ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ಸಂಸದರ ಡೀಲ್ ಬಹಿರಂಗ ಪಡಿಸಿದ ಕೋಬ್ರಾ

By Mahesh
|
Google Oneindia Kannada News

ನವದೆಹಲಿ, ಡಿ.13 : ಹಣಕ್ಕಾಗಿ ಕಾಲ್ಪನಿಕ ವಿದೇಶಿ ತೈಲ ಸಂಸ್ಥೆಯೊಂದಕ್ಕೆ ಶಿಫಾರಸು ಪತ್ರಗಳನ್ನು ಬರೆಯಲು 11 ಮಂದಿ ಸಂಸದರು ಬಯಸಿದ್ದರೆಂಬುದನ್ನು ತನಿಖಾ ವೆಬ್ ತಾಣ ಕೋಬ್ರಾ ಪೋಸ್ಟ್ ಬಹಿರಂಗಪಡಿಸಿದೆ.

ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ, ಜೆಡಿಯು ಹಾಗೂ ಎಡಿಎಂಕೆ ಸಂಸದರು ರೂ. 50 ಸಾವಿರದಿಂದ 50 ಲಕ್ಷದವರೆಗಿನ ಶುಲ್ಕಕ್ಕೆ ಬದಲಾಗಿ ಕಾಲ್ಪನಿಕ ಆಸ್ಟ್ರೇಲಿಯನ್ ತೈಲ ಶೋಧನ ಸಂಸ್ಥೆಯೊಂದರ ಪರವಾಗಿ ಪೆಟ್ರೋಲಿಯಂ ಸಚಿವಾಲಯಕ್ಕೆ ಶಿಫಾರಸು ಪತ್ರಗಳನ್ನು ನೀಡಲು ಬಯಸಿರುವುದು ಒಂದು ವರ್ಷದ ಕಾಲ ನಡೆಸಿದ ತನಿಖೆಯಿಂದ ತಿಳಿದು ಬಂದಿದೆ. ಈ ಸಂಸದರಲ್ಲಿ 6 ಮಂದಿ ಹಣಕ್ಕಾಗಿ ಪತ್ರಗಳನ್ನೂ ಬರೆದಿದ್ದಾರೆ.

'ಆಪರೇಶನ್ ಫಾಲ್ಕನ್ ಕ್ಲಾ' ಎಂಬ ಗುಪ್ತನಾಮದ ಕಾರ್ಯಾಚರಣೆಯಲ್ಲಿ ಈ ಸಂಸದರು ಕೇವಲ ಶಿಫಾರಸು ಪತ್ರ ಬರೆಯಲು ಮಾತ್ರವಲ್ಲದೆ, ಆ ಕಾಲ್ಪನಿಕ ಸಂಸ್ಥೆಗೆ ಈಶಾನ್ಯ ಪ್ರಾಂತದಲ್ಲಿ ತೈಲ ಶೋಧ ಹಾಗೂ ಕೊರೆಯುವ ಹಕ್ಕು ಪಡೆಯಲು ಸಹಾಯಕವಾಗಿ ಪೆಟ್ರೋಲಿಯಂ ಸಚಿ ವಾಲಯದೊಂದಿಗೆ ಲಾಬಿ ಮಾಡಲೂ ಬಯಸಿದ್ದರು ಎಂಬುದು ಬಹಿರಂಗವಾಗಿದೆ ಎಂದು ಕೋಬ್ರಾ ಪೋಸ್ಟ್ ಪ್ರತಿಪಾದಿಸಿದೆ.

Cobrapost 'clawed' 11 ministers, demanding money for lobbying

ಎಐಡಿಎಂಕೆಯ ಕೆ.ಸುಗಮಾರನ್ ಹಾಗೂ ಸಿ.ರಾಜೇಂದ್ರನ್, ಬಿಜೆಪಿಯ ಲಾಲುಭಾಯಿ ಪಟೇಲ್, ರವೀಂದ್ರಕುಮಾರ್ ಪಾಂಡೆ ಹಾಗೂ ಹರಿ ಮಂಝಿ, ಜೆಡಿಯುನ ವಿಶ್ವಮೋಹನ ಕುಮಾರ್, ಮಹೇಶ್ವರ ಹಝಾರಿ ಹಾಗೂ ಭೂದೇವ ಚತುರ್ವೇದಿ, ಕಾಂಗ್ರೆಸ್‌ನ ಖಿಲಾಡಿಲಾಲ್ ಭೈರವ ಹಾಗೂ ವಿಕ್ರಂಭಾಯಿ ಅರ್ಜನಭಾಯಿ ಮತ್ತು ಬಿಎಸ್ಪಿಯ ಕೈಸರ್ ಜಹಾನ್ ಈ ಕಾರ್ಯಾಚರಣೆಯಿಂದ ಬಹಿರಂಗಕ್ಕೆ ಬಂದಿರುವ ಸಂಸದರಾಗಿದ್ದಾರೆ.

