ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಯಾ ಪ್ರಕರಣದ ಕಾರ್ಟೂನ್: ಪತ್ರಕರ್ತನ ವಿರುದ್ಧ ದೂರು

|
Google Oneindia Kannada News

ರಾಯಪುರ, ಮೇ 01: ನ್ಯಾ.ಬಿ.ಎಚ್.ಲೋಯಾ ನಿಧನಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ದಳ ರಚಿಸುವ ಕುರಿತ ಮನವಿಯನ್ನು ಸುಪ್ರೀಂ ಕೋರ್ಟು ತಿರಸ್ಕರಿಸಿದ ವಿಷಯವನ್ನೇ ಇಟ್ಟುಕೊಂಡು ಕಾರ್ಟೂನ್ ವೊಂದನ್ನು ರಚಿಸಿದ್ದ ಪತ್ರಕರ್ತರೊಬ್ಬರ ವಿರುದ್ಧ ದೂರುದಾಖಲಿಸಲಾಗಿದೆ.

ರಾಜಸ್ಥಾನದ ಕಮ್ ಶುಕ್ಲಾ ಎಂಬುವವರ ವಿರುದ್ಧ ದೂರು ದಾಖಲಿಸಲಾಗಿದ್ದು, ಇವರು 'ಭೂಮ್ಕಲ್ ಸಮಾಚಾರ್' ಎಂಬ ಪತ್ರಕೆಯ ಸಂಪಾದಕರು.

ನ್ಯಾ.ಲೋಯಾ ಪ್ರಕರಣ: ಬಿಜೆಪಿಯಿಂದ ಕಾಂಗ್ರೆಸ್ ಗೆ ತಪರಾಕಿನ್ಯಾ.ಲೋಯಾ ಪ್ರಕರಣ: ಬಿಜೆಪಿಯಿಂದ ಕಾಂಗ್ರೆಸ್ ಗೆ ತಪರಾಕಿ

2014ರ ಡಿ.1 ರಂದು ಬಾಂಬೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಲೋಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಸೋಹ್ರಾಬುದ್ದಿನ್ ಎನ್ ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ನ್ಯಾಯಾಧೀಶ ಲೋಯಾ ಸಾವಿಗೀಡಾಗಿರುವುದು ಹೃದಯಾಘಾತದಿಂದ ಎಂದು ನಂತರ ವೈದ್ಯಕೀಯ ವರದಿಗಳು ಹೇಳಿದ್ದವು.

Complaint regidtered against a journalist in Chandigarh

ಆದರೆ ಈ ಸಾವು ಸಹಜವಲ್ಲ, ಈ ಕುರಿತು ಸಮಗ್ರ ತನಿಖೆ ನಡೆಯಬೇಕೆಂದು ಸಾಕಷ್ಟು ಚರ್ಚೆಯಾದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳ ರಚಿಸುವಂತೆ ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಈ ಮನವಿಯನ್ನು ಕೋರ್ಟು ತಿರಸ್ಕರಿಸಿತ್ತು.

English summary
A journalist from Chandigarh has been booked on sedition charges for sharing a cartoon on Facebook that allegedly had "derogatory" references to the judiciary and the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X