ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರಲ್ಲಿ ಮದುವೆ ಮುಂಚಿನ ಲೈಂಗಿಕತೆ : ಕಾಂಡೋಮ್ ಬಳಕೆ ಹೆಚ್ಚಳ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

Recommended Video

ಮಹಿಳೆಯರಲ್ಲಿ ಮದುವೆ ಮುಂಚಿನ ಲೈಂಗಿಕತೆ : ಕಾಂಡೋಮ್ ಬಳಕೆ ಹೆಚ್ಚಳ | Oneindia Kannada

ನವದೆಹಲಿ, ಜನವರಿ 29 : ಮದುವೆಯಾಗದಿರುವ ಮಹಿಳೆಯರು ಇತ್ತೀಚಿನ ವರ್ಷಗಳಲ್ಲಿ ಸುರಕ್ಷಿತ ಲೈಂಗಿಕತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕಾಂಡೋಮ್ ಬಳಕೆ ಅಂತಹ ಮಹಿಳಾವರ್ಗದಲ್ಲಿ ಹೆಚ್ಚಾಗಿದೆ ಎಂದು ಅಧ್ಯಯನ ತಿಳಿಸಿದೆ.

ಆರೋಗ್ಯ ಸಚಿವಾಲಯ ನಡೆಸಿದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ, ಮದುವೆಯಾಗದಿರುವ 15ರಿಂದ 49 ವಯಸ್ಸಿನೊಳಗಿನ ಮಹಿಳೆಯರು ಕಾಂಡೋಮ್ ಬಳಸುತ್ತಿರುವುದು, ಕಳೆದ 10 ವರ್ಷಗಳಲ್ಲಿ ಶೇ.2ರಿಂದ ಶೇ.12ಕ್ಕೆ ಏರಿದೆ.

ಹೇಳಿಕೇಳಿ ಆಧುನಿಕ ಯುವಕ, ಯುವತಿಯರ ಜಮಾನಾ ಇದು. ಮದುವೆಯಾದ ಮೇಲೆಯೇ ಲೈಂಗಿಕತೆ ನಡೆಸಬೇಕೆಂಬ ಆಶಯ ಎಂದೋ ನಶಿಸಿ ಹೋಗಿದೆ. ವಿದ್ಯಾವಂತ, ಉದ್ಯೋಗದಲ್ಲಿರುವ ಮಹಿಳೆಯರು, ಏಕಾಂಗಿ ಮಹಿಳೆಯರು ಲೈಂಗಿಕತೆಯ ಬಗ್ಗೆ ತಮ್ಮದೇ ನಿರ್ಧಾರ, ತಿಳಿವಳಿಕೆ ಹೊಂದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದರಲ್ಲಿ ತಪ್ಪೇನಿದೆ ಎಂಬಂತಹ ಮನೋಧರ್ಮ ಹಲವು ಮಹಿಳೆಯರು ಹೊಂದಿದ್ದಾರೆ.

ಈ ಅಧ್ಯಯನದಲ್ಲಿ ಹಲವಾರು ಆಶ್ಚರ್ಯಕರ ಮತ್ತು ಆಘಾತಕರ ಸಂಗತಿಗಳು ಕೂಡ ಹೊರಬಿದ್ದಿವೆ. 20ರಿಂದ 24 ವಯಸ್ಸಿನೊಳಗಿನ ಮದುವೆಯಾಗದ ಮಹಿಳೆಯರು ಕಾಂಡೋಮ್ ಹೆಚ್ಚಾಗಿ ಬಳಸುತ್ತಿದ್ದರೆ, ಕಾಂಡೋಮ್ ತರುವುದು ಹೆಂಗಸರ ಕೆಲಸ, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಎಂಟರಲ್ಲಿ ಮೂರು ಎಂಟೆದೆ ಬಂಟರು ಅಭಿಪ್ರಾಯ ಹೊಂದಿದ್ದಾರೆ.

