ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂನಲ್ಲಿ #ಪ್ಲಾಸ್ಟಿಕ್_ತ್ರಿವರ್ಣಧ್ವಜ_ಬೇಡ ಅಭಿಯಾನಕ್ಕೆ ಸೆಲೆಬ್ರಿಟಿಗಳ ಸಾಥ್

|
Google Oneindia Kannada News

ನವದೆಹಲಿ, ಆಗಸ್ಟ್ 14: 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ Koo (ಕೂ) ಅಪ್ಲಿಕೇಶನ್, ಭಾರತದ ಪ್ರಮುಖ ಸಾಮಾಜಿಕ ಮಾಧ್ಯಮ ಮೈಕ್ರೋ ಬ್ಲಾಗಿಂಗ್ ವೇದಿಕೆ ನಮ್ಮ, ಮಿಟ್ಟಿ ಫೌಂಡೇಶನ್ ಸಹಯೋಗದೊಂದಿಗೆ #ಪ್ಲಾಸ್ಟಿಕ್_ತ್ರಿವರ್ಣಧ್ವಜ_ಬೇಡ ಅಭಿಯಾನವನ್ನು ಘೋಷಿಸಿದೆ. ಈ ನಡೆ ದೇಶದ ನಾಗರಿಕರನ್ನು ಸ್ವಚ್ಛ, ಪರಿಸರ ಸ್ನೇಹಿ ಪರಿಸರಕ್ಕಾಗಿ ಕೆಲಸ ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ಬಳಸುವುದನ್ನು ಮತ್ತು ತ್ರಿವರ್ಣಕ್ಕೆ ಅಗೌರವವನ್ನು ತೋರಿಸುವುದನ್ನು ತಡೆಯುವಂತೆ ಪ್ರೇರೇಪಿಸುತ್ತದೆ.

ಪ್ಲಾಸ್ಟಿಕ್ ತ್ರಿವರ್ಣದ ಮೇಲೆ Koo (ಕೂ) ಆ್ಯಪ್‌ನಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ದೇಶಾದ್ಯಂತ ಪ್ರಭಲ ಬೆಂಬಲ ವ್ಯಕ್ತವಾಗಿದೆ. ಹಲವು ಮುಖ್ಯಮಂತ್ರಿಗಳು, ಕ್ಯಾಬಿನೆಟ್ ಮಂತ್ರಿಗಳು, ಹಿರಿಯ ನಾಯಕರು, ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು Koo (ಕೂ) ಆ್ಯಪ್‌ನಲ್ಲಿ ಪ್ಲಾಸ್ಟಿಕ್ ತ್ರಿವರ್ಣವನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು, ಬಟ್ಟೆ ಮತ್ತು ಪೇಪರ್ ತ್ರಿವರ್ಣವನ್ನು ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. Koo (ಕೂ) ಆ್ಯಪ್‌ನ ಅಭಿಯಾನವು ಎಷ್ಟು ಪ್ರಭಾವ ಬೀರಿತು ಎಂದರೆ #ಪ್ಲಾಸ್ಟಿಕ್_ತ್ರಿವರ್ಣಧ್ವಜ_ಬೇಡ ಮತ್ತು #ನಾನುಕೂನಲ್ಲಿಪ್ರತಿಜ್ಞೆಮಾಡುತ್ತೇನೆ ಹ್ಯಾಶ್‌ಟ್ಯಾಗ್‌ಗಳು ದಿನವಿಡೀ ಸ್ಥಳೀಯ ಮೈಕ್ರೋಬ್ಲಾಗಿಂಗ್ ತಾಣವಾದ Koo(ಕೂ) ನಲ್ಲಿ ಟ್ರೆಂಡ್ ಆಗಿವೆ.

ಇನ್ನು ಒಂದು ಹೆಜ್ಜೆ ಮುಂದಿಟ್ಟು, ನಮ್ಮ ಮಿಟ್ಟಿ ಪ್ರತಿಷ್ಠಾನವು ಬಳಕೆದಾರರಿಗೆ (Users) ಕಾಗದದ ಧ್ವಜಗಳನ್ನು ಬಳಸಲು ಮತ್ತು ನಮಗೆ, ನಮ್ಮ ಭವಿಷ್ಯದ ನಾಗರಿಕರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಿ ಕೊಡಲು ಪ್ರತಿಜ್ಞೆ ತೆಗೆದುಕೊಳ್ಳುವಂತೆ ವಿನಂತಿಸಿತು.

