ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಏಷ್ಯಾ ಸ್ವಾಧೀನಕ್ಕೆ ಮುಂದಾದ ಏರ್ ಇಂಡಿಯಾ, ಓಕೆ ಅಂದ CCI

|
Google Oneindia Kannada News

ಟಾಟಾ ಒಡೆತನದ ಏರ್ ಇಂಡಿಯಾ ಏರ್‌ಏಷ್ಯಾ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳಲು ಚಿಂತನೆ ನಡೆಸಿದೆ. ಮಲೇಷ್ಯಾ ಮೂಲಕ ಏರ್‌ಏಷ್ಯಾ ಸಮೂಹ 16.33ರಷ್ಟು ಪಾಲನ್ನು ಹೊಂದಿದೆ. ಏರ್‌ಏಷ್ಯಾ ಲಿಮಿಟೆಡ್‌ನ ಸಂಪೂರ್ಣ ಷೇರುಗಳನ್ನು ಏರ್‌ ಇಂಡಿಯಾ ಲಿಮಿಟೆಡ್‌ ಸ್ವಾಧೀನಪಡಿಸಿಕೊಳ್ಳಲು ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಮಂಗಳವಾರ ಅನುಮೋದನೆ ನೀಡಿದೆ.

ಬಜೆಟ್ ವಿಮಾನಯಾನ ಸಂಸ್ಥೆ ಎನಿಸಿರುವ ಏರ್‌ಏಷ್ಯಾ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದ ಟಾಟಾ ಒಡೆತನದ ಏರ್ ಇಂಡಿಯಾ ಈ ಕುರಿತು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ)ಗೆ ಮನವಿಯನ್ನು ಸಲ್ಲಿಸಿತ್ತು.

ಟಾಟಾ ಸಮೂಹ ಸೇರಿದ ಏರ್‌ ಇಂಡಿಯಾ: ಏನೇನು ಬದಲಾವಣೆ?ಟಾಟಾ ಸಮೂಹ ಸೇರಿದ ಏರ್‌ ಇಂಡಿಯಾ: ಏನೇನು ಬದಲಾವಣೆ?

ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ವಿಸ್ತಾರ, ಏರ್‌ಏಷ್ಯಾ ಇಂಡಿಯಾವನ್ನು ಒಂದೇ ಸೂರಿನಡಿ ಅಂದರೆ ಟಾಟಾ ಸನ್ಸ್ ಪ್ರೈ ಲಿಮಿಟೆಡ್(TSPL) ತರುವ ಪ್ರಯತ್ನವನ್ನು ಆರಂಭಿಸಲಾಗಿದೆ. ಇದಕ್ಕಾಗಿ ಒಂದೇ ಕಚೇರಿ ನಿರ್ಮಾಣವಾಗಲಿದ್ದು, ಗುರುಗ್ರಾಮದಲ್ಲಿ ಇದಕ್ಕಾಗಿ ಸ್ಥಳ ಸಹ ಗುರುತಿಸಲಾಗಿದೆ. ಈಗ ಏರ್ ಏಷ್ಯಾ ಲಿಮಿಟೆಡ್ ಸ್ವಾಧೀನವು AAIL ಹಾಗೂ TSPL ನಡುವಿನ ಜಂಟಿ ಯೋಜನೆಯಾಗಲಿದೆ. ಟಾಟಾ ಸನ್ಸ್ ಶೇ 83.67 ಮತ್ತು AAIL ಶೇಕಡಾ 16.33 ಪಾಲನ್ನು ಹೊಂದಿದೆ.

 Competition Commission Okays Proposed Airasia Takeover by Air India

AIL, ಅದರ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲಿಮಿಟೆಡ್ (AIXL) ಜೊತೆಗೆ ಪ್ರಾಥಮಿಕವಾಗಿ ದೇಶೀಯ ನಿಗದಿತ ವಿಮಾನ ಪ್ರಯಾಣಿಕ ಸಾರಿಗೆ ಸೇವೆ, ಅಂತಾರಾಷ್ಟ್ರೀಯ ನಿಗದಿತ ವಿಮಾನ ಪ್ರಯಾಣಿಕ ಸಾರಿಗೆ ಸೇವೆ, ಏರ್ ಕಾರ್ಗೋ ಸಾರಿಗೆ ಸೇವೆಗಳು ಮತ್ತು ಭಾರತದಲ್ಲಿ ಚಾರ್ಟರ್ ಫ್ಲೈಟ್ ಸೇವೆಗಳನ್ನು ಒದಗಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ.

