ಸಿಬ್ಬಂದಿಗಳಿಗೆ ಸಂಬಳ ನೀಡುವುದರಲ್ಲಿ ಬೆಂಗಳೂರಿಗರೇ ಮುಂದು!

Subscribe to Oneindia Kannada

ಬೆಂಗಳೂರು, ಏಪ್ರಿಲ್ 10: ದೇಶದ ಉಳಿದೆಲ್ಲಾ ನಗರಗಳಿಗೆ ಹೋಲಿಸಿದರೆ ಸಿಬ್ಬಂದಿಗಳಿಗೆ ಅತೀ ಹೆಚ್ಚಿನ ಸಂಬಳ ನೀಡುತ್ತಿರುವ ನಗರ ಻ಅಂದರೆ ಅದು ಬೆಂಗಳೂರು. ಮುಂಬೈಯನ್ನು ಹಿಂದಿಕ್ಕಿ ಉದ್ಯಾನ ನಗರಿ ಅತೀ ಹೆಚ್ಚಿನ ಸಂಬಳ ನೀಡುತ್ತಿರುವ ನಗರಗಳಲ್ಲಿ ಟಾಪ್ 1 ಸ್ಥಾನಕ್ಕೆ ಬಂದು ಕುಳಿತಿದೆ.

ಇಲ್ಲಿಯವರೆಗೆ ಭಾರತದ ಸಿಲಿಕಾನ್ ವ್ಯಾಲಿ ಎಂದು ಗುರುತಿಸಿಕೊಂಡ ಬೆಂಗಳೂರಿನಲ್ಲಿ ವಾತಾವರಣ ಚೆನ್ನಾಗಿದೆ ಎಂಬ ಅಭಿಪ್ರಾಯಗಳಿತ್ತು. ಇದೀಗ ಗಾರ್ಡನ್ ಸಿಟಿಯಲ್ಲಿ ಸಂಬಳವೂ ಚೆನ್ನಾಗಿದೆ ಎಂದು ಸಮಿಕ್ಷೆ ಹೇಳಿದೆ. ಅದರಲ್ಲೂ ಬೆಂಗಳೂರಿನಲ್ಲಿರುವ ಐಟಿ ಉದ್ಯೋಗಿಗಳು ಭರ್ಜರಿ ಸಂಬಳ ಪಡೆಯುತ್ತಾರೆ ಎಂದು ಮಾನವ ಸಂಪನ್ಮೂಲ ಸಮೀಕ್ಷೆ 'ರಾಂಡ್ ಸ್ಟಾಡ್' (Randstad) ಹೇಳಿದೆ.[ಪಿಂಕ್ ಹೊಯ್ಸಳ: ಮಹಿಳಾ ರಕ್ಷಣೆಯತ್ತ ದಿಟ್ಟ ಹೆಜ್ಜೆ]

ರಾಂಡ್ ಸ್ಟಾಡ್ ಸ್ಯಾಲರಿ ಟ್ರೆಂಡ್ಸ್ - 2017 ರ ಪ್ರಕಾರ ಬೆಂಗಳೂರಿನಲ್ಲಿ ಉದ್ಯೋಗಿಯೊಬ್ಬರು ಸರಾಸರಿ 14.6 ಲಕ್ಷ ರೂಪಾಯಿ ವಾರ್ಷಿಕ ಸಂಬಳ ಪಡೆಯುತ್ತಾರಂತೆ. ಬೆಂಗಳೂರಿಗೆ ಹೋಲಿಸಿದರೆ ಮುಂಬೈ 14.2 ಲಕ್ಷ ಸಂಬಳ ನೀಡುತ್ತಿದ್ದು ಎರಡನೇ ಸ್ಥಾನದಲ್ಲಿದೆ. ಇನ್ನು ಬೆಂಗಳೂರಿನ ಹಿರಿಯ ಉದ್ಯೋಗಿಗಳು ಮತ್ತು ಕಿರಿಯ ಉದ್ಯೋಗಿಗಳೂ ಹೆಚ್ಚಿನ ಸಂಬಳ ಪಡೆಯುತ್ತಿದ್ದಾರಂತೆ. 20 ರೀತಿಯ ಇಂಡಸ್ಟ್ರಿಗೆ ಸೇರಿದ 15 ರೀತಿಯ 1,00,000 ಉದ್ಯೋಗಿಗಳಿಂದ ಮಾಹಿತಿ ಸಂಗ್ರಹಿಸಿ ಈ ಸಮೀಕ್ಷೆಯ ವರದಿ ಸಿದ್ದಪಡಿಸಲಾಗಿದೆ.

 ವಾರ್ಷಿಕ ಸರಾಸರಿ ಸಂಬಳ

ವಾರ್ಷಿಕ ಸರಾಸರಿ ಸಂಬಳ

ಈ ಸರಾಸರಿ ಸಮೀಕ್ಷೆಯಲ್ಲಿ ಹೈದರಾಬಾದ್ ಮೂರನೇ ಸ್ಥಾನದಲ್ಲಿದ್ದರೆ ದೆಹಲಿ, ಗುರುಗ್ರಾಮ್, ನೋಯ್ಡಾ ಒಳಗೊಂಡ ರಾಷ್ಟ್ರ ರಾಜಧಾನಿ ಪ್ರದೇಶ (ಎನ್ ಸಿ ಆರ್) ನಾಲ್ಕನೇ ಸ್ಥಾನದಲ್ಲಿದೆ. ಚೆನ್ನೈ, ಪುಣೆ, ಕೊಲ್ಕೊತ್ತಾ ನಂತರದ ಸ್ಥಾನಗಳಲ್ಲಿವೆ.

