ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು 6ನೇ ಹಂತದಲ್ಲೇ ಗಡಿದಾಟಿಯಾಗಿದೆ: ಅಮಿತ್ ಶಾ ಫುಲ್ ಕಾನ್ಫಿಡೆಂಟ್

|
Google Oneindia Kannada News

Recommended Video

ಎಲ್ಲ ಪಕ್ಷಗಳು ಸಭೆ ಸೇರಿ ವಿರೋಧ ಪಕ್ಷದ ನಾಯಕನನ್ನು ಬೇಗ ಆಯ್ಕೆ ಮಾಡಿ..!

ನವದೆಹಲಿ, ಮೇ 15: ಬಹುಮತಕ್ಕೆ ಬೇಕಾಗಿರುವ ಸಂಖ್ಯೆಯನ್ನು ಆರನೇ ಹಂತದ ಚುನಾವಣೆಯಲ್ಲೇ ನಾವು ದಾಟಿಯಾಗಿದ್ದು, ಕೊನೆಯ ಹಂತದ ಚುನಾವಣೆಯ ನಂತರ ಮುನ್ನೂರಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವುದು ನಿಶ್ಚಿತ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅಮಿತ್ ಶಾ, ನೋಡುತ್ತಾ ಇರಿ.. ಈ ಬಾರಿ ವಿರೋಧ ಪಕ್ಷಗಳನ್ನು ಗುಡಿಸಿ ಹಾಕುತ್ತೇವೆ. ಅವರು ಪ್ರಧಾನಿ ಯಾರಾಗಬೇಕೆಂದು ಸಭೆ ಬೇಕಾದರೆ ಕರೆಯಲಿ ಎಂದು ಶಾ ವ್ಯಂಗ್ಯವಾಡಿದ್ದಾರೆ.

CRPF ಸಿಬ್ಬಂದಿಯಿಲ್ಲದಿದ್ದರೆ ನಾನು ಬದುಕಿ ಬರುತ್ತಿರಲಿಲ್ಲ: ಅಮಿತ್ ಶಾCRPF ಸಿಬ್ಬಂದಿಯಿಲ್ಲದಿದ್ದರೆ ನಾನು ಬದುಕಿ ಬರುತ್ತಿರಲಿಲ್ಲ: ಅಮಿತ್ ಶಾ

ಪ್ರತೀ ಬಾರಿ ನನ್ನಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ ಎಂದು ನೀವು (ಮಾಧ್ಯಮ) ಕೇಳುತ್ತಿರುತ್ತೀರಿ, ದೇಶದೆಲ್ಲಡೆ ಸುತ್ತಿದ್ದೇನೆ, ಜನರ ನಾಡಿಮಿಡಿತ ಅರಿತಿದ್ದೇನೆ. ಇದೇ ಆಧಾರದಲ್ಲಿ ಹೇಳುತ್ತಿದ್ದೇನೆ, ನಾವು ಮುನ್ನೂರಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಎಂದು ಅಮಿತ್ ಶಾ, ಭರವಸೆಯ ಮಾತನ್ನಾಡಿದ್ದಾರೆ.

Election 2019: Confident BJP Has Crossed Majority Mark, Will Go Past 300: Amit Shah

ಎನ್ಡಿಎ ನೇತೃತ್ವದ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ ಎಂದಿರುವ ಅಮಿತ್ ಶಾ, ಪ್ರಾದೇಶಿಕ ಪಕ್ಷಗಳು ಫೆಡರಲ್ ಫ್ರಂಟ್ ಹುಟ್ಠುಹಾಕಲು ಪ್ರಯತ್ನಿಸುತ್ತಿದ್ದು, ಅದ್ಯಾವುದೂ ನಡೆಯುವುದಿಲ್ಲ ಎಂದು ಪರೋಕ್ಷವಾಗಿ, ತೆಲಂಗಾಣ ಮುಖ್ಯಮಂತ್ರಿಯವರನ್ನು ಲೇವಡಿ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ರೋಡ್ ಶೋ ವೇಳೆ ಹಿಂಸಾಚಾರ : ಬಿಜೆಪಿ ದೂರುಕೋಲ್ಕತ್ತಾದಲ್ಲಿ ರೋಡ್ ಶೋ ವೇಳೆ ಹಿಂಸಾಚಾರ : ಬಿಜೆಪಿ ದೂರು

ಎನ್ಡಿಎ ಮೈತ್ರಿಕೂಟದ ಹೊರತಾದ ಪಕ್ಷಗಳು ಎಲ್ಲಾ ಒಂದಾಗಿ, ಯಾರು ವಿರೋಧ ಪಕ್ಷದ ನಾಯಕರಾಗಬೇಕೆಂದು ನಿರ್ಧರಿಸಲಿ, ಪ್ರಧಾನಮಂತ್ರಿಯಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ನಾವು ಭಾರತದ ಎಲ್ಲಾ ರಾಜ್ಯಗಳಲ್ಲೂ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ. ಆದರೆ ಯಾವ ರಾಜ್ಯದಲ್ಲೂ ಹಿಂಸೆಯಾಗಿಲ್ಲ. ಕೇವಲ ಪಶ್ಚಿಮ ಬಂಗಾಳದಲ್ಲಿ ಮಾತ್ರ ಹೀಗಾಗುತ್ತದೆ ಎಂದರೆ ಅದಕ್ಕೆ ನೀವೇ ಹೊಣೆ. ಆ ಹಿಂಸಾಚಾರದ ಸಮಯದಲ್ಲಿ CRPF ಸಿಬ್ಬಂದಿಯಿಲ್ಲದಿದ್ದರೆ ನಾನು ಬದುಕಿ ಬರುತ್ತಿರಲಿಲ್ಲ" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದರು.

English summary
Election 2019: "Confident BJP Has Crossed Majority Mark, Will Go Past 300": Amit Shah. A party needs to win 272 seats for a simple majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X