ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ, ದೆಹಲಿಯಲ್ಲಿ ಮೋಡ ಕವಿದ ವಾತಾವರಣ: ಲಘು ಮಳೆ ಮುನ್ಸೂಚನೆ!

ಕರ್ನಾಟಕ, ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.

|
Google Oneindia Kannada News

ರಾಜ್ಯದ ಹಲವೆಡೆ ಇಂದು ಹಗುರದಿಂಧ ಸಾಧಾರಣ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಂಡ್ಯ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ದಾವಣಗೆರೆ, ಚಾಮರಾಜನಗರ ಜಿಲ್ಲೆಯ ಕೆಲ ಪ್ರದೇಶದಲ್ಲಿ ಸಾಧಾರಣ ಮಳೆಯಾಘುವ ಸಾಧ್ಯತೆ ಇದೆ. ರಾಜ್ಯಾದ್ಯಾಂತ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕಡಿಮೆಯಾಗುವ ಸಾಧ್ಯತೆಗಳಿವೆ. ಹರದನಹಳ್ಳಿ, ಹಾರಂಗಿ, ಕೃಷ್ಣರಾಜಸಾಗರ, ಪೊನ್ನಂಪೇಟೆ, ವಿರಾಜಪೇಟೆ, ಸೋಮವಾರಪೇಟೆ, ಗೋಣಿಕೊಪ್ಪಲು, ಕೆವಿಕೆ, ಮೈಸೂರು, ಚಿಕ್ಕಮಗಳೂರು, ಸುಂಟಿಕೊಪ್ಪ, ಕೊಪ್ಪ, ಮಡಿಕೇರಿಯಲ್ಲೂ ಮಳೆಯಾಗಿದೆ.

ದೆಹಲಿಯಲ್ಲಿ ಜನವರಿ 29 ರಂದು ಲಘು ಮಳೆಯಾಗಲಿದ್ದು ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಹೇಳಿದೆ. ದೆಹಲಿ ಗರಿಷ್ಟ ತಾಪಮಾನ 17.3 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಸಿದೆ. ಹೊಸ ಪಾಶ್ಚಿಮಾತ್ಯ ಅಡಚಣೆಯು ಜನವರಿ 29 ರಂದು ಲಘು ಮಳೆಗೆ ಕಾರಣವಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಯ ಅಂಕಿಅಂಶಗಳ ಪ್ರಕಾರ, ರಾತ್ರಿ 7 ಗಂಟೆಗೆ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 297 (ಕಳಪೆ ವರ್ಗ) ರಷ್ಟಿದೆ. ಸೊನ್ನೆ ಮತ್ತು 50 ರ ನಡುವಿನ AQI ಅನ್ನು 'ಒಳ್ಳೆಯದು', 51 ಮತ್ತು 100 'ತೃಪ್ತಿದಾಯಕ', 101 ಮತ್ತು 200 'ಮಧ್ಯಮ', 201 ಮತ್ತು 300 'ಕಳಪೆ', 301 ಮತ್ತು 400 'ಅತ್ಯಂತ ಕಳಪೆ' ಮತ್ತು 401 ಮತ್ತು 500 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

Cloudy weather in Karnataka, Delhi: Light rain forecast!

ಸುದ್ದಿ ಸಂಸ್ಥೆ ಪಿಟಿಐಗೆ ವಿವರಗಳನ್ನು ನೀಡಿದ ಸ್ಕೈಮೆಟ್ ವೆದರ್ ಸರ್ವಿಸಸ್‌ನ ಮಹೇಶ್ ಪಲಾವತ್ ಅವರ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ದೆಹಲಿಯಲ್ಲಿ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗಬಹುದು.

"ಇಂದಿನ ಗರಿಷ್ಠ ತಾಪಮಾನವು ಸುಮಾರು 4 ಡಿಗ್ರಿಗಳಷ್ಟು ಕಡಿಮೆಯಾಗಿದೆ. ಜನವರಿ 25 ರಂದು ಗರಿಷ್ಠ ತಾಪಮಾನ 21.6 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಇಂದು ಅದು 17.3 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಸಿದೆ. ಕನಿಷ್ಠ ತಾಪಮಾನ 12.8 ಆಗಿತ್ತು. ಇನ್ನೆರಡು ದಿನಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ'' ಎಂದು ಹೇಳಿದರು.

Cloudy weather in Karnataka, Delhi: Light rain forecast!

ಮೋಡಗಳು ಹಗಲಿನಲ್ಲಿ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ. ರಾತ್ರಿಯ ತಾಪಮಾನವನ್ನು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಆದಾಗ್ಯೂ, ಮೋಡ ಕವಿದ ವಾತಾವರಣವು ಸೂರ್ಯನಿಗೆ ಅಡ್ಡಿಯಾಗುವುದರಿಂದ ಹಗಲಿನ ತಾಪಮಾನವನ್ನು ಕಡಿಮೆ ಮಾಡುತ್ತದೆ.

English summary
Meteorological Department has forecast cloudy weather and rain in Karnataka and Delhi. Delhi will receive light rain on January 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X