ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ದರ ಇಳಿಕೆಗೆ ಮೋದಿ ಮಾಸ್ಟರ್ ಪ್ಲಾನ್

ಸದ್ಯದ ವಿದ್ಯುತ್ ದರದಲ್ಲಿ ಕಲ್ಲಿದ್ದಲಿಗೇ ಸುಮಾರು ಶೇಕಡಾ 54ರಿಂದ 60ರಷ್ಟು ಖರ್ಚಾಗುತ್ತದೆ. ಒಂದೊಮ್ಮೆ ಕಲ್ಲಿದ್ದಲು ಸುಧಾರಣೆ ಕೈಗೊಂಡಿದ್ದೇ ಆದಲ್ಲಿ ಯೂನಿಟ್ ವಿದ್ಯುತ್ ದರದಲ್ಲಿ ದೊಡ್ಡ ಮಟ್ಟಕ್ಕೆ ಇಳಿಕೆಯಾಗಲಿದೆ.

By Sachhidananda Acharya
|
Google Oneindia Kannada News

ನವದೆಹಲಿ, ಏಪ್ರಿಲ್ 17: ವಿದ್ಯುತ್ ದರ ಇಳಿಕೆ ಮಾಡಲು ಕಲ್ಲಿದ್ದಲು ವಲಯದ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿದೆ.

ಕಲ್ಲಿದ್ದಲು ಗುಣಮಟ್ಟ ಹೆಚ್ಚಿಸುವುದು ಮತ್ತು ಕಲ್ಲಿದ್ದಲು ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಮೋದಿ ಸರಕಾರದ ಉದ್ದೇಶವಾಗಿದೆ. ಜತೆಗೆ ಈ ಹಿಂದೆಯೇ ಕೇಂದ್ರ ಸೆಸ್, ರೈಲ್ವೇ ಸರಕು ಸಾಗಣೆ ದರಗಳಲ್ಲಿ ಇಳಿಕೆ ಮಾಡಿರುವುದರಿಂದ ಪ್ರತಿ ಯೂನಿಟ್ ವಿದ್ಯುತ್ ಬೆಲೆಯಲ್ಲಿ ಇಳಿಕೆ ಮಾಡುವ ಯೋಜನೆಯಲ್ಲಿ ಹಾಕಿಕೊಳ್ಳಲಾಗಿದೆ.[ಗಾಳಿಸುದ್ದಿ : 2018ರ ಚುನಾವಣೆಯಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ!]

Coal sector reforms, Modi’s plan to brought down the cost of power

ಇದೆಲ್ಲದರ ಜತೆಗೆ ವಿದೇಶದಿಂದ ಸುಮಾರು 23,349 ಕೋಟಿ ಮೊತ್ತದ ಕಲ್ಲಿದ್ದಲು ಆಮದಿಗೂ ಚಿಂತನೆ ನಡೆದಿದ್ದು ಒಟ್ಟಾರೆ ವಿದ್ಯುತ್ ದರ ಇಳಿಕೆಯ ಮಾಸ್ಟರ್ ಪ್ಲಾನ್ ಸಿದ್ದಪಡಿಸಲಾಗಿದೆ.

ಗರಿಷ್ಠ ಗುಣಮಟ್ಟದ ಕನಿಷ್ಠ ಕಲ್ಲಿದ್ದಲು ಉರಿಸಿ ಗರಿಷ್ಠ ವಿದ್ಯುತ್ ಉತ್ಪಾದನೆಯ ಮಂತ್ರವನ್ನು ಜಪಿಸಲಾಗುತ್ತಿದೆ. ಇದರಿಂದ ಪೂರೈಕೆಯಲ್ಲೂ ಹಣ ಉಳಿತಾಯವಾಗುತ್ತದೆ. ವಿದ್ಯುತ್ ಉತ್ಪಾದನೆಯೂ ಹೆಚ್ಚಾಗುತ್ತದೆ. ಹೀಗಾದಾಗ ವಿದ್ಯುತ್ ದರ ಇಳಿಕೆಯಾಗಬಹುದು ಎಂದುಕೊಳ್ಳಲಾಗಿದೆ.[ಕಾರು ನಿಲ್ಲಿಸಿ ಬಾಲಕಿಯನ್ನು ಮಾತನಾಡಿಸಿದ ಪ್ರಧಾನಿ ಮೋದಿ]

ಸದ್ಯದ ವಿದ್ಯುತ್ ದರದಲ್ಲಿ ಕಲ್ಲಿದ್ದಲಿಗೇ ಸುಮಾರು ಶೇಕಡಾ 54ರಿಂದ 60ರಷ್ಟು ಖರ್ಚಾಗುತ್ತದೆ. ಇನ್ನುಳಿದ ಹಣ ವಿದ್ಯುತ್ ಪೂರೈಕೆಗೆ ವ್ಯಯವಾಗುತ್ತದೆ. ಒಂದೊಮ್ಮೆ ಕಲ್ಲಿದ್ದಲು ಸುಧಾರಣೆ ಕೈಗೊಂಡಿದ್ದೇ ಆದಲ್ಲಿ ಯೂನಿಟ್ ವಿದ್ಯುತ್ ದರದಲ್ಲಿ ದೊಡ್ಡ ಮಟ್ಟಕ್ಕೆ ಇಳಿಕೆಯಾಗಲಿದೆ.

ಈಗಾಗಲೇ ಇರುವ ಉಷ್ಣ ವಿದ್ಯುತ್ ಸ್ಥಾವರಗಳು ಕಳೆದ ಮೂರು ವರ್ಷದ ಹಿಂದೆ ಬಳಸಿದ್ದಕ್ಕಿಂತ ಶೇಕಡಾ 8ರಷ್ಟು ಕಡಿಮೆ ಕಲ್ಲಿದ್ದಲನ್ನು ಇಂದು ವಿದ್ಯುತ್ ಉತ್ಪಾದನೆಗೆ ಬಳಸುತ್ತಿವೆ. ಇದರಿಂದ ವಿದ್ಯುತ್ ದರದಲ್ಲಿ ಯೂನಿಟ್ ಗೆ ಅಂದಾಜು 39 ಪೈಸೆ ಉಳಿಸಲಾಗುತ್ತಿದೆ. ಇದನ್ನು ಇನ್ನಷ್ಟು ಕಡಿತಗೊಳಿಸಬೇಕಾಗಿದೆ. ಇದರಿಂದ ದೇಶದ ಜನಕ್ಕೆ ಸಾವಿರಾರು ಕೋಟಿ ಉಳಿತಾಯವಾಗಲಿದೆ.

ಸದ್ಯ ಇದೆಲ್ಲಾ ಯೋಜನೆ ಹಂತದಲ್ಲಿದೆ. ಇದನ್ನು ಮೋದಿ ಸರಕಾರ ಜಾರಿಗೆ ತಂದಾಗ ಮಾತ್ರ ವಿದ್ಯುತ್ ಬೆಲೆ ಇಳಿಕೆಯಾಗಲಿದೆ.

English summary
Narendra Modi government want to reform coal sector to improve coal quality and efficiency in the supply chain. Which will brought down the cost of power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X