ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಕೋಟಿ ಕಲ್ಲಿದ್ದಲು ಹಗರಣ: ಜಾರ್ಖಂಡ್ ಮಾಜಿ ಸಿಎಂ ಮಧು ದೋಷಿ

By Mahesh
|
Google Oneindia Kannada News

ನವದೆಹಲಿ, ಡಿಸೆಂಬರ್ 13: ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಹಾಗೂ ಏಳು ಮಂದಿ ಅಪರಾಧಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ಆದೇಶ ನೀಡಿದೆ. ಎಲ್ಲಾ ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ಗುರುವಾರದಂದು ಘೋಷಿಸಲಾಗುತ್ತದೆ.

ಜಾರ್ಖಂಡ್ ನಲ್ಲಿ ರಾಜಕೀಯ ವಿವಾದ ಧೂಳೆಬ್ಬಿಸಿದ 'ಚುಂಬನ ಸ್ಪರ್ಧೆ'ಜಾರ್ಖಂಡ್ ನಲ್ಲಿ ರಾಜಕೀಯ ವಿವಾದ ಧೂಳೆಬ್ಬಿಸಿದ 'ಚುಂಬನ ಸ್ಪರ್ಧೆ'

ಮಧು ಕೋಡಾ, ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತಾ, ಜಾರ್ಖಂಡ್ ಮಾಜಿ ಮುಖ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಬಸು ಅವರ ಮೇಲೆ ಕ್ರಿಮಿನಲ್ ಸಂಚು, ವಂಚನೆ, ಭ್ರಷ್ಟಾಚಾರದ ಆರೋಪ ಹೊರೆಸಲಾಗಿತ್ತು. ಐಪಿಸಿ ಸೆಕ್ಷನ್ 120 ಬಿ, 420, 409 ಅನ್ವಯ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ದಾಖಲಾದ ಆರೋಪಗಳು ಸಾಬೀತಾಗಿವೆ.

Coal Scam : Former Jharkhand CM Madhu Koda convicted says CBI cout

ಭ್ರಷ್ಟಾಚಾರ ಸಂಬಂಧಿಸಿದಂತೆ ಮಧು ಕೋಡಾ ಹಾಗೂ ಅವರ ಸಂಪುಟದಲ್ಲಿದ್ದ 6 ಮಾಜಿ ಸಚಿವರು ಮತ್ತು ಇಬ್ಬರು ಆಪ್ತರಾದ ಮನೋಜ್ ಪುನಾಮಿಯಾ ಮತ್ತು ಅರವಿಂದ್ ವ್ಯಾಸ್ ಅವರ ಮೇಲೆ ಸಿಬಿಐ ಪ್ರತ್ಯೇಕ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಂಡಿತ್ತು.


ಜಾರಿ ನಿರ್ದೇಶನಾಲಯ ಕೂಡಾ ನ್ಯಾಯಾಲಯಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು.

ಬಹುಕೋಟಿ ಕಲ್ಲಿದ್ದಲು ಹಗರಣ

ಬಹುಕೋಟಿ ಕಲ್ಲಿದ್ದಲು ಹಗರಣ

ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಹಾಗೂ ಏಳು ಮಂದಿ ಅಪರಾಧಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ಆದೇಶ ನೀಡಿದೆ.

ಜಾರ್ಖಂಡ್ ನ ರಾಜ್ ಹಾರ ನಾರ್ತ್ ಕಲ್ಲಿದ್ದಲು ಬ್ಲಾಕ್ ಗಳನ್ನು ಕೋಲ್ಕತಾ ಮೂಲದ ವಿನಿ ಐರನ್ ಅಂಡ್ ಸ್ಟೀಲ್ ಉದ್ಯೋಗ್ ಲಿಮಿಟೆಡ್(VISUL) ಗೆ ಹಂಚಿಕೆ ಮಾಡುವಲ್ಲಿ ಅವ್ಯವಹಾರ ನಡೆದಿದೆ ಎಂಬ ಪ್ರಕರಣದ ಅಂತಿಮ ತೀರ್ಪು ಇದಾಗಿದೆ. ಗುರುವಾರದಂದು ಎಲ್ಲಾ ಅಪರಾಧಿಗಳ ಶಿಕ್ಷೆ ಪ್ರಮಾಣ ತಿಳಿದು ಬರಲಿದೆ.

ಜಾರಿ ನಿರ್ದೇಶನಾಲಯದ ಪ್ರಕಾರ

ಜಾರಿ ನಿರ್ದೇಶನಾಲಯದ ಪ್ರಕಾರ

ಜಾರಿ ನಿರ್ದೇಶನಾಲಯದ ಪ್ರಕಾರ ಸುಮಾರು 2500 ಕೋಟಿ ರು ಅವ್ಯವಹಾರ ಆರೋಪ ಹೊರೆಸಲಾಗಿತ್ತು. ನಂತರ 3400 ಕೋಟಿ ಅಕ್ರಮ ಬಯಲಿಗೆಳೆಯಲಾಗಿತ್ತು. ಸಿಬಿಐ ತಂಡ ದೇಶದಾದ್ಯಂತ ಸುಮಾರು 70 ಕಡೆಗಳಲ್ಲಿ ದಾಳಿ ನಡೆಸಿದ್ದರು. ಮಧುಕೋಡಾ ಅವರ ಸ್ಥಿರ ಹಾಗೂ ಚರಾಸ್ಥಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿತ್ತು.

ಆಕಸ್ಮಿಕವಾಗಿ ಸಿಎಂ ಆಗಿದ್ದ ಮಧು ಕೋಡಾ

ಆಕಸ್ಮಿಕವಾಗಿ ಸಿಎಂ ಆಗಿದ್ದ ಮಧು ಕೋಡಾ

ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿ 23 ತಿಂಗಳು ಅಧಿಕಾರದಲ್ಲಿದ್ದ ಮಧು ಕೋಡಾ, ಈ ಅವಧಿಯಲ್ಲಿ ಸುಮಾರು 5,500 ಕೋಟಿ ರುಪಾಯಿಗಳ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪವಿದೆ. ಮಧುಕೋಡಾ ಅವರು ಜಾರ್ಖಂಡ್ ನವನಿರ್ಮಾಣ ಮೋರ್ಚಾ ಎಂಬ ನೂತನ ಪಕ್ಷವನ್ನು ಹುಟ್ಟು ಹಾಕಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣ

ಅಕ್ರಮ ಹಣ ವರ್ಗಾವಣೆ ಪ್ರಕರಣ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧು ಕೋಡಾ ಅವರ ಆಪ್ತ ಅನಿಲ್‌ ಬಸ್ತವಾಡೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಿಂದ ಭಾರತಕ್ಕೆ ಕರೆ ತಂದಿದ್ದರು. ಮಧು ಕೋಡಾ ಅವರು ಅಕ್ರಮವಾಗಿ ಸಂಗ್ರಹಿಸಿದ ಸಂಪತ್ತನ್ನು ವಿದೇಶಕ್ಕೆ ಸಾಗಿಸುವಲ್ಲಿ ಅನಿಲ್‌ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

English summary
Special CBI court today(Dec 13) convicted former Jharkhand CM Madhu Koda, ex-coal secretary H.C. Gupta & 7 others in connection with a coal block allocation case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X