ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಣದೀಪ್ ಸುರ್ಜೇವಾಲಾ ಸೇರಿ ಕಾಂಗ್ರೆಸ್‌ನ 5 ಹಿರಿಯ ನಾಯಕರ ಟ್ವಿಟ್ಟರ್ ಲಾಕ್

|
Google Oneindia Kannada News

ನವದೆಹಲಿ, ಆಗಸ್ಟ್ 12: ಕಾಂಗ್ರೆಸ್‌ನ ವಕ್ತಾರ ರಣದೀಪ್ ಸುರ್ಜೇವಾಲಾ ಸೇರಿ ಕಾಂಗ್ರೆಸ್‌ನ 5 ಹಿರಿಯ ನಾಯಕರ ಟ್ವಿಟ್ಟರ್ ಖಾತೆ ಲಾಕ್‌ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಿದ ನಂತರ ಇದೀಗ 5 ಮಂದಿ ಕಾಂಗ್ರೆಸ್ ಹಿರಿಯ ನಾಯಕರ ಟ್ವಿಟ್ಟರ್ ಖಾತೆಯನ್ನು ಲಾಕ್‌ ಮಾಡಲಾಗಿದೆ.

ರಾಹುಲ್ ಗಾಂಧಿ ಟ್ವಿಟರ್ ಖಾತೆ ಬಂದ್: ಯುವ ಕಾಂಗ್ರೆಸ್‌ನಿಂದ ಉಗ್ರ ಪ್ರತಿಭಟನೆ!ರಾಹುಲ್ ಗಾಂಧಿ ಟ್ವಿಟರ್ ಖಾತೆ ಬಂದ್: ಯುವ ಕಾಂಗ್ರೆಸ್‌ನಿಂದ ಉಗ್ರ ಪ್ರತಿಭಟನೆ!

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಅಜಯ್ ಮಾಕೆನ್, ಮಾಣಿಕ್ಕಂ ಟಾಗೋರ್, ಜಿತೇಂದ್ರ ಸಿಂಗ್, ಸುಶ್ಮಿತಾ ದೇವ್ ಅವರ ಟ್ವಿಟ್ಟರ್ ಲಾಕ್‌ ಮಾಡಲಾಗಿದೆ.
ಆದರೆ ಭಾರತೀಯ ಕಾಂಗ್ರೆಸ್‌ನ ಪ್ರತಿಭಟನೆ ಮುಂದುವರೆಯಲಿದೆ ಎಂದು ಕಾಂಗ್ರೆಸ್ ಹೇಳಿದೆ.

Congress Alleges Twitter Handles Of 5 Senior Leaders, Including Randeep Surjewala, Locked

ರಾಹುಲ್ ಗಾಂಧಿ ಅವರು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಿದ್ದ ಚಿತ್ರವೊಂದು ವಿವಾದ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಅಮಾನತುಗೊಳಿಸಲಾಗಿತ್ತು.

ದಿಲ್ಲಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ದಲಿತ ಬಾಲಕಿಯ ಮನೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಬಾಲಕಿಯ ಪೋಷಕರಿಗೆ ಸಮಾಧಾನ ಹೇಳುವ ಚಿತ್ರವನ್ನು ಹಂಚಿಕೊಂಡಿದ್ದರು.

ಪೋಷಕರ ಚಿತ್ರವನ್ನು ಹಂಚಿಕೊಂಡಿರುವುದರಿಂದ ಬಾಲಕಿಯ ಗುರುತು ಬಹಿರಂಗವಾಗುವ ಅಪಾಯವಿದೆ. ಇದು ಪೋಕ್ಸೋ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್), ಟ್ವಿಟ್ಟರ್ ಹಾಗೂ ದಿಲ್ಲಿ ಪೊಲೀಸರಿಗೆ ಪತ್ರ ಬರೆದಿತ್ತು.

