ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ತೀರ್ಪು ಕುರಿತು ಹೇಳಿಕೆ: ಅಮಿತ್ ಶಾ ವಿರುದ್ಧ ದೂರು

|
Google Oneindia Kannada News

ನವದೆಹಲಿ, ಅಕ್ಟೋಬರ್ 29: ಶಬರಿಮಲೆ ಕುರಿತ ಸುಪ್ರಿಂಕೋರ್ಟ್‌ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ ತೀರ್ಪು ಜಾರಿ ಆಗದಂತೆ ತಡೆಯುವವರಿಗೆ ಬೆಂಬಲ ಘೋಷಿಸಿರುವ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ದೂರು ದಾಖಲಾಗಿದೆ.

ಬಿಹಾರದ ಸಾಮಾಜಿಕ ಕಾರ್ಯಕರ್ತ ಠಾಕೂರ್ ಚಂದನ್ ಸಿಂಗ್ ಎಂಬುವರು ದೂರು ದಾಖಲಿಸಿದ್ದು, ನವೆಂಬರ್ 6 ರಂದು ಅರ್ಜಿ ವಿಚಾರಣೆಗೆ ಬರಲಿದೆ.

ಶಬರಿಮಲೆ ಅಯ್ಯಪ್ಪ ಭಕ್ತರ ಪರ ನಾವಿದ್ದೇವೆ: ಅಮಿತ್ ಶಾ ಶಬರಿಮಲೆ ಅಯ್ಯಪ್ಪ ಭಕ್ತರ ಪರ ನಾವಿದ್ದೇವೆ: ಅಮಿತ್ ಶಾ

ಶಬರಿಮಲೆ ತೀರ್ಪು ಜನರ ಭಾವನೆಗಳನ್ನು ಘಾಸಿಗೊಳಿಸಿದೆ. ಎಂದಿದ್ದ ಅಮಿತ್ ಶಾ ಶಬರಿಮಲೆ ಭಕ್ತರ ನಾವಿದ್ದೇವೆ ಎಂದು ಬಹಿರಂಗವಾಗಿ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸುತ್ತಿರುವವರಿಗೆ ಬೆಂಬಲ ಘೋಷಿಸಿದ್ದರು.

Complaint against BJP president Amit Shah over shabarimala verdict

ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಇಸ್ರೋ ಮಾಜಿ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಇಸ್ರೋ ಮಾಜಿ ಅಧ್ಯಕ್ಷ

ಅಮಿತ್ ಶಾ ವಿರುದ್ಧ ದೇಶದ್ರೋಹ, ಅಪರಾಧಕ್ಕೆ ಸಂಚು ಸೇರಿ ಮತ್ತಿತರೆ ಪ್ರಕರಣಗಳನ್ನು ದಾಖಲಿಸಬೇಕು ಎಂದು ಠಾಕೂರ್ ಅವರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

ಮೋದಿ ಭಾರತ ಕಟ್ಟಿದರೆ, ಮಹಾಘಟಬಂಧನ ಕೆಡವುತ್ತಿದೆ: ಶಾ ಮೋದಿ ಭಾರತ ಕಟ್ಟಿದರೆ, ಮಹಾಘಟಬಂಧನ ಕೆಡವುತ್ತಿದೆ: ಶಾ

ಶಬರಿಮಲೆ ಕುರಿತ ಅಮಿತ್ ಶಾ ಹೇಳಿಕೆಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸಹ ವಿರೋಧಿಸಿದ್ದು, ಅಮಿತ್ ಶಾ ಅವರ ರಾಜಕೀಯ ಕಾರ್ಯಕತಂತ್ರಗಳು ಕೇರಳದಲ್ಲಿ ನಡೆಯುವುದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಅಮಿತ್ ಶಾ ಅವರು ತಮ್ಮ ನಿಲವುಗಳನ್ನು ಕೇರಳದಲ್ಲಿ ಅನುಷ್ಠಾನ ಮಾಡಲು ನಾರಾಯಣಗುರು, ಚಟ್ಟಂಬಿ ಸ್ವಾಮಿ, ಅಯ್ಯಂಕಾಳಿ ಅವರುಗಳಂತಾ ಸಮಾಜ ಸುಧಾರಕರಾದ ಇಲ್ಲಿನ ಜನ ಅದನ್ನು ಒಪ್ಪುವುದಿಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

English summary
A social activist lodge complaint against BJP national president Amit Shah for giving provoking statement about shabarimala verdict. Amit Shah said few days back that BJP will support shabarimala devotees who were opposing the verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X