ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ಗೆ ಗಣ್ಯರ ಅಭಿನಂದನೆ

|
Google Oneindia Kannada News

ನವದೆಹಲಿ, ಆಗಸ್ಟ್‌.6: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಜಗದೀಪ್‌ ಧನಕರ್ ಅವರಿಗೆ ಭರಪೂರ ಅಭಿನಂದನೆ ವ್ಯಕ್ತವಾಗಿದೆ.

ಚುನಾವಣೆಯಲ್ಲಿ ಜಗದೀಪ್ ಧನಕರ್ 528 ಮತಗಳನ್ನು ಪಡೆದರೆ, ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ 182 ಮತಗಳನ್ನು ಪಡೆದರು. ಮತದಾನದಲ್ಲಿ 15 ಮತಗಳು ಅಸಿಂಧುಗೊಂಡಿದ್ದವು.

ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಜಗದೀಪ್ ಧನಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಅಕ್ಬರ್ ರಸ್ತೆಯ ನಿವಾಸದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಯುಪಿಎ ಅಭ್ಯರ್ಥಿ ಮಾರ್ಗಾರೇಟ್‌ ಆಳ್ವಾ ಸೇರಿದಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ, ಬಿಜೆಪಿ ಅಧ್ಯಕ್ಷ ನಡ್ಡಾ, ಗೃಹ ಸಚಿವ ಅಮಿತ್‌ ಶಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Congratulations to the new Vice President Jagdeep Dankhar

"ಈ ಚುನಾವಣೆ ಮುಗಿದಿದೆ. ನಮ್ಮ ಸಂವಿಧಾನವನ್ನು ರಕ್ಷಿಸುವ, ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮತ್ತು ಸಂಸತ್ತಿನ ಘನತೆಯನ್ನು ಮರುಸ್ಥಾಪಿಸುವ ಹೋರಾಟ ಮುಂದುವರಿಯುತ್ತದೆ," ಎಂದು ಮಾರ್ಗರೇಟ್‌ ಆಳ್ವಾ ಅವರು ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ತಿಳಿಸಿದ್ದಾರೆ.

"ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಜಗದೀಪ್ ಧನಕರ್ ಅವರಿಗೆ ಅಭಿನಂದನೆಗಳು. ನಿಮ್ಮ ದೀರ್ಘ ಮತ್ತು ಶ್ರೀಮಂತ ಸಾರ್ವಜನಿಕ ಜೀವನದ ಅನುಭವದಿಂದ ರಾಷ್ಟ್ರವು ಪ್ರಯೋಜನ ಪಡೆಯುತ್ತದೆ. ಉತ್ಪಾದಕ ಮತ್ತು ಯಶಸ್ವಿ ಅಧಿಕಾರಾವಧಿಗೆ ನನ್ನ ಶುಭಾಶಯಗಳು," ಎಂದು ನೂತನ ರಾಷ್ಟ್ರಪತಿಯಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

Congratulations to the new Vice President Jagdeep Dankhar

ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಜಗದೀಪ್ ಧನಕರ್ ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಅಪಾರ ಅನುಭವ ಮತ್ತು ಕಾನೂನು ಪರಿಣತಿಯಿಂದ ರಾಷ್ಟ್ರವು ಹೆಚ್ಚು ಪ್ರಯೋಜನ ಪಡೆಯುತ್ತದೆ. ಯಶಸ್ವಿ ಮತ್ತು ಫಲಪ್ರದ ಅಧಿಕಾರಾವಧಿಗೆ ನನ್ನ ಶುಭಾಶಯಗಳು" ಎಂದು ನಿರ್ಗಮಿತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

ದೇಶವು ಕೇವಲ ಪ್ರತಿಪಕ್ಷಗಳ ಒಗ್ಗಟ್ಟನ್ನು ಮಾತ್ರ ಹುಡುಕುತ್ತಿಲ್ಲ. ಇದು ಸ್ಫೂರ್ತಿ, ಭರವಸೆಯನ್ನು ಹುಡುಕುತ್ತಿದೆ ಎಂದು ಆಮ್‌ ಆದ್ಮಿ ಪಕ್ಷದ ವಕ್ತಾರ ಜಾಸ್ಮಿನ್ ಶಾ ಟ್ವಿಟ್‌ ಮಾಡಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜಯಗಳಿಸಿದ ಜಗದೀಪ್ ಧನಕರ್ ಅವರಿಗೆ ಅಭಿನಂದನೆಗಳು. ಅವರ ಸುದೀರ್ಘ ಸಾರ್ವಜನಿಕ ಜೀವನ, ವ್ಯಾಪಕ ಅನುಭವ ಮತ್ತು ಜನರ ಸಮಸ್ಯೆಗಳ ಆಳವಾದ ತಿಳುವಳಿಕೆ ಖಂಡಿತವಾಗಿಯೂ ರಾಷ್ಟ್ರಕ್ಕೆ ಪ್ರಯೋಜನವನ್ನು ನೀಡುತ್ತದೆ. ಅವರು ಅಸಾಧಾರಣ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷರಾಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಧನಕರ್ ಒಬ್ಬ ರೈತನ ಮಗ:
ಅವರು ಅದ್ಭುತ ರಾಜ್ಯಸಭಾ ಅಧ್ಯಕ್ಷರು, ಅತ್ಯುತ್ತಮ ಉಪರಾಷ್ಟ್ರಪತಿಯಾಗುತ್ತಾರೆ. ಒಬ್ಬ ರೈತನ ಮಗ ಮತ್ತು ಒಬ್ಬ ಪ್ರಖ್ಯಾತ ನ್ಯಾಯಶಾಸ್ತ್ರಜ್ಞನನ್ನು ಭಾರತದ ಉಪರಾಷ್ಟ್ರಪತಿಯಾಗಿ ಹೊಂದಲು ರಾಷ್ಟ್ರವು ಆಶೀರ್ವದಿಸಲ್ಪಟ್ಟಿದೆ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿಕೆ ನೀಡಿದ್ದಾರೆ.

English summary
NDA supported candidate Jagdeep Dankhar has been elected as the 14th Vice President of India and several dignitaries of the country have congratulated him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X