ಗರ್ಭ ನಿರೋಧಕ ಕಡ್ಡಾಯ ಬಳಕೆ

ಗರ್ಭ ನಿರೋಧಕ ಕಡ್ಡಾಯ ಬಳಕೆ

ಸುರಕ್ಷಿತ ಲೈಂಗಿಕತೆಯ ಬಗ್ಗೆ ಸಾಕಷ್ಟು ಜಾಗೃತಿ ಮೂಡಿರುವುದು ಈ ಸಮೀಕ್ಷೆಯಲ್ಲಿ ಮೂಡಿಬಂದಿದೆ. ಶೇ.99ರಷ್ಟು ಮಹಿಳೆಯರು ಮತ್ತು ಪುರುಷರು ಗರ್ಭ ನಿರೋಧಕಗಳನ್ನು ಬಳಸುವುದರ ಬಗ್ಗೆ ಅರಿತಿದ್ದಾರೆ ಮತ್ತು ಕಡ್ಡಾಯವಾಗಿ ಬಳಸುತ್ತಿದ್ದಾರೆ. ಇಷ್ಟೆಲ್ಲ ಜಾಗೃತಿ ಇದ್ದರೂ ಇವರಲ್ಲಿ ಶೇ.10ರಷ್ಟು ಮಾತ್ರ ಅತ್ಯಾಧುನಿಕ ಗರ್ಭ ನಿರೋಧಕಗಳನ್ನು ಬಳಸುತ್ತಿದ್ದಾರೆ.

ಸಾಂಪ್ರದಾಯಿಕ ಗರ್ಭ ನಿಯಂತ್ರಣಕ್ಕೆ ಒತ್ತು

ಸಾಂಪ್ರದಾಯಿಕ ಗರ್ಭ ನಿಯಂತ್ರಣಕ್ಕೆ ಒತ್ತು

ದೇಶ ಇಷ್ಟೆಲ್ಲ ಮುಂದುವರಿದಿದ್ದರೂ ಬಹುತೇಕ ಮಹಿಳೆಯರು ಸಾಂಪ್ರದಾಯಿಕವಾಗಿಯೇ ಗರ್ಭ ನಿಯಂತ್ರಣಕ್ಕೆ ಒತ್ತು ನೀಡುತ್ತಿದ್ದಾರೆ. ಅಸುರಕ್ಷಿತ ಅವಧಿಯನ್ನು ಬಿಟ್ಟು ಉಳಿದ ಸಮಯದಲ್ಲಿ ಲೈಂಗಿಕತೆ ನಡೆಸುವುದು ಈ ವಿಧಾನಗಳಲ್ಲಿ ಒಂದಾಗಿದೆ. ಸುರಕ್ಷಿತವಾದ ಕಾಂಡೋಮ್ ಬಳಸುವುದು, ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದು, ಗರ್ಭ ನಿರೋಧಕ ಮಾತ್ರೆಗಳನ್ನು ಬಳಸುವುದು ಕಡಿಮೆಯಿರುವುದು ಸ್ವಲ್ಪ ಕಳವಳಕಾರಿ ಸಂಗತಿ.

ಶಸ್ತ್ರಚಿಕಿತ್ಸೆ ಸುರಕ್ಷಿತವೂ ಮತ್ತು ಜನಪ್ರಿಯವೂ

ಶಸ್ತ್ರಚಿಕಿತ್ಸೆ ಸುರಕ್ಷಿತವೂ ಮತ್ತು ಜನಪ್ರಿಯವೂ

ಇದರ ಬಗ್ಗೆ ತಿಳಿವಳಿಕೆ ಕೂಡ ಹೆಚ್ಚುತ್ತಿದ್ದು, 25ರಿಂದ 49 ವಯಸ್ಸಿನೊಳಗಿನ ಮಹಿಳೆಯರು ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಹೆಚ್ಚಾಗಿ ಒಳಗಾಗುತ್ತಿದ್ದಾರೆ. ಸಂತಾನಹರಣ ಶಸ್ತ್ರಚಿಕಿತ್ಸೆ ಸುರಕ್ಷಿತವೂ ಮತ್ತು ಜನಪ್ರಿಯವೂ ಆಗಿದ್ದು, ಇದೇ ಸೂಕ್ತ ವಿಧಾನವೆಂದು ಬಹುತೇಕ ಮದುವೆಯಾಗದ ಮಹಿಳೆಯರು ಅರಿತಿದ್ದಾರೆ. ಆದರೆ, ಶೇ.1ಕ್ಕಿಂತ ಕಡಿಮೆ ಮಹಿಳೆಯರು ಲೈಂಗಿಕತೆಯ ನಂತರ ಗರ್ಭನಿರೋಧಕ ಮಾತ್ರೆಯನ್ನು ಎಂದೂ ತೆಗೆದುಕೊಂಡಿಲ್ಲ ಎಂದೂ ತಿಳಿದುಬಂದಿದೆ.