ಏರ್‌ಇಂಡಿಯಾ ಬಿಡ್ ಗೆದ್ದ ಟಾಟಾ ಸನ್ಸ್, ಟಾಟಾ ಪಾಲಾದ ಮಹಾರಾಜ ಏರ್‌ಇಂಡಿಯಾ ಬಿಡ್ ಗೆದ್ದ ಟಾಟಾ ಸನ್ಸ್, ಟಾಟಾ ಪಾಲಾದ ಮಹಾರಾಜ

2014 ರ ಜೂನ್ ತಿಂಗಳಿನಿಂದ ಹಾರಾಟ ಆರಂಭಿಸಿದ ಏರ್ ಏಷ್ಯಾ ಇಂಡಿಯಾ, ದೇಶದಲ್ಲಿ ನಿಗದಿತ ವಿಮಾನ ಪ್ರಯಾಣಿಕ ಸಾರಿಗೆ, ಏರ್ ಕಾರ್ಗೋ ಸಾರಿಗೆ ಮತ್ತು ಚಾರ್ಟರ್ ಫ್ಲೈಟ್ ಸೇವೆಗಳನ್ನು ಒದಗಿಸುತ್ತದೆ. ಆದರೆ, ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ಹೊಂದಿಲ್ಲ.

ಟಾಟಾ ಸನ್ಸ್‌ನ ಏರ್ ಏಷ್ಯಾ ಸ್ವಾಧೀನಕ್ಕೆ ಮುಂದಾದ ಏರ್ ಇಂಡಿಯಾಕ್ಕೆ ಅನುಮೋದನೆ ನೀಡಲಾಗಿದೆ,ಸಂಪೂರ್ಣ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಬಹುದಾಗಿದೆ ಎಂದು ಸಿಸಿಐ ಮಂಗಳವಾರದಂದು ಟ್ವೀಟ್ ಮಾಡಿದೆ.

 Competition Commission Okays Proposed Airasia Takeover by Air India

ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಏರ್ ಇಂಡಿಯಾದಿಂದ ಏರ್ ಏಷ್ಯಾ ಇಂಡಿಯಾದಲ್ಲಿ ಸಂಪೂರ್ಣ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಿಸಿಐ ಅನುಮೋದನೆ ನೀಡಿದೆ ಎಂದು ಹೇಳಿದೆ.

ಪೂರ್ಣ-ಸೇವಾ ವಾಹಕ ಏರ್ ಇಂಡಿಯಾ ಮತ್ತು ಅದರ ಕಡಿಮೆ-ವೆಚ್ಚದ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅನ್ನು ಕಳೆದ ವರ್ಷ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ತಾಲೇಸ್ ಪ್ರೈವೇಟ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಿತು.

ಇದಲ್ಲದೆ, ಸಿಂಗಾಪುರ್ ಏರ್‌ಲೈನ್ಸ್‌ನೊಂದಿಗೆ ಜಂಟಿ ಉದ್ಯಮದಲ್ಲಿ ಪೂರ್ಣ-ಸೇವಾ ಏರ್‌ಲೈನ್ ವಿಸ್ತಾರಾವನ್ನು ಟಾಟಾ ಸಂಸ್ಥೆ ನಿರ್ವಹಿಸುತ್ತವೆ. ಈ ವರ್ಷದ ಜನವರಿಯಲ್ಲಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅನ್ನು ಟಾಟಾ ವಹಿಸಿಕೊಂಡರು. ಅಕ್ಟೋಬರ್ 2021 ರಲ್ಲಿಏರ್ ಇಂಡಿಯಾಕ್ಕಾಗಿ ಬಿಡ್ ಮಾಡಿ ಗೆದ್ದ ಟಾಟಾ ಸಮೂಹ ಸಾಲದ ಹೊರೆಯ ಜೊತೆಗೆ ಹೊಸ ವಿಲೀನಗಳನ್ನು ಪೂರ್ಣಗೊಳಿಸುತ್ತಿದೆ. 2,700 ಕೋಟಿ ರು ನಗದು ಪಾವತಿ ಮತ್ತು 15,300 ಕೋಟಿ ರು ಮೌಲ್ಯದ ವಾಹಕದ ಸಾಲ ಸೇರಿದಂತೆ 18,000 ಕೋಟಿ ರು ಬಿಡ್ ಮಾಡಿ ಮತ್ತೊಮ್ಮೆ ಮಹಾರಾಜನನ್ನು ಟಾಟಾ ತನ್ನದಾಗಿಸಿಕೊಂಡಿತ್ತು.

English summary
Competition Commission of India (CCI) on Tuesday said it has approved the proposed acquisition of the entire shareholding of AirAsia India Ltd by Air India Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X