ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಕಾ ಕೋಲ ಕಂಡುಹಿಡಿದಿದ್ದು ನಿಂಬೆ ಪಾನಕ ಮಾರಾಟಗಾರ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಜೂನ್ 11: 'ನಾನೊಂದು ಮೆಷಿನ್ ತಯಾರಿಸುತ್ತೇನೆ. ಹೇಗೆಂದರೆ ನೀವು ಒಂದು ಬದಿಯಿಂದ ಆಲೂಗಡ್ಡೆ ಹಾಕಿದರೆ ಚಿನ್ನ ಹೊರಬೀಳುತ್ತದೆ. ಎಷ್ಟೊಂದು ಹಣ ಸಿಗುತ್ತದೆ ಎಂದರೆ ಅದರಲ್ಲಿ ಏನು ಮಾಡುವುದು ಎಂದು ನಿಮಗೆ ಗೊತ್ತಾಗುವುದೇ ಇಲ್ಲ' ಎಂದು ಒಮ್ಮೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.

ಈ ಮಾತು ಬಿಜೆಪಿ ಮತ್ತು ಅದರ ಬೆಂಬಲಿಗರ ಪಾಲಿಗೆ ಅಪಹಾಸ್ಯದ ವಸ್ತುವಾಗಿತ್ತು. ಆದರೆ, ಅದನ್ನು ಬಿಜೆಪಿಯನ್ನು ಲೇವಡಿ ಮಾಡುವ ಸಲುವಾಗಿ ರಾಹುಲ್ ಗಾಂಧಿ ನೀಡಿದ್ದ ವ್ಯಂಗ್ಯದ ಹೇಳಿಕೆ ಎಂದು ಹೇಳಲಾಗಿತ್ತು.

ರಾಹುಲ್ ಗಾಂಧಿ ಮೇಲೆ ವೈಯಕ್ತಿಕ ವಾಗ್ದಾಳಿ ಇಲ್ಲ: ಬದಲಾದ ಶಾ ವರಸೆರಾಹುಲ್ ಗಾಂಧಿ ಮೇಲೆ ವೈಯಕ್ತಿಕ ವಾಗ್ದಾಳಿ ಇಲ್ಲ: ಬದಲಾದ ಶಾ ವರಸೆ

ರಾಹುಲ್ ನೀಡುವ ಅನೇಕ ಹೇಳಿಕೆಗಳು ಎದುರಾಳಿಗಳಿಗೆ ಹಾಸ್ಯದ ವಸ್ತುವಾಗಿ ಪರಿಣಮಿಸುತ್ತಿದೆ. ಈಗ ರಾಹುಲ್ ಅಂತಹದ್ದೇ ಹೇಳಿಕೆ ನೀಡುವ ಮೂಲಕ ಮತ್ತೆ ನಗೆಪಾಟಲಿಗೆ ಒಳಗಾಗಿದ್ದಾರೆ.

coca cola was founded by lemonade seller: rahul gandhi

ಅಂತರರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಕೋಕಾ ಕೋಲವನ್ನು ಕಂಡು ಹಿಡಿದ ವ್ಯಕ್ತಿ ಒಂದು ಕಾಲದಲ್ಲಿ ನಿಂಬೆ ಹಣ್ಣಿನ ಪಾನಕ ಮಾರಾಟ ಮಾಡುತ್ತಿದ್ದ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇತರೆ ಹಿಂದುಳಿದ ವರ್ಗಗಳ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಕೋಕಾ ಕೋಲಾದ ಸಂಸ್ಥಾಪಕ ಯಾರು ಗೊತ್ತೇ? ಅವರು ಮೊದಲು ನಿಂಬೆ ಪಾನಕ ಮಾರುತ್ತಿದ್ದರು ಎಂದು ರಾಹುಲ್ ಅಪಹಾಸ್ಯಕ್ಕೆ ತುತ್ತಾಗಿದ್ದಾರೆ.

