ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್ ಗಢ ಸಿಎಂ ಆಗಿ ಭೂಪೇಶ್ ಬಘೇಲ್ ಪ್ರಮಾಣ ವಚನ

|
Google Oneindia Kannada News

ರಾಯ್ಪುರ, ಡಿಸೆಂಬರ್ 18: ಛತ್ತೀಸ್ ಗಢ ಮುಖ್ಯಮಂತ್ರಿಯಾಗಿ ಹಿರಿಯ ಕಾಂಗ್ರೆಸ್ ಮುಖಂಡ ಭೂಪೇಶ್ ಭಘೇಲ್ ಅವರು ಸೋಮವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು.

ಛತ್ತೀಸ್ ಗಢದ ರಾಜಧಾನಿ ರಾಯ್ಪುರದ ಬಲ್ಬಿರ್ ಸಿಂಗ್ ಜುನೆಜಾ ಒಳಾಂಗಣ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಿಯೋಜಿಸಲಾಗಿತ್ತು.

ವ್ಯಕ್ತಿಚಿತ್ರ : ಛತ್ತೀಸ್ ಗಡದ ಕಾಂಗ್ರೆಸ್ಸಿನ ನೇತಾರ ಸಿಎಂ ಭೂಪೇಶ್ ಬಘೇಲ್ ವ್ಯಕ್ತಿಚಿತ್ರ : ಛತ್ತೀಸ್ ಗಡದ ಕಾಂಗ್ರೆಸ್ಸಿನ ನೇತಾರ ಸಿಎಂ ಭೂಪೇಶ್ ಬಘೇಲ್

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ರಾಜ್ಯಪಾಲರಾದ ಆನಂದಿಬೆನ್ ಪಾಟೀಲ್ ಅವರು ಪ್ರಮಾಣ ವಚನ ಬೋಧಿಸಿದರು.

Congress Bhupesh Baghel takes oath as Chhattisgarh Chief Minister

ಛತ್ತೀಸ್ ಗಢದಲ್ಲಿ ನ.12 ಮತ್ತು 20 ರಂದು ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಡಿ.11 ರಂದು ಹೊರಬಿದ್ದಿತ್ತು. ಒಟ್ಟು 90 ಕ್ಷೇತ್ರಗಳ ಛತ್ತೀಸ್ ಗಢ ವಿಧಾನಸಭೆಯಲ್ಲಿ ಕಾಂಗ್ರೆಸ್ 68 ಬಿಜೆಪಿ 15 ಮತ್ತು ಬಿಎಸ್ಪಿ 07 ಕ್ಷೇತ್ರಗಳಲ್ಲಿ ಗೆದ್ದಿದ್ದವು.

ಸೋಮವಾರ ಛತ್ತೀಸ್ ಗಢ ಮಾತ್ರವಲ್ಲದೆ, ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಮತ್ತು ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರು ಸಹ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

ಭೂಪೇಶ್ ಬಘೇಲ್ ಛತ್ತೀಸ್ ಗಢದ ಮುಖ್ಯಮಂತ್ರಿ, ರೈತರ ಸಾಲ ಮನ್ನಾ ಮೊದಲ ಘೋಷಣೆಭೂಪೇಶ್ ಬಘೇಲ್ ಛತ್ತೀಸ್ ಗಢದ ಮುಖ್ಯಮಂತ್ರಿ, ರೈತರ ಸಾಲ ಮನ್ನಾ ಮೊದಲ ಘೋಷಣೆ

ಛತ್ತೀಸ್ ಗಢ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೂಪೇಶ್ ಬಘೇಲ್ ಅವರು ಅಕ್ಟೋಬರ್ 2014ರಿಂದ ಅಧಿಕಾರ ನಡೆಸಿದ್ದಾರೆ. ದುರ್ಗ್ ಜಿಲ್ಲೆಯ ಪಟಾನ್ ಕ್ಷೇತ್ರದ ಅಭ್ಯರ್ಥಿ. ಈ ಹಿಂದೆ ದಿಗ್ವಿಜಯ್ ಸಿಂಗ್ ಅವರ ಸರ್ಕಾರದಿಂದ ಸಚಿವರಾಗಿದ್ದರು. ಸಾರಿಗೆ ಸಚಿವರಾಗಿ ಉತ್ತಮ ಹೆಸರು ಗಳಿಸಿದರು. ಛತ್ತೀಸ್ ಗಢ ರಾಜ್ಯ ಉದಯವಾದ ಬಳಿಕ ಬಘೇಲ್ ಅವರು ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

English summary
Senior Congress leader Bhupesh Baghel on Monday took the oath as the Chief Minister of Chhattisgarh. The oath-taking ceremony took place at Balbir Singh Juneja Indoor Stadium in Raipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X