ಈ ಅಭಿಯಾನವು ಈಗಾಗಲೇ ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್, ಬಿಪ್ಲಬ್ ಕುಮಾರ್ ದೇಬ್ ಮತ್ತು ಎನ್. ಬಿರೇನ್ ಸಿಂಗ್ ಅವರಂತಹ ಹಲವಾರು ಮಂತ್ರಿಗಳಿಂದ ಹೆಚ್ಚಿನ ಬೆಂಬಲವನ್ನು ಪಡೆದಿದೆ, ಅವರು ಬಳಕೆದಾರರನ್ನು ಈ ಸ್ವಾತಂತ್ರ್ಯ ದಿನದಂದು ಕಾಗದ/ಬಟ್ಟೆ ಧ್ವಜಗಳ ಬಳಕೆಗೆ ಪ್ರೋತ್ಸಾಹಿಸಲು #ನಾನುಕೂನಲ್ಲಿಪ್ರತಿಜ್ಞೆಮಾಡುತ್ತೇನೆ ಮತ್ತು #ಪ್ಲಾಸ್ಟಿಕ್_ತ್ರಿವರ್ಣಧ್ವಜ_ಬೇಡ ಹ್ಯಾಶ್ಟ್ಯಾಗ್ ಬಳಸಿ Koo(ಕೂ) ಮಾಡಿದರು.

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

ಈ ಅಭಿಯಾನವನ್ನು ಬೆಂಬಲಿಸಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಅಧಿಕೃತ ಕೂ ಖಾತೆಯಿಂದ ತನ್ನ ಬೆಂಬಲಿಗರು ಮತ್ತು ಸಾರ್ವಜನಿಕರಿಗೆ ಪ್ಲಾಸ್ಟಿಕ್ ತ್ರಿವರ್ಣವನ್ನು ಎಂದಿಗೂ ಬಳಸಬೇಡಿ ಎಂದು ಮನವಿ ಮಾಡಿದರು. ಅಭಿಯಾನದಲ್ಲಿ ಭಾಗವಹಿಸಿ, ಸಿಎಂ ಯೋಗಿ ಆದಿತ್ಯನಾಥ್ ಹೀಗೆ ಬರೆದಿದ್ದಾರೆ: "देश की एकता, अखंडता एवं संप्रभुता का प्रतीक हमारा राष्ट्रध्वज सभी भारतवासियों का गौरव है। आइए, हम सभी तिरंगे के सम्मान, पर्यावरण की रक्षा तथा राष्ट्र हित में प्लास्टिक के तिरंगे का प्रयोग कभी न करने की शपथ लें। जय हिंद-जय भारत! #ಪ್ಲಾಸ್ಟಿಕ್_ತ್ರಿವರ್ಣಧ್ವಜ_ಬೇಡ #ನಾನುಕೂನಲ್ಲಿಪ್ರತಿಜ್ಞೆಮಾಡುತ್ತೇನೆ (ನಮ್ಮ ರಾಷ್ಟ್ರೀಯ ಧ್ವಜ, ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಯ ಸಂಕೇತವಾಗಿದೆ, ಇದು ಎಲ್ಲಾ ಭಾರತೀಯರ ಹೆಮ್ಮೆಯಾಗಿದೆ. ನಾವೆಲ್ಲರೂ ತ್ರಿವರ್ಣವನ್ನು ಗೌರವಿಸುತ್ತೇವೆ, ಪರಿಸರವನ್ನು ರಕ್ಷಿಸುತ್ತೇವೆ ಮತ್ತು ಪ್ಲಾಸ್ಟಿಕ್ ತ್ರಿವರ್ಣವನ್ನು ರಾಷ್ಟ್ರದ ಹಿತಾಸಕ್ತಿಗಾಗಿ ಎಂದಿಗೂ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡೋಣ. ಜೈ ಹಿಂದ್-ಜೈ ಭಾರತ್!)