ಹೆಚ್ಚಾದ ಸ್ವೇಚ್ಛಾಚಾರ, ಸ್ವಚ್ಛಂದದ ಲೈಂಗಿಕತೆ

ಹೆಚ್ಚಾದ ಸ್ವೇಚ್ಛಾಚಾರ, ಸ್ವಚ್ಛಂದದ ಲೈಂಗಿಕತೆ

ಅತ್ಯಾಧುನಿಕ ಗರ್ಭನಿರೋಧಕಗಳ ಬಳಕೆ ಹೆಚ್ಚಿದಂತೆ ಮದುವೆಯಾಗದ ಮಹಿಳೆಯರಲ್ಲಿ ಸ್ವೇಚ್ಛಾಚಾರ, ಸ್ವಚ್ಛಂದದ ಲೈಂಗಿಕತೆ, ಮದುವೆಗೆ ಹಿಂದೇಟು ಹಾಕುತ್ತಿರುವುದು ಮುಂತಾದ ಸಂಗತಿಗಳು ಹೆಚ್ಚಾಗುತ್ತಿವೆ. ಕೌಟುಂಬಿಕ ಸುಖಕ್ಕಿಂತ ದೈಹಿಕ ಸುಖ ಅಥವಾ ಲೈಂಗಿಕ ಸುಖದತ್ತ ಮದುವೆಯಾಗದ ಮಹಿಳೆಯರು ಹೆಚ್ಚು ವಾಲುತ್ತಿರುವುದೂ ಹೆಚ್ಚಾಗಿ ಸಮೀಕ್ಷೆಯಲ್ಲಿ ಕಂಡುಬಂದಿದೆ.

ಕಾಂಡೋಮ್ ತರುವುದೇನಿದ್ದರೂ ಮಹಿಳೆಯರ ಕೆಲಸ

ಕಾಂಡೋಮ್ ತರುವುದೇನಿದ್ದರೂ ಮಹಿಳೆಯರ ಕೆಲಸ

ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಪುರುಷರು, ಕಾಂಡೋಮ್ ತರುವುದೇನಿದ್ದರೂ ಮಹಿಳೆಯರ ಕೆಲಸ ಎಂದು ಹೆಚ್ಚಾಗಿ ಹೇಳಿದ್ದರೂ, ಶೇ.61ಕ್ಕಿಂತ ಹೆಚ್ಚು ಪುರುಷರು ತಾವು ಕಾಂಡೋಮ್ ಅನ್ನು ಸರಿಯಾಗಿ ಬಳಸುತ್ತಿರುವುದರಿಂದ ಮಹಿಳೆಯರು ಗರ್ಭವತಿಯಾಗುವುದರಿಂದ ತಡೆಗಟ್ಟಲು ಸಾಧ್ಯ ಎಂದು ನಂಬಿದ್ದಾರೆ. ಮಹಿಳೆಯರ ಮೇಲೆ ಪುರುಷರು ನಡೆಸುತ್ತಿರುವ ದಬ್ಬಾಳಿಕೆಗೆ ಇದೂ ಒಂದು ನಿದರ್ಶನ.

