ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸನ್ನಿ ಪ್ರಭಾವ: ಕಾಂಡೋಮ್ ಜಾಹೀರಾತು ವೇಳೆ ಬದಲು

By Mahesh
|
Google Oneindia Kannada News

ನವದೆಹಲಿ, ಅ.03: ಮಾಜಿ ಪೋರ್ನ್ ತಾರೆ ಸನ್ನಿ ಲಿಯೋನ್ ನಟನೆಯ ಕಾಂಡೋಮ್ ಜಾಹೀರಾತು ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಸರ್ಕಾರ ಈ ಬಗ್ಗೆ ಕ್ರಮ ಜರುಗಿಸಲು ಮುಂದಾಗಿದೆ. ಇಂಥ ಜಾಹೀರಾತುಗಳ ಮೇಲೆ ನಿರ್ಬಂಧ, ಪ್ರಸಾರ ವೇಳೆ ಬದಲು ಮಾಡಲು ನಿರ್ಧರಿಸಲಾಗಿದೆ.

ಕಾಂಡೋಮ್ ಜಾಹೀರಾತಿನ ಬಗ್ಗೆ ಸರ್ಕಾರ ಶೀಘ್ರದಲ್ಲೇ ತನ್ನ ನಿರ್ಧಾರ ಪ್ರಕಟಿಸಲಿದೆ. ಮೂಲಗಳ ಪ್ರಕಾರ ರಾತ್ರಿ 11 ಗಂಟೆ ನಂತರ ಇಂಥ ಜಾಹೀರಾತುಗಳು ಟಿವಿಯಲ್ಲಿ ನೋಡಲು ಸಾಧ್ಯವಾಗುತ್ತದೆ. ಕಾಂಡೋಮ್ ಜಾಹೀರಾತಿನ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುವುದರಿಂದ ಸರ್ಕಾರ ಈ ಕ್ರಮ ಮುಂದಾಗಿದೆ. [ಸನ್ನಿ ಲಿಯೋನ್ ಕಾಂಡೋಮ್ 'ಆಡ್' ವಿರುದ್ಧ ಸಮನ್ಸ್]

Govt may restrict 'timing' of condom advertisements

ಸದ್ಯಕ್ಕೆ ಕಾಂಡೋಮ್ ಜಾಹೀರಾತಿನ ಮೇಲೆ ಯಾವುದೇ ನಿರ್ಬಂಧವಿಲ್ಲ, ಯಾವುದೇ ಸಮಯದಲ್ಲಿ ಬೇಕಾದರೂ ಪ್ರಸಾರ ಮಾಡಬಹುದಾಗಿದೆ. ಯಾವುದೇ ಚಾನೆಲ್ ನಲ್ಲಿ ಬೇಕಾದರೂ ನುಸುಳಬಹುದಾಗಿದೆ. ಪೋಷಕರಿಗೆ ಎಚ್ಚರಿಕೆ ಎಂಬ ಸಂದೇಶವೂ ಇರುವುದಿಲ್ಲ. ಆದರೆ, ಇನ್ಮುಂದೆ ಇಂಥ ಜಾಹೀರಾತುಗಳ ಸುತ್ತ ಬೇಲಿ ಹೆಣೆಯಲು ಸರ್ಕಾರ ಸಿದ್ಧವಾಗಿದೆ. [ಕಾಂಡೋಮ್ ಬಳಕೆ ಪೋಪ್ ಸಮರ್ಥನೆ!]

ಕಿರುತೆರೆಯಲ್ಲಿ ಎರಡು ಬಗೆ ಜಾಹೀರಾತುಗಳಿವೆ. ಸಾಮಾನ್ಯ ವರ್ಗ(ಜಿ), ನಿರ್ಬಂಧಿತ(ಆರ್). ನಿರ್ಬಂಧಿತ ವರ್ಗದ ಜಾಹೀರಾತುಗಳು ಮಕ್ಕಳ ಮುಂದೆ ಪ್ರಸಾರ ಮಾಡುವಂತಿಲ್ಲ. ಹೀಗಾಗಿ ರಾತ್ರಿ 11 ಗಂಟೆ ಇಂದ ಬೆಳಗ್ಗೆ 5 ಗಂಟೆ ತನಕ ಮಾತ್ರ ಜಾಹೀರಾತು ಪ್ರಸಾರವಾಗಲಿದೆ.

ಸಾರ್ವಜನಿಕರು ನೋಡುವಂಥ ಜಾಹೀರಾತು ಇದಾಗಿಲ್ಲ, ಯಾವುದೇ ಸೆನ್ಸಾರ್ ಇಲ್ಲದೆ ಅಶ್ಲೀಲ ಜಾಹೀರಾತು ಎಲ್ಲೆಡೆ ಲಭ್ಯವಾಗುತ್ತಿದೆ. ಇದೆಲ್ಲ ಗೊತ್ತಿದ್ದರೂ ಸನ್ನಿ ಲಿಯೋನ್ ಅವರು ಕಾಂಡೋಮ್ ಉತ್ಪನ್ನ ಪರ ಜಾಹೀರಾತಿನಲ್ಲಿ ಭಾಗವಹಿಸಿದ್ದಾರೆ ಎಂದು ಇತ್ತೀಚೆಗೆ ಎನ್ ಜಿಒ ದೂರಿದ್ದು, ಪ್ರಕರಣ ದಾಖಲಿಸಿಕೊಂಡ ಲೂಧಿಯಾನಾ ಪೊಲೀಸರು, ಸನ್ನಿ ವಿರುದ್ಧ ಸಮನ್ಸ್ ಜಾರಿಗೊಳಿಸಿದ್ದರು.

ದೆಹಲಿ ಮಹಿಳಾ ಆಯೊಗದ ಬರ್ಖಾ ಶುಕ್ಲಾ ಅವರು ಕೂಡಾ ಇಂಥ ಜಾಹೀರಾತಿಗೆ ಕಡಿವಾಣ ಹಾಕಬೇಕು. ಟಿವಿ ಆಡ್ಸ್ ಗೂ ಸೆನ್ಸಾರ್ ಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
One may not be able to see condom advertisement during day time soon. Reportedly, Government is planning to confine such television ads to late-night hours only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X