"अपनी सुंदर वसुधा, पालनहार प्रकृति एवं पर्यावरण की सुरक्षा हेतु प्लास्टिक का प्रयोग बंद करने में ही भलाई है। स्वतंत्रता दिवस पर प्लास्टिक के तिरंगे का प्रयोग कदापि न करें। आइए, 'प्लास्टिक मुक्त' नए भारत का निर्माण करें।. #ಪ್ಲಾಸ್ಟಿಕ್_ತ್ರಿವರ್ಣಧ್ವಜ_ಬೇಡ #ನಾನುಕೂನಲ್ಲಿಪ್ರತಿಜ್ಞೆಮಾಡುತ್ತೇನೆ (ನಮ್ಮ ಸುಂದರ ಭೂಮಿ, ಪ್ರಕೃತಿ ಮತ್ತು ಪರಿಸರವನ್ನು ಪೋಷಿಸಲು ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸುವುದು ಒಳ್ಳೆಯದು. ಸ್ವಾತಂತ್ರ್ಯ ದಿನದಂದು ಪ್ಲಾಸ್ಟಿಕ್ ತ್ರಿವರ್ಣವನ್ನು ಎಂದಿಗೂ ಬಳಸಬೇಡಿ. ನಾವು 'ಪ್ಲಾಸ್ಟಿಕ್ ಮುಕ್ತ' ನವ ಭಾರತವನ್ನು ನಿರ್ಮಿಸೋಣ) "ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಮತ್ತೊಂದು Koo (ಕೂ) ನಲ್ಲಿ ಬರೆದುಕೊಂಡಿದ್ದಾರೆ

ಶಿವರಾಜ್ ಸಿಂಗ್ ಚೌಹಾಣ್

ಶಿವರಾಜ್ ಸಿಂಗ್ ಚೌಹಾಣ್

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಈ ಅಭಿಯಾನದಲ್ಲಿ ಭಾಗವಹಿಸಿದರು ಮತ್ತು ಅವರ ಅಧಿಕೃತ Koo (ಕೂ) ಖಾತೆಯಿಂದ ಈ ರೀತಿ ಮನವಿ ಮಾಡಿದರು, " 75वें #स्वतंत्रता_दिवस पर मैं प्रदेश के सभी भाई-बहनों व युवाओं से अनुरोध करता हूं कि आप कागज या कपड़े से बने तिरंगे को गर्व और शान से फहरायें। आइये, आज हम सब स्वतंत्रता दिवस के इस पुनीत अवसर पर स्वच्छ और गौरवशाली भारतवर्ष बनाने की शपथ लें. #ಪ್ಲಾಸ್ಟಿಕ್_ತ್ರಿವರ್ಣಧ್ವಜ_ಬೇಡ #ನಾನುಕೂನಲ್ಲಿಪ್ರತಿಜ್ಞೆಮಾಡುತ್ತೇನೆ (75ನೇ #ಸ್ವಾತಂತ್ರ್ಯ_ದಿನ ದಂದು, ರಾಜ್ಯದ ಎಲ್ಲಾ ಸಹೋದರರು ಮತ್ತು ಸಹೋದರಿಯರು ಮತ್ತು ಯುವಕರು ಆಕರ್ಷಕವಾದ ಪೇಪರ್ ಅಥವಾ ಬಟ್ಟೆಯಿಂದ ಮಾಡಿದ ತ್ರಿವರ್ಣವನ್ನು ಹೆಮ್ಮೆಯಿಂದ ಹಾರಿಸಬೇಕೆಂದು ನಾನು ವಿನಂತಿಸುತ್ತೇನೆ. ಈ ಶುಭ ಸಂದರ್ಭದಲ್ಲಿ ಸ್ವಚ್ಛ ಮತ್ತು ವೈಭವದ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಇಂದು ಪ್ರಮಾಣವಚನ ಸ್ವೀಕರಿಸೋಣ. )