ಪಂಜಾಬ್ ಗೆ ಅಗ್ರಸ್ಥಾನ

ಪಂಜಾಬ್ ಗೆ ಅಗ್ರಸ್ಥಾನ

ಮದುವೆ ಮುಂಚಿನ ಲೈಂಗಿಕತೆಯಲ್ಲಿ ತೊಡಗಿದವರಲ್ಲಿ ಪಂಜಾಬ್ ಅಗ್ರಸ್ಥಾನ (ಶೇ.76) ಪಡೆದಿದೆ. ನಂತರದ ಸ್ಥಾನ ಚಂಡೀಗಢ (ಶೇ.74) ಪಡೆದುಕೊಂಡಿದೆ. ಸಿಖ್ ಮಹಿಳೆಯರು ಹೆಚ್ಚಾಗಿ ಗರ್ಭ ನಿರೋಧಕಗಳನ್ನು ಬಳಸುತ್ತಿದ್ದಾರೆ. ಮಣಿಪುರ, ಬಿಹಾರ, ಮೇಘಾಲಯದಲ್ಲಿಯೂ ಮಹಿಳೆಯರಲ್ಲಿ ಮದುವೆ ಮುಂಚಿನ ಲೈಂಗಿಕತೆ ಹೆಚ್ಚಾಗಿ ಕಂಡುಬಂದಿದೆ. ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದ ಮಹಿಳೆಯರ ಸಂಖ್ಯೆ ಹೆಚ್ಚು.

ದೂರದರ್ಶನದ ಮುಖಾಂತರ ತಿಳಿವಳಿಕೆ

ದೂರದರ್ಶನದ ಮುಖಾಂತರ ತಿಳಿವಳಿಕೆ

ಮಕ್ಕಳಾಗಲೇಬಾರದು ಎಂದು ಬಯಸುತ್ತಿರುವ ಶೇ.55ರಷ್ಟು ಮಹಿಳೆಯರು ಗರ್ಭ ನಿರೋಧಕಗಳನ್ನು ಬಳಸುವ ಬದಲು, ಸಂತಾನಹರಣ ಶಸ್ತ್ರ ಚಿಕಿತ್ಸೆಯತ್ತ ವಾಲುತ್ತಿದ್ದಾರೆ. ಇವರಲ್ಲಿ ಶೇ.59ರಷ್ಟು ಮಹಿಳೆಯರು ತಾವು ದೂರದರ್ಶನದ ಮುಖಾಂತರ ಇದರ ಬಗ್ಗೆ ತಿಳಿವಳಿಕೆ ಪಡೆದಿರುವುದಾಗಿ ತಿಳಿಸಿದ್ದಾರೆ. ಎಚ್ಐವಿ ಸೋಂಕು ತಗಲುವುದನ್ನು ತಡೆಗಟ್ಟಲು ಈ ವಿಧಾನವನ್ನು ಬಳಸುತ್ತಿರುವುದಾಗಿಯೂ ಮಹಿಳೆಯರು ಹೇಳಿಕೊಂಡಿದ್ದಾರೆ.

ಬಡ, ಅನಕ್ಷರಸ್ಥ, ಹಳ್ಳಿ ಮಹಿಳೆಯರಲ್ಲಿ ತಿಳಿವಳಿಕೆ ಕಮ್ಮಿ

ಬಡ, ಅನಕ್ಷರಸ್ಥ, ಹಳ್ಳಿ ಮಹಿಳೆಯರಲ್ಲಿ ತಿಳಿವಳಿಕೆ ಕಮ್ಮಿ

ವಯಸ್ಸಾಗಿರುವವರು, ಹಳ್ಳಿಗಾಡಿನಲ್ಲಿರುವವರು, ಆರ್ಥಿಕವಾಗಿ ಹಿಂದುಳಿದವರು, ಶಿಕ್ಷಣದಿಂದ ವಂಚಿತರಾಗಿರುವವರು, ಮುಸ್ಲಿಂ ಮತ್ತು ಗುಡ್ಡಗಾಡಿನಲ್ಲಿ ಇರುವವರಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. 1990ರಲ್ಲಿಯೇ ಆರಂಭಿಸಿದ ಸಮೀಕ್ಷೆ 6 ಲಕ್ಷಕ್ಕಿಂತ ಹೆಚ್ಚು ಮಹಿಳೆಯರನ್ನು ಸಂದರ್ಶಿಸಿ, ಸಾಕಷ್ಟು ಅಧ್ಯಯನ ನಡೆಸಿ ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ.

English summary
Condom use among married women is on the rise in India. Punjab tops the chart followed by Chandigarh. Awareness about the safe sex is increasing in the urban area than rural area. This study is done by Health Ministry's National Family Health Survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X