• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking: ಎನ್ ಬಿರೇನ್ ಸಿಂಗ್ ಮತ್ತೊಮ್ಮೆ ಮಣಿಪುರದ ಸಿಎಂ ಆಗಿ ಆಯ್ಕೆ

|
Google Oneindia Kannada News

ಇಂಫಾಲ, ಮಾರ್ಚ್ 20: ಇಂಫಾಲದಲ್ಲಿ ನಡೆದ ಮಣಿಪುರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಣಿಪುರದ ಹಂಗಾಮಿ ಸಿಎಂ ಎನ್ ಬಿರೇನ್ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

''ಎಲ್ಲರೂ ಒಮ್ಮತದಿಂದ ತೆಗೆದುಕೊಂಡ ನಿರ್ಧಾರ ಇದು. ಇದು ಮಣಿಪುರದಲ್ಲಿ ಸ್ಥಿರ ಮತ್ತು ಜವಾಬ್ದಾರಿಯುತ ಸರ್ಕಾರವನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ ಏಕೆಂದರೆ ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರವು ಈಶಾನ್ಯ ರಾಜ್ಯಗಳಿಗೆ ವಿಶೇಷ ಗಮನವನ್ನು ನೀಡುತ್ತದೆ,'' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದರು.

ಬಿಜೆಪಿಯ ಹಿರಿಯ ನಾಯಕ ತೊಂಗಂ ಬಿಸ್ವಜಿತ್ ಸಿಂಗ್ ಹೆಸರು ಕೇಳಿ ಬಂದಿತು. ಈಗ ಹಾಲಿ ಸ್ಪೀಕರ್ ಯುಮ್ನಮ್ ಖೇಮ್‌ಚಂದ್ ಸಿಂಗ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಅಂತಿಮವಾಗಿ ಎನ್ ಬಿರೇನ್ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಯನ್ನು ವೀಕ್ಷಕರಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕಾನೂನು ಸಚಿವ ಕಿರಣ್ ರಿಜಿಜು ಅವರು ಪ್ರಕಟಿಸಿದರು.

ಪ್ರಸ್ತುತ ಮಣಿಪುರ ಸರ್ಕಾರದ ಅವಧಿಯು ಮಾರ್ಚ್ 20, 2017 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 19, 2022 ರಂದು ಕೊನೆಗೊಳ್ಳಲಿದೆ.

2022ರ ವಿಧಾನಸಭೆ ಫಲಿತಾಂಶ 60 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನ, ಜನತಾ ದಳ (ಯುನೈಟೆಡ್) 6, ಕಾಂಗ್ರೆಸ್ 5, ಎನ್ ಪಿ ಪಿ 7, ಎನ್ ಪಿಎಫ್ 5, ಕುಕಿ ಪೀಪಲ್ಸ್ ಮೈತ್ರಿಕೂಟ 2 ಸ್ಥಾನ ಗೆದ್ದುಕೊಂಡಿವೆ. ಬಿಜೆಪಿ ಶೇ 37.83, ಕಾಂಗ್ರೆಸ್ 16.83%, ಜೆಡಿಯು 10.77%, ಎನ್ ಪಿ ಇ ಪಿ 17.29%, ಎನ್ ಪಿ ಎಫ್ 8.09 %, ಇತರೆ 7.53 % ಬಂದಿದೆ.

ಈ ನಡುವೆ ಮಣಿಪುರದಲ್ಲಿ ಶೇ 10.77ರಷ್ಟು ಮತ ಗಳಿಕೆ ಮೂಲಕ 6 ಸ್ಥಾನ ಗೆದ್ದಿರುವ ಜನತಾ ದಳ(ಸಂಯುಕ್ತ) ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಈಗಾಗಲೇ ಎನ್ ಪಿ ಎಫ್ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಿರೇನ್ ಸಿಂಗ್, ಮುಂದಿನ ಸರ್ಕಾರದಲ್ಲಿ ಎನ್‌ಪಿಪಿ ನಮ್ಮೊಂದಿಗೆ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ. ಈ ಮೂಲಕ ಜೆಡಿಯು ಶಾಸಕರಿಗೆ ಸಚಿವರಾಗುವ ಅವಕಾಶ ಲಭ್ಯವಾಗಲಿವೆ. ಎನ್‌ಪಿಎಫ್‌ ಹಾಗೂ ಎನ್‌ಪಿಪಿ ಎರಡೂ ಪಕ್ಷಗಳು ಬಿಜೆಪಿ ನೇತೃತ್ವದ ಪ್ರಸ್ತುತ ಆಡಳಿತ ಮೈತ್ರಿಕೂಟದ ಭಾಗವಾಗಿದೆ. ಆದಾಗ್ಯೂ, ಎರಡೂ ಪಕ್ಷಗಳು ಬಿಜೆಪಿಯೊಂದಿಗೆ ಯಾವುದೇ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಎಲ್ಲಾ 60 ಸ್ಥಾನಗಳಲ್ಲಿ ಏಕಾಂಗಿಯಾಗಲು ಸ್ಪರ್ಧಿಸಿತ್ತು.

English summary
Manipur's acting CM N Biren Singh unanimously elected as the Chief Minister of the State in the Manipur BJP legislature party meeting, in Imphal today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X