ಅಮರಿಂದರ್ ಸಿಂಗ್

ಅಮರಿಂದರ್ ಸಿಂಗ್

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಕಚೇರಿಯು Koo (ಕೂ) ಆಪ್‌ನಲ್ಲಿನ ಅಭಿಯಾನದಲ್ಲಿ ಭಾಗವಹಿಸಿತು ಮತ್ತು ಅವರ ಅಧಿಕೃತ ಖಾತೆಯಿಂದ ಹೀಗೆ ಕೂ ಮಾಡಿದ್ದಾರೆ, "75 ನೇ ಸ್ವಾತಂತ್ರ್ಯ ದಿನಾಚರಣೆಯಂದು, ಪ್ಲಾಸ್ಟಿಕ್ ಧ್ವಜಗಳ ಬದಲಿಗೆ ಕಾಗದ ಅಥವಾ ಬಟ್ಟೆಯ ಧ್ವಜಗಳನ್ನು ಬಳಸೋಣ ಎಂದು #ನಾನುಕೂನಲ್ಲಿಪ್ರತಿಜ್ಞೆಮಾಡುತ್ತೇನೆ. ನಮ್ಮ ರಾಷ್ಟ್ರವನ್ನು ಸ್ವಚ್ಛ ಮತ್ತು ಪರಿಸರ ಸ್ನೇಹಿ ಯಾಗಿಸಲು -. ನಾವು ಪ್ರತಿ ನಾಗರಿಕರಿಗೂ #ಪ್ಲಾಸ್ಟಿಕ್_ತ್ರಿವರ್ಣಧ್ವಜ_ಬೇಡ ಅಭಿಯಾನಕ್ಕೆ ಕೈ ಜೋಡಿಸಲು ಕೋರುತ್ತೇವೆ.

ಜೈರಾಮ್ ಠಾಕೂರ್

ಜೈರಾಮ್ ಠಾಕೂರ್

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ, ಶ್ರೀ ಜೈರಾಮ್ ಠಾಕೂರ್ ಹೀಗೆ ಬರೆದಿದ್ದಾರೆ "तिरंगे की शान का प्लास्टिक से अपमान ना करें। इस स्वतंत्रता दिवस पर मैं शपथ लेता हूं कि प्लास्टिक तिरंगे का उपयोग नहीं करूंगा और अपने राज्य के नागरिकों से भी अनुरोध करूंगा की वो भी ये शपथ लेकर तिरंगे का मान बढ़ाएं। #SayNoToPlasticTiranga #PledgeOnKoo" (ತ್ರಿವರ್ಣ ಧ್ವಜವನ್ನು ಪ್ಲಾಸ್ಟಿಕ್ ನಿಂದ ಅವಮಾನಿಸಬೇಡಿ. ಈ ಸ್ವಾತಂತ್ರ್ಯ ದಿನಾಚರಣೆಯಂದು, ನಾನು ಪ್ಲಾಸ್ಟಿಕ್ ತ್ರಿವರ್ಣವನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತೇನೆ ಮತ್ತು ನನ್ನ ರಾಜ್ಯದ ನಾಗರಿಕರು ಈ ಪ್ರಮಾಣವಚನ ಸ್ವೀಕರಿಸಿ ಮತ್ತು ತ್ರಿವರ್ಣ ಮೌಲ್ಯವನ್ನು ಹೆಚ್ಚಿಸಲು ವಿನಂತಿಸುತ್ತೇನೆ. #ಪ್ಲಾಸ್ಟಿಕ್_ತ್ರಿವರ್ಣಧ್ವಜ_ಬೇಡ #ನಾನುಕೂನಲ್ಲಿಪ್ರತಿಜ್ಞೆಮಾಡುತ್ತೇನೆ)

