ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಚ್ಚಿ ಬೀಳಿಸುವ ಸಂಗತಿ ಬಾಯ್ಬಿಟ್ಟ ಏಮ್ಸ್ ನಿರ್ದೇಶಕ: ಸಮುದಾಯಕ್ಕೆ ಹಬ್ಬುತ್ತಿದೆ ಕೊರೊನಾ!

|
Google Oneindia Kannada News

ನವದೆಹಲಿ, ಏಪ್ರಿಲ್ 6: ಭಾರತದಲ್ಲಿ ಮೊದಲು ವಿದೇಶಗಳಿಂದ ಬಂದಿರುವವರಲ್ಲಿ ಕೋವಿಡ್-19 ಪಾಸಿಟಿವ್ ಕಂಡು ಬಂದಿತ್ತು. ಬಳಿಕ ಸೋಂಕಿತರ ಸಂಪರ್ಕಕ್ಕೆ ಬಂದವರಿಗೂ ಸೋಂಕು ತಗುಲಿತ್ತು.

ಕೋವಿಡ್-19 ಹರಡುವಿಕೆಯಲ್ಲಿ ಭಾರತ ಇಲ್ಲಿಯವರೆಗೂ ಎರಡನೇ ಹಂತ ಅಂದ್ರೆ ಲೋಕಲ್ ಟ್ರಾನ್ಸ್ ಮಿಷನ್ (ಸ್ಥಳೀಯ ಪ್ರಸರಣ) ನಲ್ಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಭಾರತ ಎರಡನೇ ಹಂತ ದಾಟಿ ಮುಂದಕ್ಕೆ ಹೋಗಿರುವ ಭಯಾನಕ ಸಂಗತಿ ಇದೀಗ ಬಯಲಾಗಿದೆ.

ಚೀನಾದಲ್ಲೊಂದು ವಿಚಿತ್ರ ಕೊರೊನಾ ಕೇಸ್: ವಾಸಿ ಆಗಿದ್ದು ಹೇಗೆ ಗೊತ್ತಾ.?ಚೀನಾದಲ್ಲೊಂದು ವಿಚಿತ್ರ ಕೊರೊನಾ ಕೇಸ್: ವಾಸಿ ಆಗಿದ್ದು ಹೇಗೆ ಗೊತ್ತಾ.?

ಭಾರತದ ಹಲವು ಪ್ರದೇಶಗಳು ಈಗಾಗಲೇ ಸ್ಟೇಜ್ 3 ಅಂದ್ರೆ ಕಮ್ಯೂನಿಟಿ ಟ್ರಾನ್ಸ್ ಮಿಷನ್ ಅರ್ಥಾತ್ ಸಮುದಾಯ ಪ್ರಸರಣ ಹಂತ ತಲುಪಿದೆ ಎಂಬ ಶಾಕಿಂಗ್ ನ್ಯೂಸ್ ನ ಏಮ್ಸ್ ನಿರ್ದೇಶಕ ನೀಡಿದ್ದಾರೆ.

ಮೂರನೇ ಹಂತ ತಲುಪಿದೆ.!

ಮೂರನೇ ಹಂತ ತಲುಪಿದೆ.!

''ದೇಶದ ಹಲವು ಪ್ರದೇಶಗಳು ಈಗಾಗಲೇ ಮೂರನೇ ಹಂತ ತಲುಪಿದೆ. ಸಮುದಾಯಗಳಿಗೆ ಕೊರೊನಾ ವೈರಸ್ ಹರಡಲು ಆರಂಭವಾಗಿರುವುದು ಕಂಡು ಬಂದಿದೆ'' ಎಂದು ನವದೆಹಲಿಯ ಏಮ್ಸ್ ನಿರ್ದೇಶಕ ಡಾ.ರಣ್ದೀಪ್ ಗುಲೇರಿಯಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಏಮ್ಸ್ ನಿರ್ದೇಶಕ ಹೇಳಿದ್ದೇನು.?

ಏಮ್ಸ್ ನಿರ್ದೇಶಕ ಹೇಳಿದ್ದೇನು.?

