ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈನಿಂದ ಶಿರಡಿಗೆ ವಿಮಾನ ಯಾನ ಸೇವೆ ಆರಂಭ!

|
Google Oneindia Kannada News

ಪುಣೆ, ಜೂನ್ 6: ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಶಿರಡಿ ವಿಮಾನ ನಿಲ್ದಾಣವು ಮುಂದಿನ ತಿಂಗಳು ಕಾರ್ಯಾಚರಣೆ ಆರಂಭಿಸಲಿದೆ. ಆ ಮೂಲಕ ವಾಣಿಜ್ಯ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಮಹಾರಾಷ್ಟ್ರ ವಿಮಾನನಿಲ್ದಾಣ ಅಭಿವೃದ್ಧಿ ಕಂಪೆನಿಯ ಅಧಿಕಾರಿಗಳು ಈ ವಿಚಾರವನ್ನು ಸೋಮವಾರ ಖಾತ್ರಿ ಪಡಿಸಿದ್ದಾರೆ.

"ಜುಲೈ ತಿಂಗಳ ಆರಂಭದಲ್ಲಿ ವಾಣಿಜ್ಯ ವಿಮಾನಗಳ ಹಾರಾಟವು ಶಿರಡಿ ವಿಮಾನ ನಿಲ್ದಾಣದಲ್ಲಿ ಆರಂಭವಾಗಲಿದೆ. ಏರ್ ಇಂಡಿಯಾ ಇದರ ನೇತೃತ್ವ ವಹಿಸಲಿದೆ. ಆ ನಂತರ ಟ್ರೂಜೆಟ್ ಕೂಡ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ" ಎಂದು ಎಂಎಡಿಸಿಯ ಉಪಾಧ್ಯಕ್ಷ ಹಾಗೂ ಕಾರ್ಯನಿರ್ವಹಣಾ ನಿರ್ದೇಶಕ ಸುರೇಶ್ ಕಕಾನಿ ತಿಳಿಸಿದ್ದಾರೆ.

Commercial flights to take off from Shirdi in July

ಜೂನ್ ಏಳರಂದು ನವದೆಹಲಿಯಲ್ಲಿ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ತೆರಳಿ ಶಿರಡಿ ಹಾಗೂ ಪುಣೆ ವಿಮಾನ ನಿಲ್ದಾಣ ಯೋಜನೆ ಬಗ್ಗೆ ಮಾತುಕತೆ ನಡೆಸಲಿದ್ದೇವೆ. ಪರವಾನಗಿ ಅಗತ್ಯ ಇದ್ದಿದ್ದರಿಂದ ಸೇವೆ ತಡವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಹದಿನೈದು ದಿನದಲ್ಲಿ ಪರವಾನಗಿ ದೊರೆಯಲಿದೆ. ವಿಮಾನ ನಿಲ್ದಾಣ ಸರ್ವ ರೀತಿಯಲ್ಲೂ ಸಜ್ಜಾಗಿದೆ. ಮುಂದಿನ ವಾರ ಒಮ್ಮೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಖಾತ್ರಿ ಪಡಿಸಿದ್ದಾರೆ. ಶಿರಡಿಯಿಂದ ದೇಶೀಯವಾಗಿ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಸಿದ್ಧತೆ ನಡೆದಿದೆ.

ಕಳೆದ ವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಎಂಎಡಿಸಿ ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ಮುಂದೆ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದ ಅಧಿಕಾರಿಗಳ ಸಹಕಾರದ ಜತೆಗೆ ಶಿರಡಿ ವಿಮಾನ ನಿಲ್ದಾಣದ ವಿಸ್ತರಣೆಯ ಬಗ್ಗೆ ಸುಳಿವು ನೀಡಿದ್ದಾರೆ ಫಡಣವೀಸ್.

English summary
The much-delayed Shirdi airport will be open for commercial flights from early next month, officials of the Maharashtra Airport Development Company Limited (MADC) confirmed on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X