ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ಮಾಧ್ಯಮಕ್ಕೆ ಕಡಿವಾಣ ಹಾಕಲು ಹೊಸ ಸಮಿತಿ

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ನವದೆಹಲಿ, ಏಪ್ರಿಲ್ 06: ಆನ್ ಲೈನ್ ಮಾಧ್ಯಮಗಳನ್ನು ನಿಯಂತ್ರಿಸಲು ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವಾಲಯ ಹೊಸ ಸಮಿತಿಯೊಂದನ್ನು ನಿರ್ಮಿಸಿದೆ.

'ಸುಳ್ಳು ಸುದ್ದಿ'ಗೆ ಶಿಕ್ಷೆ: ನಿರ್ಧಾರ ಹಿಂಪಡೆಯಲು ಮೋದಿ ಸೂಚನೆ'ಸುಳ್ಳು ಸುದ್ದಿ'ಗೆ ಶಿಕ್ಷೆ: ನಿರ್ಧಾರ ಹಿಂಪಡೆಯಲು ಮೋದಿ ಸೂಚನೆ

ಏಪ್ರಿಲ್ 4 ರಂದು ಸಚಿವಾಲಯ ಬಿಡುಗಡೆ ಮಾಡಿದ ಪತ್ರವೊಂದರಲ್ಲಿ, ಆನ್ ಲೈನ್ ಮಾಧ್ಯಮಗಳನ್ನು ನಿಯಂತ್ರಿಸಲು 10 ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಮಿತಿಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ಕಾರ್ಯದರ್ಶಿಗಳು, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಗೃಹ ಖಾತೆಯ ಕಾರ್ಯದರ್ಶಿಗಳೂ ಇದ್ದಾರೆ ಎಂದು ತಿಳಿದುಬಂದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಇತ್ತೀಚೆಗಷ್ಟೇ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತೆಗೆದುಕೊಂಡಿದ್ದ, 'ಸುಳ್ಳುಸುದ್ದಿಗಳಿಗೆ ಕಡಿವಾಣ' ಹಾಕುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಸ್ವತಃ ಪ್ರಧಾನಿ ನರೇಂ್ದರ ಮೋದಿ ಸೂಚಿಸಿದ್ದರು. ಆ ನಂತರ ಈ ಬೆಳವಣಿಗೆ ಸಂಭವಿಸಿದೆ.
ಈ ಸಮಿತಿಯಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೋಸಿಯೇಶನ್ ಮತ್ತು ಇಂಡಿಯನ್ ಬ್ರಾಡ್ ಕಾಸ್ಟರ್ಸ್ ಫೆಡರೇಶನ್ ನ ಪ್ರತಿನಿಧಿಗಳೂ ಇದ್ದಾರೆ.

Committee to regulate online media formed by I&B Ministry

ಆನ್ ಲೈನ್ ಮಿಡಿಯಾ ಅಥವಾ ನ್ಯೂಸ್ ಪೋರ್ಟಲ್ ಗಳನ್ನು ನಿಯಂತ್ರಿಸಲು ಇದುವರೆಗೂ ಯಾವುದೇ ನಿಯಮಗಳಿರಲಿಲ್ಲ. ಆದ್ದರಿಂದ ಈ ನಿರ್ಧಾರ ಕಅಯಗೊಳ್ಳಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

English summary
A committee to modulate news portals and media websites has been formed the Information and Broadcasting Ministry. The committee was formed just a few days after the Centre recalled its directive regarding fake news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X