ಹೇಮಂತ ಬಿಸ್ವ ಶರ್ಮಾ

ಹೇಮಂತ ಬಿಸ್ವ ಶರ್ಮಾ

ಅಸ್ಸಾಂ ಮುಖ್ಯಮಂತ್ರಿ ಹೇಮಂತ ಬಿಸ್ವ ಶರ್ಮಾ ಅವರು ಈಶಾನ್ಯ ರಾಜ್ಯಗಳಿಗೆ ಧ್ವಜ ಸಂಹಿತೆ 2002 ಅನ್ನು ನೆನಪಿಸಿದರು ಮತ್ತು ಪೇಪರ್ ತ್ರಿವರ್ಣವನ್ನು ಮಾತ್ರ ಬಳಸುವಂತೆ ಜನರಿಗೆ ಮನವಿ ಮಾಡಿದರು. ಅವರ Koo (ಕೂ) ಪೋಸ್ಟ್‌ನಲ್ಲಿ ಹೀಗೆ ಹೇಳಿದರು: "ನಾವೆಲ್ಲರೂ ಸ್ವಾತಂತ್ರ್ಯ ದಿನವನ್ನು ಉತ್ಸಾಹದಿಂದ ಆಚರಿಸುತ್ತೇವೆ, ಪ್ಲಾಸ್ಟಿಕ್ ಧ್ವಜಗಳನ್ನು ಬಳಸದಂತೆ ನಾನು ಎಲ್ಲ ನಾಗರಿಕರನ್ನು ಕೋರುತ್ತೇನೆ. 2002 ರ ಧ್ವಜ ಸಂಹಿತೆಯಡಿಯಲ್ಲಿ, ಕಾಗದ ಮತ್ತು ಬಟ್ಟೆ ಧ್ವಜಗಳನ್ನು ಮಾತ್ರ ಬಳಕೆಗೆ ಅನುಮತಿಸಲಾಗಿದೆ. ಪ್ಲಾಸ್ಟಿಕ್ ಮುಕ್ತವಾಗಿರಲು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತರಾಗಿ ಪ್ರತಿಜ್ಞೆ ತೆಗೆದುಕೊಳ್ಳುವ ಮೂಲಕ ನಮ್ಮ ಸ್ವಾತಂತ್ರ್ಯವನ್ನು ಆಚರಿಸೋಣ. #ಪ್ಲಾಸ್ಟಿಕ್_ತ್ರಿವರ್ಣಧ್ವಜ_ಬೇಡ #ನಾನುಕೂನಲ್ಲಿಪ್ರತಿಜ್ಞೆಮಾಡುತ್ತೇನೆ "

ಎನ್ ಬಿರೇನ್ ಸಿಂಗ್

ಎನ್ ಬಿರೇನ್ ಸಿಂಗ್

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ತಮ್ಮ Koo (ಕೂ) ಖಾತೆಯಿಂದ ತ್ರಿವರ್ಣಕ್ಕೆ ತಕ್ಕ ಗೌರವವನ್ನು ನೀಡಲು ಪ್ಲಾಸ್ಟಿಕ್ ತ್ರಿವರ್ಣವನ್ನು ಬಳಸದಂತೆ ಜನರಿಗೆ ಮನವಿ ಮಾಡುವ ಮೂಲಕ ಹೀಗೆ ಹೇಳಿದರು, "ನಾವೆಲ್ಲರೂ ಸ್ವಾತಂತ್ರ್ಯ ದಿನವನ್ನು ಉತ್ಸಾಹದಿಂದ ಆಚರಿಸುತ್ತೇವೆ, ಪ್ಲಾಸ್ಟಿಕ್ ಧ್ವಜಗಳನ್ನು ದಯವಿಟ್ಟು ಬಳಸದಂತೆ ನಾನು ಎಲ್ಲ ನಾಗರಿಕರನ್ನು ಕೋರುತ್ತೇನೆ. 2002 ರ ಧ್ವಜ ಸಂಹಿತೆಯಡಿಯಲ್ಲಿ, ಕಾಗದ ಮತ್ತು ಬಟ್ಟೆಯ ಧ್ವಜಗಳನ್ನು ಮಾತ್ರ ಬಳಕೆಗೆ ಅನುಮತಿಸಲಾಗಿದೆ. ಪ್ಲಾಸ್ಟಿಕ್ ಮುಕ್ತವಾಗಿರಲು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತರಾಗಿ ಪ್ರತಿಜ್ಞೆ ತೆಗೆದುಕೊಳ್ಳುವ ಮೂಲಕ ನಮ್ಮ ಸ್ವಾತಂತ್ರ್ಯವನ್ನು ಆಚರಿಸೋಣ. #ಪ್ಲಾಸ್ಟಿಕ್_ತ್ರಿವರ್ಣಧ್ವಜ_ಬೇಡ #ನಾನುಕೂನಲ್ಲಿಪ್ರತಿಜ್ಞೆಮಾಡುತ್ತೇನೆ"

English summary
Chief Ministers, Cabinet ministers, Sportsperson and manu celebrities extended support to Say No To Plastic Tiranga campaign on Koo app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X