ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಕಲ್ಲಿದ್ದಲು ಕೊರತೆ: ಥರ್ಮಲ್ ಘಟಕಗಳು ಸ್ತಬ್ಧ ಸಾಧ್ಯತೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 26: ದೇಶಾದ್ಯಂತ ಕಲ್ಲಿದ್ದಲು ಕೊರತೆ ಉಂಟಾಗಿದೆ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಮಾಡಲು ನಿರ್ಧರಿಸಲಾಗಿತ್ತು ಆದರೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನಿರ್ದೇಶನದ ಮೇರೆಗೆ ಅಲ್ಲಿಗೆ ಕಾರ್ಯ ಕೈಬಿಡಲಾಗಿದೆ. ಆದರೆ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಂದ ಏನೆಲ್ಲಾ ಸಮಸ್ಯೆ ಉದ್ಭವವಾಗುತ್ತಿದೆ ಎನ್ನವುದನ್ನು ಗಮನಿಸೋಣ.

ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಬಾಧಿಸುತ್ತಿರುವ ಕಲ್ಲಿದ್ದಲು ಕೊರತೆ, ಕೇವಲ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ, ದೇಶದ ಬಹುತೇಕ ಕಲ್ಲಿದ್ದಲು ಆಧಾರಿತ ಕೇಂದ್ರಗಳಿಗೆ ಕಲ್ಲಿದ್ದಲು ಒದಗಿಸುವಿಕೆಯಲ್ಲಿ ನಿಧಾನವಾಗುತ್ತಿದೆ.

ರಾಯಚೂರು : ಕಲ್ಲಿದ್ದಲು ಕೊರತೆ, ವಿದ್ಯುತ್ ಉತ್ಪಾದನೆ ಸ್ಥಗಿತ? ರಾಯಚೂರು : ಕಲ್ಲಿದ್ದಲು ಕೊರತೆ, ವಿದ್ಯುತ್ ಉತ್ಪಾದನೆ ಸ್ಥಗಿತ?

ಕಲ್ಲಿದ್ದಲು ಗಣಿ ಕಂಪನಿಗಳ ಬಳಿಯಿರುವ ವಿದ್ಯುತ್ ಕೇಂದ್ರ ಹೊರತುಪಡಿಸಿ, ಬಹುತೇಕ ಕಡೆ ಕಲ್ಲಿದ್ದಲು ಕೊರತೆ ಉಂಟಾಗಿದೆ. ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ಕಲ್ಲಿದ್ದಲು ಗಣಿಗಳ ಹಂಚಿಕೆಯಲ್ಲಿ ವಿಳಂಬ ಮಾಡುತ್ತಿರುವುದು ಸೇರಿ ಗಣಿಗಾರಿಕೆಗೆ ಎದುರಾಗಿರುವ ಅನೇಕ ಸಂಕಷ್ಟಗಳ ಪರಿಣಾಮ ಕಲ್ಲಿದ್ದಲು ಆಧಾರಿತ ವಿದ್ಯುತ್ ಕೇಂದ್ರಗಳಿಗೆ ಪೆಟ್ಟು ಬಿದ್ದಿದೆ.

22 ವಿದ್ಯುತ್ ಕೇಂದ್ರಗಳು ಸಂಕಷ್ಟದಲ್ಲಿವೆ

22 ವಿದ್ಯುತ್ ಕೇಂದ್ರಗಳು ಸಂಕಷ್ಟದಲ್ಲಿವೆ

ದೇಶದಲ್ಲಿರುವ 7ಕ್ಕಿಂತ ಕಡಿಮೆ ಅವಧಿಗೆ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹ 9 ಕೇಂದ್ರಗಳಲ್ಲಿದೆ. ಅದೇ ರೀತಿ ದೇಶದ 22 ಶಾಖೋತ್ಪನ್ನ ಕೇಂದ್ರಗಳಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಅದರಲ್ಲಿ ರಾಜ್ಯದ ಶಕ್ತಿನಗರ ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಸೇರಿವೆ.