''ಕೆಲವು ಪ್ರದೇಶಗಳಲ್ಲಿ ಸಮುದಾಯಕ್ಕೆ ಕೊರೊನಾ ವೈರಸ್ ಸೋಂಕು ಹರಡುತ್ತಿದ್ದರೂ, ಭಾರತ ಎರಡನೇ ಹಂತ (ಸ್ಥಳೀಯ ಹರಡುವಿಕೆ) ಮತ್ತು ಮೂರನೇ ಹಂತದ (ಸಮುದಾಯ ಪ್ರಸರಣ) ಮಧ್ಯದಲ್ಲಿದೆ'' ಎಂದಿದ್ದಾರೆ ಡಾ.ರಣ್ದೀಪ್ ಗುಲೇರಿಯಾ.

ಕೊರೊನಾ ಹರಡುವಿಕೆ ಬಗ್ಗೆ ವಿಜ್ಞಾನಿಗಳಿಂದ ಅಘಾತಕಾರಿ ವಿಷಯ ಬಹಿರಂಗ.!ಕೊರೊನಾ ಹರಡುವಿಕೆ ಬಗ್ಗೆ ವಿಜ್ಞಾನಿಗಳಿಂದ ಅಘಾತಕಾರಿ ವಿಷಯ ಬಹಿರಂಗ.!

ಹೆಚ್ಚು ಜಾಗರೂಕರಾಗಿರಿ

ಹೆಚ್ಚು ಜಾಗರೂಕರಾಗಿರಿ

''ಮುಂಬೈ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಸಾಮುದಾಯಿಕವಾಗಿ ಕೊರೊನಾ ವೈರಸ್ ಹರಡುತ್ತಿದೆ. ಈಗಲೇ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ತಡೆಗಟ್ಟಿದರೆ, ಅಪಾಯವನ್ನು ತಪ್ಪಿಸಬಹುದು. ನಾವೀಗ ಹೆಚ್ಚು ಜಾಗರೂಕರಾಗಿರುವುದು ಅವಶ್ಯಕ'' ಅಂತಾರೆ ಡಾ.ರಣ್ದೀಪ್ ಗುಲೇರಿಯಾ.

ಲಾಕ್ ಡೌನ್ ವಿಸ್ತರಣೆ ಆಗುತ್ತಾ.?

ಲಾಕ್ ಡೌನ್ ವಿಸ್ತರಣೆ ಆಗುತ್ತಾ.?

''ತಬ್ಲಿಘಿ ಜಮಾತ್ ಕಾರ್ಯಕ್ರಮದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಇದರಲ್ಲಿ ಭಾಗವಹಿಸಿದ ಎಲ್ಲರನ್ನೂ ಪತ್ತೆ ಹೆಚ್ಚಿ, ಪ್ರತ್ಯೇಕಗೊಳಿಸುವುದು ಅವಶ್ಯಕ. ಲಾಕ್ ಡೌನ್ ವಿಸ್ತರಣೆ ಬಗ್ಗೆ ಏಪ್ರಿಲ್ 10 ರ ನಂತರದ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧರಿಸಬೇಕಾಗುತ್ತದೆ'' ಎಂದು ಡಾ.ರಣ್ದೀಪ್ ಗುಲೇರಿಯಾ ಹೇಳಿದ್ದಾರೆ.

ಭಾರತದ ಅಂಕಿ-ಅಂಶ

ಭಾರತದ ಅಂಕಿ-ಅಂಶ

ಭಾರತದಲ್ಲಿ ಇಲ್ಲಿಯವರೆಗೂ 4502 ಕೋವಿಡ್-19 ಪಾಸಿಟಿವ್ ಕೇಸ್ ಗಳು ದೃಢಪಟ್ಟಿವೆ. ಅದರಲ್ಲಿ 337 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 125 ಮಂದಿ ಸಾವನ್ನಪ್ಪಿದ್ದಾರೆ.

ಕೋವಿಡ್-19: ಜೀವ ಉಳಿಸುತ್ತಾ ವೆಂಟಿಲೇಟರ್? ಇದಕ್ಕೇಕೆ ಅಷ್ಟೊಂದು ಹಾಹಾಕಾರ?ಕೋವಿಡ್-19: ಜೀವ ಉಳಿಸುತ್ತಾ ವೆಂಟಿಲೇಟರ್? ಇದಕ್ಕೇಕೆ ಅಷ್ಟೊಂದು ಹಾಹಾಕಾರ?

English summary
Community Transmission has begun in some parts of India says AIIMS Director.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X