ರಾಹುಲ್ ಅವರ ಭಾಷಣ ಬರೆದವನು ನಿಜಕ್ಕೂ ಮಹಾನ್ರಾಹುಲ್ ಅವರ ಭಾಷಣ ಬರೆದವನು ನಿಜಕ್ಕೂ ಮಹಾನ್

ಅಮೆರಿಕದ ಔಷಧ ವ್ಯಾಪಾರಿ ಜಾನ್ ಪೆಂಬರ್ಟನ್, 1886ರಲ್ಲಿ ಸೋಡಾ ಬಳಸಿ ಪಾನೀಯವೊಂದನ್ನು ಸಿದ್ಧಪಡಿಸಿದ್ದರು. ಬಳಿಕ ಅದು ಕೋಕಾ ಕೋಲಾವಾಗಿ ಬದಲಾಗಿತ್ತು.

ಅಲ್ಲದೆ, ಅಮೆರಿಕದ ಜನಪ್ರಿಯ ಫಾಸ್ಟ್ ಫುಡ್ ಕಂಪೆನಿ ಮೆಕ್‌ಡೊನಾಲ್ಡ್‌ ಮಾಲೀಕ ಮೊದಲು ರಸ್ತೆ ಬದಿಯ ಡಾಬಾ ನಡೆಸುತ್ತಿದ್ದರು ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.

ಒಬಿಸಿ ವರ್ಗದ ಜನರಲ್ಲಿ ಕೌಶಲದ ಕೊರತೆಯಿಲ್ಲ. ಅವರಲ್ಲಿ ಸಂಪೂರ್ಣ ಕೌಶಲವಿದೆ. ಬ್ಯಾಂಕುಗಳು ನಮ್ಮ ರೈತರು ಮತ್ತು ಸಣ್ಣ ಉದ್ದಿಮೆದಾರರಿಗೆ ಏಕೆ ತೆರೆದುಕೊಳ್ಳುತ್ತಿಲ್ಲ? ಒಬಿಸಿ ಸಮುದಾಯದಲ್ಲಿ ಕೌಶಲಕ್ಕೆ ಕೊರತೆಯಿಲ್ಲ. ಆದರೆ ಅವರಿಗೆ ಬಂಡವಾಳ ಸಿಗುತ್ತಿಲ್ಲ ಎಂದಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯ ಕಾರ್ಯತಂತ್ರ ಸ್ಪಷ್ಟವಾಗಿದೆ. 15-20 ಶ್ರೀಮಂತ ಉದ್ಯಮಿಗಳು ಸಾವಿರಾರು ಕೋಟಿ ಹಣವನ್ನು ಮೋದಿ ಅವರಿಗೆ ನೀಡುತ್ತಾರೆ. ಮತ್ತು ಈ 15-20 ಶ್ರೀಮಂತರಿಗೇ ಎಲ್ಲ ಲಾಭಗಳು ಸಿಗುತ್ತಿವೆ ಎಂದು ಹೇಳಿದ್ದಾರೆ.

ಸಂಸದರು ಸೇರಿದಂತೆ ಪ್ರತಿಯೊಬ್ಬರೂ ಮಾತನಾಡಲು ಹೆದರುತ್ತಿದ್ದಾರೆ. ಹೆಚ್ಚಿನವರಿಗೆ ಮಾತನಾಡಲು ಬಿಡುತ್ತಲೇ ಇಲ್ಲ. ಅವರಲ್ಲಿ ಮಾತನಾಡುವವರನ್ನು ಬಿಜೆಪಿ ಕೇಳಿಸಿಕೊಳ್ಳುವುದೇ ಇಲ್ಲ. ಆರ್‌ಎಸ್‌ಎಸ್‌ಗೆ ಮಾತ್ರ ಕೇಳಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ದೇಶವು ಬಿಜೆಪಿಯ ಇಬ್ಬರು ಮೂವರು ಮುಖಂಡರು ಮತ್ತು ಆರ್‌ಎಸ್‌ಎಸ್‌ನ ಗುಲಾಮನಾಗಿದೆ ಎಂದು ಟೀಕಿಸಿದ್ದಾರೆ.

English summary
Congress president Rahul Gandhi said that the founder of Coca Cola drink once used to cell lemonade. And the owner of American fast food company McDonald was once used to run a Dhaba.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X