ಜಲವಿದ್ಯುತ್ ಘಟಕಗಳ ಪರಿಸ್ಥಿತಿ ಹೇಗಿದೆ

ಜಲವಿದ್ಯುತ್ ಘಟಕಗಳ ಪರಿಸ್ಥಿತಿ ಹೇಗಿದೆ

ಮಳೆಗಾಲದಲ್ಲ ವಿದ್ಯುತ್ ಬೇಡಿಕೆ ಭರಾಟೆಗೆ ಬೆಚ್ಚಿರುವ ಸರ್ಕಾರ ಅನಿವಾರ್ಯವಾಗಿ ಜಲವಿದ್ಯುತ್ ಬಳಕೆಗೆ ಒತ್ತು ನೀಡಿದೆ. ರಾಜ್ಯದಲ್ಲಿ ಕಳೆದೆರೆಡು ದಿನಗಳಲ್ಲಿ ಪ್ರಮುಖ ಜಲವಿದ್ಯುತ್ ಕೇಂದ್ರಗಳಾದ ಶರಾವತಿ, ವರಾಹಿ, ಸೂಪಾ, ಶಿವನಸಮುದ್ರ ಸೇರಿ ಅನೇಕ ಜಲವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಿಸಲಾಗಿದೆ.

ಅಕ್ಟೋಬರ್‌ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು? ಅಕ್ಟೋಬರ್‌ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು?

 ಘಟಕಗಳಲ್ಲಿ 20 ದಿನಗಳಿಗಾಗುವಷ್ಟು ಕಲ್ಲಿದ್ದಲು ಮಾತ್ರ ಇದೆ

ಘಟಕಗಳಲ್ಲಿ 20 ದಿನಗಳಿಗಾಗುವಷ್ಟು ಕಲ್ಲಿದ್ದಲು ಮಾತ್ರ ಇದೆ

ಕಲ್ಲಿದ್ದಲು ಗಣಿ ಇರುವ ಪ್ರದೇಶದ ತೀರಾ ಹತ್ತಿರವಿರುವ ಕೆಲವೇ ಕೆಲವು ಶಾಖೋತ್ಪನ್ನ ಘಟಕಗಳಲ್ಲಿ ಮಾತ್ರ ಸರಾಸರಿ 20ರಿಂದ 40 ದಿನಕ್ಕೆ ಆಗುವಷ್ಟು ಕಲ್ಲಿದ್ದಲು ಸಂಗ್ರಹವಿದೆ. ಇನ್ನುಳಿದಂತೆ ದೂರದ ಪ್ರದೇಶಗಳಲ್ಲಿರುವ ಕೇಂದ್ರಗಳಲ್ಲಿ ಒಂದು ವಾರಕ್ಕಾಗುವಷ್ಟು ಕಲ್ಲಿದ್ದಲೂ ಕೂಡ ಇಲ್ಲ.

ಕಲ್ಲಿದ್ದಲು ಕೊರತೆ, ಕತ್ತಲೆ ರಾತ್ರಿಗಳನ್ನು ಕಳೆಯಲು ತಯಾರಾಗಿಕಲ್ಲಿದ್ದಲು ಕೊರತೆ, ಕತ್ತಲೆ ರಾತ್ರಿಗಳನ್ನು ಕಳೆಯಲು ತಯಾರಾಗಿ

ದೇಶದಲ್ಲಿ 112 ಕೇಂದ್ರದಲ್ಲಿ ಕಲ್ಲಿದ್ದಲು ಸಂಗ್ರಹ ತಳಕಚ್ಚಿದೆ

ದೇಶದಲ್ಲಿ 112 ಕೇಂದ್ರದಲ್ಲಿ ಕಲ್ಲಿದ್ದಲು ಸಂಗ್ರಹ ತಳಕಚ್ಚಿದೆ

ದೇಶದಲ್ಲಿ 112 ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಕೇಂದ್ರಗಳಲ್ಲಿ ಬಹುತೇಕ ಕಡೆ ಕಲ್ಲಿದ್ದಲು ಸಂಗ್ರಹ ನೆಲಕಚ್ಚಿದೆ ಕೇಂದ್ರ ಸರ್ಕಾರದ ವಿದ್ಯುತ್ ಪ್ರಾಧಿಕಾರದ ಮೂಲಗಳಿಂದ ತಿಳಿದುಬಂದಿದೆ. ದಿನದ ಬೇಡಿಕೆ 9 ಸಾವಿರ ಮೆಗಾ ವ್ಯಾಟ್ ದಾಟಿದೆ.

ಕಲ್ಲಿದ್ದಲು ಕೊರತೆ: ಕೇಂದ್ರ ಸಚಿವರಿಗೆ ಕುಮಾರಸ್ವಾಮಿ ಟ್ವೀಟ್‌ ಮನವಿಕಲ್ಲಿದ್ದಲು ಕೊರತೆ: ಕೇಂದ್ರ ಸಚಿವರಿಗೆ ಕುಮಾರಸ್ವಾಮಿ ಟ್ವೀಟ್‌ ಮನವಿ

English summary
Coal shortage has created crisis in thermal power stations (TPS) across the country as more than 22 TPS are running almost out of stock.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X