ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಮದುವೆ ಸಮಾರಂಭದಲ್ಲಿ ಕಾಲುಜಾರಿ ಬಿದ್ದ ಮಧ್ಯಪ್ರದೇಶ ಸಿಎಂ

|
Google Oneindia Kannada News

ಉಧಮ್‌ಸಿಂಗ್ ನಗರ, ಏಪ್ರಿಲ್ 19: ಮದುವೆ ಸಮಾರಂಭವೊಂದರಲ್ಲಿ ಮಧ್ಯಪ್ರದೇಶದ ಸಿಎಂ ಕಾಲುಜಾರಿ ಕೆಳಗೆಬಿದ್ದ ಘಟನೆ ಮುಜುಗರಕ್ಕೀಡು ಮಾಡಿದೆ. ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉತ್ತರಾಖಂಡದ ಕಾಶಿಪುರಕ್ಕೆ ನಿನ್ನೆ ತೆರಳಿದ್ದರು. ಈ ವೇಳೆ ಕಾರ್ಯಕ್ರಮದಿಂದ ನಿರ್ಗಮಿಸುವಾಗ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಏಕಾಏಕಿ ಕಾಲುಜಾರಿ ಮೆಟ್ಟಿಲುಗಳ ಮೇಲೆ ಬಿದ್ದಿದ್ದಾರೆ. ತಕ್ಷಣಕ್ಕೆ ಅವರ ಜೊತೆಗಿದ್ದ ಭದ್ರತಾ ಸಿಬ್ಬಂದಿಗಳು ಅವರನ್ನು ಮೇಲೆತ್ತುವ ಮೂಲಕ ಅವರನ್ನು ರಕ್ಷಿಸಿದ್ದಾರೆ.

Viral Video: ಹನುಮಂತನಂತೆ ಬಾಲಕನಿಗೆ ಇದೆ ಬಾಲViral Video: ಹನುಮಂತನಂತೆ ಬಾಲಕನಿಗೆ ಇದೆ ಬಾಲ

ಬಿಜೆಪಿಯ ರಾಷ್ಟ್ರೀಯ ಸಹ-ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಅವರ ಸೋದರಳಿಯನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಸೋಮವಾರ (ಏಪ್ರಿಲ್ 18) ಉತ್ತರಾಖಂಡಕ್ಕೆ ತೆರಳಿದ್ದರು. ಈ ಕಾರ್ಯಕ್ರಮವನ್ನು ಉಧಮ್ ಸಿಂಗ್ ನಗರದ ಕಾಶಿಪುರದಲ್ಲಿರುವ ಹೋಟೆಲ್‌ನಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಲು ದೇಶದ ಹಲವು ರಾಜ್ಯಗಳಿಂದ ಬಿಜೆಪಿ ಮುಖ್ಯಮಂತ್ರಿಗಳು, ದೊಡ್ಡ ದೊಡ್ಡ ನಾಯಕರು ಆಗಮಿಸಿದ್ದರು.

ಮದುವೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಔತಣಕೂಟಕ್ಕೆ ತೆರಳುತ್ತಿದ್ದಾಗ ಆಯ ತಪ್ಪಿ ಏಕಾಏಕಿ ಮೆಟ್ಟಿಲುಗಳ ಮೇಲೆ ಜಾರಿ ಬಿದ್ದರು. ಇದು ಅವರ ಜೊತೆಗಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಭದ್ರತಾ ಸಿಬ್ಬಂದಿಯಲ್ಲಿ ಕೋಲಾಹಲ ಉಂಟು ಮಾಡಿತ್ತು. ಆದರೆ ತಕ್ಷಣವೇ ಅವರನ್ನು ಭದ್ರತಾ ಸಿಬ್ಬಂದಿ ಮೇಲೆತ್ತಿದರು. ಅದೃಷ್ಟವಶಾತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ.

CM Shivraj Chauhan slipped on the stairs during a wedding ceremony

ಬಿಜೆಪಿಯ ರಾಷ್ಟ್ರೀಯ ನಾಯಕ ಶಿವಪ್ರಕಾಶ್ ಅವರ ಸೋದರಳಿಯ ವಿವಾಹ ಕಾರ್ಯಕ್ರಮದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಶಾಸಕರು ಸೇರಿದಂತೆ ದೇಶದ ಹಲವು ರಾಜಕೀಯ ಮುಖಂಡರು, ಗಣ್ಯರು ಮದುವೆ ಸಮಾರಂಭಕ್ಕೆ ಹಾಜರಿದ್ದರು.

English summary
Madhya Pradesh CM falls on foot during a wedding ceremony. This video goes virel in social media. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X