ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಿಎಂ ಶೀಲಾ ದೀಕ್ಷಿತ್‌ ವಿರುದ್ಧ ಬಿತ್ತು ಎಫ್‌ಐಆರ್‌

By Srinath
|
Google Oneindia Kannada News

Commonwealth Games scandal ACB to file FIR against Sheila Dikshit- AAP
ನವದೆಹಲಿ, ಫೆ.6: ಆಮ್ ಆದ್ಮಿ ಪಕ್ಷ ನೇತಾರ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾ ಅವರು ತಮ್ಮ ಹಿಂದಿನ ಮುಖ್ಯಮಂತ್ರಿ, ಕಾಂಗ್ರೆಸ್ಸಿನ ಶೀಲಾ ದೀಕ್ಷಿತ್ ವಿರುದ್ಧ FIR ದಾಖಲಿಸುವಂತೆ ಭ್ರಷ್ಟಾಚಾರ ವಿರೊಧಿ ದಳಕ್ಕೆ ಆದೇಶಿಸಿದ್ದಾರೆ.

ಈ ಸಂಬಂಧ ಕಳೆದ ಸೋಮವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದು, ಶೀಲಾ ದಿಕ್ಷಿತ್ ವಿರುದ್ಧ ತನಿಖೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.

ಶೀಲಾ ದಿಕ್ಷಿತ್ ಬಂಧನ ಸಾಧ್ಯತೆ:
ಮಾಜಿ ಸಿಎಂ ಶೀಲಾ ದೀಕ್ಷಿತ್‌ ಅವರು ತಮ್ಮ ಆಡಳಿತಾವಧಿಯಲ್ಲಿ ನಡೆದ ಕಾಮನ್ವೆಲ್ತ್‌ ಗೇಮ್ಸ್‌ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ದಿಲ್ಲಿ ಸರಕಾರವು ಹಗರಣದ ಎಲ್ಲಾ ದಾಖಲೆಗಳನ್ನು ದೆಹಲಿ ಪೊಲೀಸ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಗುರುವಾರ ನೀಡಿ, ಎಫ್‌ ಐ ಆರ್ ದಾಖಲಿಸಿಕೊಳ್ಳುವಂತೆ ಆದೇಶಿಸಿದೆ.

ಭ್ರಷ್ಟಾಚಾರ ನಿಗ್ರಹ ಪಡೆ ದೆಹಲಿ ಮಾಜಿ ಸಿಎಂ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದೆ. ಶೀಲಾ ದಿಕ್ಷಿತ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ.

ಶೀಲಾ ದಿಕ್ಷಿತ್ ಸೇರಿದಂತೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಇತರೆ ಕಾಂಗ್ರೆಸ್ ನಾಯಕರು ವಿರುದ್ಧವೂ ತನಿಖೆ ನಡೆಸುವುದಾಗಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಆಮ್ ಆದ್ಮಿ ಸರಕಾರ ಹೇಳಿತ್ತು.

ಕ್ರೀಡಾಕೂಟಕ್ಕೆ ಅಳವಡಿಸಲಾಗಿದ್ದ ಬೀದಿ ದೀಪಗಳ ಹಣಕಾಸಿನ ಅವ್ಯವಹಾರ ಕುರಿತ ಸುಮಾರು 92 ಕೋಟಿ ರೂಪಾಯಿಗಳ ಹಗರಣವನ್ನು ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆಗೆ ಆದೇಶಿಸಲಾಗಿದೆ. ಪ್ರಕರಣ ಕುರಿತಂತೆ ಪ್ರಧಾನಿ ನೇಮಿಸಿದ್ದ ನಿವೃತ್ತ ಸಿಎಜಿ ವಿಕೆ ಶಂಗ್ಲು ಸಮಿತಿ ಸಹ ಕಾಮನ್ವೆಲ್ತ್ ಗೇಮ್ಸ್ ಹಗರಣದ ಕುರಿತು ಬೆಳಕು ಚೆಲ್ಲಿತ್ತು. ಹಗರಣಕ್ಕೆ ಅಂದಿನ ದೆಹಲಿ ಸಿಎಂ ಶೀಲಾ ದೀಕ್ಷಿತ್ ಮತ್ತು ಮುನ್ಸಿಪಲ್ ಕಾರ್ಪೊರೇಶನ್ ನೇರ ಹೊಣೆ ಎಂದು ಶಂಗ್ಲು ಸಮಿತಿ ವರದಿ ನೀಡಿತ್ತು. ಆದರೆ ಯುಪಿಎ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

English summary
Commonwealth Games scandal ACB to file FIR against Sheila Dikshit- Delhi CM Arvind Kejriwal. Today (Thursday) his government reportedly asked the anti-corruption bureau to file an FIR against former Congress CM Sheila Dikshit for her alleged role in a scam related to the 2010 Commonwealth Games in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X