಾಂಗ್ರೆಸ್‌ ನಾಯಕರಿಂದ ಟ್ವಿಟರ್ ಅಭಿಯಾನ#RaGaFromKarnataka ಕಾಂಗ್ರೆಸ್‌ ನಾಯಕರಿಂದ ಟ್ವಿಟರ್ ಅಭಿಯಾನ

'ದೇಶದ ಜನರಿಗೆ ಯಾರು ಚೌಕಿದಾರ್ ಎಂಬುದು ಗೊತ್ತಿದೆ. ಬಿಜೆಪಿ ಸರ್ಕಾರದ ಚೌಕಿದಾರ್ ದೇಶದಲ್ಲಿನ ದೊಡ್ಡ-ದೊಡ್ಡ ಹಗರಣಗಳಿಗೆ ರಕ್ಷಣೆ ನೀಡುತ್ತಿದ್ದಾರೆ' ಎಂದು ಲೋಕಸಭಾ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಕಳ್ಳರಿಗೆಲ್ಲ 'ಮೋದಿ' ಸರ್‌ನೇಮ್ ಏಕೆ?: ರಾಹುಲ್ ಗಾಂಧಿ ಲೇವಡಿಕಳ್ಳರಿಗೆಲ್ಲ 'ಮೋದಿ' ಸರ್‌ನೇಮ್ ಏಕೆ?: ರಾಹುಲ್ ಗಾಂಧಿ ಲೇವಡಿ

'ಕಳ್ಳನೇ ಪೊಲೀಸ್ ಆಗಿ ಪೊಲೀಸರ ಗೌರವ ಕಳೆಯುತ್ತಿರುವುದು ಈ ದೇಶದ ದುರಂತ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಬಿಜೆಪಿ ನಾಯಕರ ಚೌಕಿದಾರ್ ಅಭಿಯಾನವನ್ನು ಲೇವಡಿ ಮಾಡಿದೆ...

ಲೋಕ ಕದನಕ್ಕೆ ಮೋದಿ ರೆಡಿ... ಎಲ್ಲೆಲ್ಲೂ 'ಚೌಕಿದಾರಂದೇ' ಹವಾ!ಲೋಕ ಕದನಕ್ಕೆ ಮೋದಿ ರೆಡಿ... ಎಲ್ಲೆಲ್ಲೂ 'ಚೌಕಿದಾರಂದೇ' ಹವಾ!

ಮೋದಿಯಿಂದ ಅಭಿಯಾನ

ಮೋದಿಯಿಂದ ಅಭಿಯಾನ

'ನಿಮ್ಮ ಚೌಕಿದಾರ ಗಟ್ಟಿಯಾಗಿ ನಿಂತು ದೇಶವನ್ನು ಕಾಯುತ್ತಿದ್ದೇನೆ. ಆದರೆ, ನಾನು ಏಕಾಂಗಿಯಲ್ಲ. ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರತಿ ವ್ಯಕ್ತಿಯೂ ಚೌಕಿದಾರ' ಎಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಈಗ ಟ್ವೀಟರ್‌ನಲ್ಲಿ #MeinBhichowkidar ಹ್ಯಾಷ್‌ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಮಲ್ಲಿಕಾರ್ಜುನ ಖರ್ಗೆ ಲೇವಡಿ

ಮಲ್ಲಿಕಾರ್ಜುನ ಖರ್ಗೆ ಲೇವಡಿ

ಚೌಕಿದಾರ್ ಅಭಿಯಾನದ ವಿರುದ್ಧ ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ. 'ಚೌಕಿದಾರ್ ದೇಶದ ಸಂಪತನ್ನು ರಕ್ಷಣೆ ಮಾಡುವ ಬದಲು ಬೇರೆಯವರು ದುಡ್ಡು ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ದೇಶದ ಜನರಿಗೆ ಯಾರು ಚೌಕಿದಾರ್ ಎಂಬುದು ಗೊತ್ತಿದೆ' ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಟ್ವೀಟ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಕಳ್ಳನೇ ಪೊಲೀಸ್ ಆಗಿ ಪೊಲೀಸರ ಗೌರವ ಕಳೆಯುತ್ತಿರುವುದು ಈ ದೇಶದ ದುರಂತ. ಈ ಸೋಂಕು ಊರೆಲ್ಲಾ ಹರಡಿ ದೇಶದ ಕಳ್ಳರೆಲ್ಲಾ ಪೊಲೀಸ್ ಆಗಲು (#MeinBhichowkidar ) ಹೊರಟವ್ರೆ' ಎಂದು ಲೇವಡಿ ಮಾಡಿದ್ದಾರೆ.

ಮಾಯಾವತಿ ಟೀಕೆ

ಮಾಯಾವತಿ ಟೀಕೆ

ಬಿಸ್ಪಿ ನಾಯಕಿ ಕುಮಾರಿ ಮಾಯಾವತಿ ಅವರು ಸಹ ಬಿಜೆಪಿಯ ಅಭಿಯಾನವನ್ನು ಟೀಕಿಸಿದ್ದಾರೆ. 'ಮೋದಿ ಸರ್ಕಾರ ತನ್ನ ವೈಫಲ್ಯಗಳಿಂದ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಉಪಯೋಗವಿಲ್ಲದ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ' ಎಂದು ಆರೋಪಿಸಿದ್ದಾರೆ.

English summary
Congress criticized MeinBhichowkidar campaign by BJP for Lok sabha elections 2019. Narendra Modi announced programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X