ಬೆಂಗಳೂರು - ರೂ. 14.6 ಲಕ್ಷ

ಮುಂಬೈ - 14.2

ಹೈದರಾಬಾದ್ - 13.6

ದೆಹಲಿ (ಎನ್ ಸಿ ಆರ್) - 13.5

ಚೆನ್ನೈ - 13.4

ಪುಣೆ - 13.2

ಕೊಲ್ಕೊತ್ತಾ - 11.4

15 ಪ್ಲಸ್ ಅನುಭವಿಗಳಿಗೆ

15 ಪ್ಲಸ್ ಅನುಭವಿಗಳಿಗೆ

ಬೆಂಗಳೂರು - ರೂ. 28 ಲಕ್ಷ

ಮುಂಬೈ - 27

ಹೈದರಾಬಾದ್ - 26.8

ದೆಹಲಿ (ಎನ್ ಸಿ ಆರ್) - 26

ಪುಣೆ - 25.5[ಇನ್ಫಿ ಸಿಒಒ ವೇತನ ಹೆಚ್ಚಳ ಪ್ರಮಾಣಕ್ಕೆ ನಾರಾಯಣ ಮೂರ್ತಿ ಅಸಮಾಧಾನ]

 6-15 ವರ್ಷ ಅನುಭವಿಗಳಿಗೆ

6-15 ವರ್ಷ ಅನುಭವಿಗಳಿಗೆ

ಮುಂಬೈ - ರೂ. 10.5 ಲಕ್ಷ

ಬೆಂಗಳೂರು - 10.4

ಚೆನ್ನೈ - 10.3

ದೆಹಲಿ (ಎನ್ ಸಿ ಆರ್) - 10.2

ಹೈದರಾಬಾದ್ - 9.8

 0-6 ವರ್ಷ ಅನುಭವಿಗಳ ಸಂಬಳ

0-6 ವರ್ಷ ಅನುಭವಿಗಳ ಸಂಬಳ

ಬೆಂಗಳೂರು - ರೂ. 5.5 ಲಕ್ಷ

ದೆಹಲಿ (ಎನ್ ಸಿ ಆರ್) - 5.3

ಚೆನ್ನೈ - 5.2

ಮುಂಬೈ - 5.1

ಹೈದರಾಬಾದ್ - 4.9[ಸ್ಕೈವಾಕ್ ಇರುವುದು ನಿಮಗಾಗಿ, ಪಾದಚಾರಿಗಳೇ ಬಳಸಿ]

ವಲಸಿಗರ ರಾಜಧಾನಿ

ವಲಸಿಗರ ರಾಜಧಾನಿ

ಶೈಕ್ಷಣಿಕ ವಿದ್ಯಾರ್ಹತೆ ಇರುವ ಹೆಚ್ಚಿನ ಜನರನ್ನು ಆಕರ್ಷಿಸುವ ನಗರ ಅಂದರೆ ಅದು ಬೆಂಗಳೂರು. ಒಂಥರಾ ವಲಸಿಗರ ಪಾಲಿಗೆ ಬೆಂಗಳೂರು ರಾಜಧಾನಿ. ಅದರಲ್ಲೂ ದೇಶದ ದೊಡ್ಡ ದೊಡ್ಡ ಐಟಿ ಕಂಪೆನಿಗಳಾದ ಇನ್ಫೋಸಿಸ್, ವಿಪ್ರೊ ಬೆಂಗಳೂರಲ್ಲೇ ನೆಲೆ ನಿಂತಿದ್ದು ಹೆಚ್ಚಿನ ಐಟಿ ಉದ್ಯೋಗಿಗಳು ಉದ್ಯೋಗ ಅರಸಿ ಬೆಂಗಳೂರಿಗೆ ಬರುತ್ತಾರೆ. ಓಲಾ, ಫ್ಲಿಪ್ಕಾರ್ಟ್ ನಂತರಹ ಸ್ಟಾರ್ಟ್ ಅಪ್ ಗಳೂ ಇಲ್ಲೇ ಹುಟ್ಟಿಕೊಂಡಿದೆ; ಹೀಗೆ ಸ್ಟಾರ್ಟ್ ಅಪ್ ಗಳಿಗೂ ಹೆಚ್ಚಿನ ಅವಕಾಶ ಇಲ್ಲಿದೆ.

ಈ ಜಾಬ್ ಗಳಿಗೆ ಇದೆ ಡಿಮ್ಯಾಂಡ್

ಈ ಜಾಬ್ ಗಳಿಗೆ ಇದೆ ಡಿಮ್ಯಾಂಡ್

ಟೆಕ್ ಜಾಬ್ಸ್ ಗಳಲ್ಲಿ 6 - 10 ವರ್ಷ ಅನುಭವಿಗಳಿಗೆ ದೇಶದೆಲ್ಲೆಡೆ ಹೆಚ್ಚಿನ ಡಿಮ್ಯಾಂಡ್ ಇದೆ. ಅದರಲ್ಲೂ ಜಾವಾ ತಜ್ಞರು, ಡಿಜಿಟಲ್ ಮಾರ್ಕೆಟ್ ಅನುಭವಿಗಳು, ಅಟೊಮೇಷನ್ ಎಂಜಿನಿಯರ್ ಗಳಿಗೆ ದೇಶದಾದ್ಯಂತ ಬೇಡಿಕೆ ಇದೆ. ದೇಶದೆಲ್ಲೆಡೆ ಹೆಚ್ಚಿನ ಸಂಬಳವನ್ನೂ ಇದೇ ವರ್ಗದ ಸಿಬ್ಬಂದಿಗಳು ಪಡೆದುಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Companies in Bengaluru pay more salary than those in any other city in the country. Bengaluru, with an average annual salary of Rs14.6 lakh, beat Mumbai, with Rs14.2 lakh.
Please Wait while comments are loading...