ಇತ್ತೀಚೆಗೆ ಭಾರತದ ಖ್ಯಾತನಾಮರ ಟ್ವಿಟ್ಟರ್​​ ಅಕೌಂಟ್​ಗಳಲ್ಲಿ ಅಡಚಡಣೆಗಳು ಸಾಮಾನ್ಯವಾಗಿ ಹೋಗಿದೆ. ಭಾರತ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​​ ಮಹೇಂದ್ರ ಧೋನಿ ಅಕೌಂಟ್​​ನ ಬ್ಲೂ ಟಿಕ್​​​ ಮಾಯಾವಾಗಿತ್ತು.

ಕೆಲ ಸಮಯದ ಬಳಿಕ ಬ್ಲೂ ಟಿಕ್​​ ಮರಳಿತ್ತು. ಈಗ ಕಾಂಗ್ರೆಸ್​ ವರಿಷ್ಠ ರಾಹುಲ್​​ ಗಾಂಧಿ ಅವರು ಟ್ವಿಟ್ಟರ್​ ಖಾತೆ ತಾತ್ಕಾಲಿಕವಾಗಿ ಅಮಾನತ್ತಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ರಾಹುಲ್​​ ಗಾಂಧಿ ಅವರು ಟ್ವಿಟ್ಟರ್​ ಖಾತೆ ತಾತ್ಕಾಲಿಕವಾಗಿ ಅಮಾನತ್ತಾಗಿದೆ ಎಂದು ತಿಳಿಸಿ ಟ್ವೀಟ್​ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರು ಹಂಚಿಕೊಂಡ ಚಿತ್ರವನ್ನು ಟ್ವಿಟ್ಟರ್‌ನಿಂದ ತೆಗೆದುಹಾಕಬೇಕು ಎಂದು ಆಯೋಗ ಸೂಚನೆ ನೀಡಿತ್ತು. ಅದರಂತೆ ಟ್ವಿಟ್ಟರ್ ಶನಿವಾರ ಕ್ರಮ ಕೈಗೊಂಡಿದ್ದು, ರಾಹುಲ್ ಅವರ ಖಾತೆಯಲ್ಲಿದ್ದ ಚಿತ್ರ ಹಾಗೂ ಬರಹವಿದ್ದ ಪೋಸ್ಟ್ ಅನ್ನು ತೆರವುಗೊಳಿಸಿದೆ. ಅದರ ಮಾರನೇ ದಿನ ರಾಹುಲ್ ಅವರ ಖಾತೆ ಲಾಕ್ ಆಗಿದೆ.

'ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯು ತಾತ್ಕಾಲಿಕವಾಗಿ ಅಮಾನತುಗೊಂಡಿದ್ದು, ಅದರ ಮರುಸ್ಥಾಪನೆಗೆ ಅಗತ್ಯ ಪ್ರಕ್ರಿಯೆ ನಡೆಸಲಾಗುತ್ತಿದೆ. ಅಲ್ಲಿಯವರೆಗೂ ಅವರು ತಮ್ಮ ಇತರೆ ಸಾಮಾಜಿಕ ಜಾಲತಾಣ ಖಾತೆಗಳಿಂದ ನಿಮ್ಮೊಂದಿಗೆ ಸಂಪರ್ಕದಲ್ಲಿ ಇರಲಿದ್ದಾರೆ ಮತ್ತು ನಮ್ಮ ಜನರ ಪರವಾಗಿ ಧ್ವನಿ ಎತ್ತುವುದನ್ನು ಹಾಗೂ ಅವರ ಪರವಾಗಿ ಹೋರಾಡುವುದನ್ನು ಮುಂದುವರಿಸಲಿದ್ದಾರೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.

ರೀಸ್ಟೋರೆಷನ್​ ಕಾರಣದಿಂದ ಅಕೌಂಟ್​ ಕಾಣುತ್ತಿಲ್ಲ. ಪುನರ್​​ಸ್ಥಾಪನೆ ಬಳಿಕ ಟ್ವಿಟ್ಟರ್​ ಖಾತೆ ಬಳಕೆಗೆ ಲಭ್ಯವಾಗಲಿದೆ ಎಂದು ಕಾಂಗ್ರೆಸ್​ ತಿಳಿಸಿದೆ. ಅಲ್ಲಿಯವರೆಗೆ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ರಾಹುಲ್​​ ಗಾಂಧಿ ಸಂಪರ್ಕದಲ್ಲಿರುತ್ತಾರೆ. ಬಡ ಜನರ ಪರ ದನಿ ಎತ್ತುವುದನ್ನು ಮುಂದುವರೆಸಲಿದ್ದಾರೆ ಎಂದು ಟ್ವೀಟ್​​ ಮಾಡಲಾಗಿದೆ.