ಮೆಡಿಟರೇನಿಯನ್ ಆಯಿಲ್ ಇಂಕ್ ಎಂಬ ಕಾಲ್ಪನಿಕ ಸಂಸ್ಥೆಯ ಪರವಾಗಿ 6 ಸಂಸದರು ರೂ. 50 ಸಾವಿರದಿಂದ ರೂ. 75 ಸಾವಿರದ ವರೆಗಿನ ಮೊತ್ತಕ್ಕೆ ಶಿಫಾರಸು ಪತ್ರಗಳನ್ನು ನೀಡಿದ್ದಾರೆ. ಉಳಿದವರು ರೂ. 5 ಲಕ್ಷಕ್ಕಿಂತ ಕಡಿಮೆಗೆ ಒಪ್ಪಲಿಲ್ಲ. ಒಂದು ಪ್ರಕರಣದಲ್ಲಂತೂ ಒಬ್ಬ ಸಂಸದ ಒಂದು ಶಿಫಾರಸು ಪತ್ರಕ್ಕೆ ರೂ. 50ಲಕ್ಷ ಕೇಳಿದ್ದರೆಂದು ಕೋಬ್ರಾ ಪೋಸ್ಟ್ ಆರೋಪಿಸಿದೆ.

ಆದರೆ, ಈ ಹನ್ನೊಂದು ಸಂಸದರಲ್ಲಿ ಯಾರೂ ಈ ಸಂಸ್ಥೆಯ ಪೂರ್ವೇತಿಹಾಸ ಅಥವಾ ನೈಜವನ್ನು ಪರೀಕ್ಷಿಸುವ ಗೋಜಿಗೇ ಹೋಗಿಲ್ಲ ಎಂದುತಿಳಿದು ಬಂದಿದೆ. ಆಸ್ಟ್ರೇಲಿಯಾದ ಮೆಡಿಟೇರಿಯನ್ ಆಯಿಲ್ ಕಂಪನಿ ಅಸ್ತಿತ್ವದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ.

ಸಂಸದರು ಕೇವಲ ಹಣದ ಹಿಂದಿ ಬಿದ್ದಿದ್ದರು. ಒಂದು ಶಿಫಾರಸು ಪತ್ರಕ್ಕೆ ರೂ. 5 ಸಾವಿರದಿಂದ 5 ಲಕ್ಷದ ವರೆಗಿನ ಭಾರಿ ಮೊತ್ತವನ್ನು ನಗದಾಗಿ ನೀಡುವಂತೆ ತಿಳಿಸಿದ್ದರು. ಒಬ್ಬ ಸಂಸದನಂತೂ ತನ್ನ ಶುಲ್ಕವನ್ನು ಹವಾಲಾ ಏಜೆಂಟನೊಬ್ಬನ ಮೂಲಕ ಪಾವತಿಸಬೇಕೆಂಬ ಬೇಡಿಕೆಯಿಟ್ಟಿದ್ದರು. 6 ಸಂಸದರು ಕೋಬ್ರಾ ಪೋಸ್ಟ್‌ಗೆ ಶಿಫಾರಸು ಪತ್ರಗಳನ್ನು ನೀಡಿದ್ದರೆಂದು ಜಾಲತಾಣ ಆರೋಪಿಸಿದೆ.

ಶಿಫಾರಸು ಪತ್ರ ನೀಡುವುದು ಮಾತ್ರವಲ್ಲದೆ ಈ ಸಂಸ್ಥೆಯ ಪರವಾಗಿ ತೈಲ ಸಚಿವಾಲಯದೊಂದಿಗೆ ಲಾಬಿ ನಡೆಸಲೂ ಮುಂದಾಗಿದ್ದರು. ಇದಕ್ಕಾಗಿ ಐವರು ಸಂಸದರ ತಂಡವೊಂದರಲ್ಲಿ ಸೇರುವುದಕ್ಕೂ ಕೆಲವರು ಸಿದ್ಧರಿದ್ದರು ಎಂದು ಕೋಬ್ರಾ ಪೋಸ್ಟ್ ಸಂಪಾದಕ ಅನಿರುದ್ಧ ಬಹಾಲ್ ಹೇಳಿದ್ದಾರೆ.

English summary
According to the online website Cobrapost, a sting operation on ministers across the political spectrum resulted in embarrassing results. All of them were willing to write recommendations for a fictitious foreign company for a bribe ranging from Rs 50,000 to Rs 50 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X