• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ 23ಕ್ಕೆ 5ರಿಂದ 10 ರುಪಾಯಿ ತೈಲ ಬೆಲೆ ಏರಿಕೆಗೆ ನಡೆದಿದೆಯಂತೆ ಸಿದ್ಧತೆ!

|

ನವದೆಹಲಿ, ಏಪ್ರಿಲ್ 23: ಇರಾನ್ ನಿಂದ ಭಾರತಕ್ಕೆ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಇಷ್ಟು ಸಮಯ ವಿನಾಯಿತಿ ನೀಡಿದ್ದ ಅಮೆರಿಕ, ಅದನ್ನು ಕೊನೆ ಮಾಡಲಿದೆ. ಮೇ ತಿಂಗಳಿಂದ ಇರಾನ್ ನಿಂದ ತೈಲ ಖರೀದಿ ಮುಂದುವರಿಸಿದರೆ ಅಮೆರಿಕವು ದಿಗ್ಬಂಧನ ಹೇರಲಿದೆ. ಕಾಂಗ್ರೆಸ್ ಈಗ ಪ್ರಧಾನಿ ಮೋದಿ ಮೇಲೆ ಆರೋಪ ಮಾಡಿದ್ದು, ಮೇ 23ರ ನಂತರ ಪೆಟ್ರೋಲ್-ಡೀಸೆಲ್ ದರ ಏರಿಸುವಂತೆ ತೈಲ ಕಂಪೆನಿಗಳಿಗೆ ತಿಳಿಸಿದ್ದಾರೆ ಎಂದಿದೆ.

ವಿಶೇಷ ಪುಟ

ತಮ್ಮ ಧೈರ್ಯದ ಬಗ್ಗೆ ದಿನವೂ ಕೊಚ್ಚಿಕೊಳ್ಳುತ್ತಿದ್ದ ನರೇಂದ್ರ ಮೋದಿ ಜೀ ಈಗೇಕೆ ಮೌನವಾಗಿದ್ದಾರೆ? ದೇಶದ ಜನರಿಗೆ ಈ ವಿಚಾರವನ್ನು ತಿಳಿಸುತ್ತಿಲ್ಲ. ಜನರನ್ನು ಮರುಳು ಮಾಡಲು ಹಾಗೂ ಮತ ಸೆಳೆಯಲು ಹೀಗೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಕಚ್ಚಾತೈಲ ಬೆಲೆ ಏರಿಕೆ, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ದುಬಾರಿ

ಮೇ ಇಪ್ಪತ್ಮೂರನೇ ತಾರೀಕಿನ ತನಕ ತೈಲ ಬೆಲೆ ಏರಿಸದಂತೆ ಕಂಪೆನಿಗಳಿ ನರೇಂದ್ರ ಮೋದಿ ನಿರ್ದೇಶನ ನೀಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ. ಫಲಿತಾಂಶ ಬಂದ ದಿನ ಪೆಟ್ರೋಲ್-ಡೀಸೆಕ್ ಐದರಿಂದ ಹತ್ತು ರುಪಾಯಿ ಏರಿಕೆ ಮಾಡಲು ಸಿದ್ಧತೆ ನಡೆದಿದೆ ಎಂದಿದ್ದಾರೆ.

Congress alleges Modi has plans to hike fuel prices by 5 to 10 rupees on May 23

ಕಳೆದ ಆರು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಕಚ್ಚಾ ತೈಲ ಬೆಲೆ ಏರಿಕೆ ಆಗಿದೆ. ಡಾಲರ್ ವಿರುದ್ಧ ರುಪಾಯಿ ಮೌಲ್ಯ ಎಪ್ಪತ್ತರ ಸಮೀಪ ಇದೆ. ಇರಾನ್ ನಿಂದ ತೈಲ ಆಮದು ಮಾಡಿಕೊಂಡರೆ ನಿರ್ಬಂಧ ಹೇರುವುದಾಗಿ ಅಮೆರಿಕ ತಿಳಿಸಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ. ದೇಶದ ತೈಲ ಅಗತ್ಯ ಮತ್ತು ಭದ್ರತೆ ವಿಚಾರದಲ್ಲಿ ಮೋದಿ 'ಮೂಕ ಪ್ರೇಕ್ಷಕ'ರಂತೆ ಕೂತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019

ಮೇ ಒಂದನೇ ತಾರೀಕಿನಿಂದ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಅಥವಾ ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಸಿದೆ. ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವ ಎಂಟು ಅತಿ ದೊಡ್ಡ ಗ್ರಾಹಕ ದೇಶಗಳಿಗೆ ಇಷ್ಟು ಸಮಯ ವಿನಾಯಿತಿ ನೀಡಲಾಗಿತ್ತು. ಚೀನಾ ನಂತರ ಇರಾನ್ ನಿಂದ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ದೇಶ ಭಾರತ. ಈ ವರೆಗೆ ವಿನಾಯಿತಿ ಸಿಕ್ಕಿತ್ತು.

ಗ್ಯಾಲರಿ

ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಮಾತನಾಡಿ, ಇರಾನ್ ನಿಂದ ತೈಲ ಆಮದು ನಿಲ್ಲಿಸುವ ನಿರ್ಧಾರದಿಂದ ಆಗುವ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.

English summary
The Congress hit out at Prime Minister Narenda Modi on Tuesday over the US ending waivers that allowed India to buy Iranian oil without facing sanctions. The party alleged that PM Modi has asked oil companies not to increase the prices of petrol and diesel till May 23, when the results of the ongoing nation election will be declared.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more