ಟ್ವಿಟರ್ ಇಂಡಿಯಾ ಇತ್ತೀಚೆಗೆ ಸುದ್ದಿಯಾಗುತ್ತಲೇ ಇದೆ. ಕೇಂದ್ರದ ಐಟಿ ನಿಯಮ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿತ್ತು. ನಂತರ ಆರ್‌ಎಸ್‌ಎಸ್ ನಾಯಕರು ಸೇರಿದಂತೆ ಹಲವರ ಟ್ವಿಟ್ಟರ್ ಅಧಿಕೃತ ಖಾತೆಯ ಬ್ಲೂಟಿಕ್ ತೆಗೆದಿತ್ತು. ಇದು ಬಿಜೆಪಿಗರ ಕಣ್ಣು ಕೆಂಪಾಗಿಸಿತ್ತು.

ಏಕಾಏಕಿ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಟ್ವಿಟ್ಟರ್ ಬ್ಲೂಟಿಕ್ ತೆಗೆದಿತ್ತು. ಅಭಿಮಾನಿಗಳ ವಿರೋಧದ ಬಳಿಕ ಮತ್ತೆ ಬ್ಲೂಟಿಕ್ ವಾಪಸ್ ನೀಡಲಾಗಿದೆ.

ಟ್ವಿಟರ್ ನಿಯಮಗಳ ಪ್ರಕಾರ ಸಕ್ರಿಯ ಇಲ್ಲದ ಖಾತೆಗಳ ಬ್ಲೂಟಿಕ್ ರದ್ದಾಗಲಿದೆ. ಧೋನಿ ಕೊನೆಯದಾಗಿ ಟ್ವೀಟ್ ಮಾಡಿರುವುದು ಜನವರಿ 8, 2021ರಲ್ಲಿ. ನಂತರ ಧೋನಿ ಏನನ್ನು ಟ್ವೀಟ್​​ ಮಾಡಿಲ್ಲ. 6 ತಿಂಗಳು ಅಕೌಂಟ್​​ ಆಕ್ಟೀವ್​​ ಇಲ್ಲದಿದ್ದರೆ ಟ್ವಿಟ್ಟರ್ ನಿಯಮದ ಪ್ರಕಾರ ಬ್ಲೂ ಟಿಕ್ ತೆಗೆಯಬಹುದು.

ಟ್ವಿಟರ್ ನಿಯಮಗಳ ಪ್ರಕಾರ ಸಕ್ರಿಯ ಇಲ್ಲದ ಖಾತೆಗಳ ಬ್ಲೂಟಿಕ್ ರದ್ದಾಗಲಿದೆ. ಧೋನಿ ಕೊನೆಯದಾಗಿ ಟ್ವೀಟ್ ಮಾಡಿರುವುದು ಜನವರಿ 8, 2021ರಲ್ಲಿ. ನಂತರ ಧೋನಿ ಏನನ್ನು ಟ್ವೀಟ್​​ ಮಾಡಿಲ್ಲ. 6 ತಿಂಗಳು ಅಕೌಂಟ್​​ ಆಕ್ಟೀವ್​​ ಇಲ್ಲದಿದ್ದರೆ ಟ್ವಿಟ್ಟರ್ ನಿಯಮದ ಪ್ರಕಾರ ಬ್ಲೂ ಟಿಕ್ ತೆಗೆಯಬಹುದು.

English summary
Close on the heels of temporary suspension of Rahul Gandhi's Twitter account, the Congress on late Wednesday claimed that similar action was taken against the handles of five senior leaders, including media head Randeep Surjewala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X