ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರಿ ಕಾಂಡೋಮ್ ಬಳಸುವವರು ಕಮ್ಮಿಯಾಗ್ತಿದ್ದಾರೆ!

By Srinath
|
Google Oneindia Kannada News

Condom use drops drastically in 5 years India- UNFPA Policy makers worried,
ನವದೆಹಲಿ, ಅ.18: ಇಡೀ ದೇಶದಲ್ಲಿ ಸರಕಾರಿ ಕಾಂಡೋಮ್ ಬಳಸುವವರು ಸಂಖ್ಯೆ ಕಮ್ಮಿಯಾಗಿದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ಮುಖ್ಯವಾಗಿ ಎಚ್‌ ಐವಿ ತಡೆಗಟ್ಟಲು ಮತ್ತು ಜನಸಂಖ್ಯೆ ಸ್ಫೋಟವನ್ನು ನಿಯಂತ್ರಿಸಲು ಕಾಂಡೋಮ್ ಬಳಕೆ ಮಾಡುವಂತೆ ಸರ್ಕಾರ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಆದರೆ ಅದನ್ನು ಬಳಕೆ ಮಾಡುವವರ ಸಂಖ್ಯೆ ಕಳೆದೈದು ವರ್ಷಗಳಿಂದ ಇಳಿಕೆಯಾಗುತ್ತಲೇ ಬಂದಿದೆ.

ಸರಕಾರ ವಿತರಿಸುವುದಕ್ಕಿಂತ ಉತ್ತಮಗುಣಮಟ್ಟದ, ಅತ್ಯಾಕರ್ಷಕ ಕಾಂಡೋಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವುದರಿಂದ ಜನ ಅದರತ್ತ ಹೊರಳಿರುವುದೂ ಸರಕಾರಿ ಕಾಂಡೋಮ್ ಬಳಕೆ ಪ್ರಮಾಣ ಕಡಿಮೆಯಾಗುವುದಕ್ಕೆ ಕಾರಣವಾಗಿದೆ ಎನ್ನಬಹುದು. ಜತೆಗೆ ಹೆಚ್ಚು ಜಾಗೃತಿ ಮೂಡುತ್ತಿರುವುದರಿಂದ ಕಾಯಂ ಗರ್ಭನಿರೋಧಕ ವಿಧಾನಗಳಿಗೆ ಶರಣಾಗುತ್ತಿರುವುದು ಹೆಚ್ಚಾಗಿದೆ.

2006-07ರಲ್ಲಿ ಕರ್ನಾಟಕದಲ್ಲಿ 3.06 ಲಕ್ಷ ಮಂದಿ ಕಾಂಡೋಮ್ ಬಳಸುತ್ತಿದ್ದರು. ಆದರೆ 2010-11ನೇ ಸಾಲಿಗೆ ಹೋಲಿಸಿದರೆ ಅದು 2.06 ಲಕ್ಷಕ್ಕೆ ಇಳಿಕೆಯಾಗಿದೆ. ಇನ್ನು ದೇಶಾದ್ಯಂತ 2006ರಲ್ಲಿ 2.6 ಕೋಟಿ ಮಂದಿ ಕಾಂಡೋಮ್ ಬಳಸುತ್ತಿದ್ದರು. ಆದರೆ 6 ವರ್ಷಗಳ ಬಳಿಕೆ ಇದರ ಪ್ರಮಾಣ 1.6 ಕೋಟಿಗೆ ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆ ಕುಟುಂಬ ನಿಯಂತ್ರಣ ಸಂಸ್ಥೆಯ (UNFPA) ಭಾರತದ ಅಧ್ಯಕ್ಷೆ ಸುಜಾತಾ ನಟರಾಜನ್‌ ಹೇಳಿದ್ದಾರೆ.

ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ 28 ರಾಜ್ಯಗಳಲ್ಲಿ 21 ರಾಜ್ಯಗಳಲ್ಲಿ ಕಾಂಡೋಮ್ ಬಳಕೆ ಪ್ರಮಾಣ ಇಳಿಮುಖವಾಗಿದೆ. ಇದರ ಜೊತೆಗೆ ಜಗತ್ತಿನಲ್ಲಿ ಜನಿಸುವ 6 ಮಕ್ಕಳಲ್ಲಿ ಒಂದು ಮಗು ಭಾರತೀಯನಾಗಿರುತ್ತಾನೆ. ಇನ್ನು 2025ರ ವೇಳೆಗೆ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿ ನಂ.1 ಪಟ್ಟಕ್ಕೇರಲಿದೆ.

English summary
Condom use drops drastically in 5 years- UNFPA Policy makers worried. In a worrying trend, condom use in India has dropped by 38% in six years — from 2.6 crore in 2006-07 to 1.6 crore in 2010-11. But the statistics should be taken with a pinch of salt because these statistics only reflect the condoms distributed free of charge by the government and doesn’t reflect the rise in condom sales produced by private companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X