ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ: ಉತ್ತರಾಖಂಡದಲ್ಲಿ ತೀವ್ರ ಮಳೆ- ಶಾಲೆಗಳಿಗೆ ರಜೆ

|
Google Oneindia Kannada News

ನವದೆಹಲಿ ಅಕ್ಟೋಬರ್ 7: ದೇಶದ ಹಲವಾರು ಭಾಗಗಳು ತೀವ್ರ ಮಳೆ ಮತ್ತು ಪ್ರವಾಹದಂತಹ ಪರಿಸ್ಥಿತಿಗಳಿಗೆ ಸಾಕ್ಷಿಯಾಗುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಶಿವಮೊಗ್ಗ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಮುಂಗಾರು ಹಿಮ್ಮೆಟ್ಟಲಿದ್ದು ಅಲ್ಲಿವರೆಗೂ ಕರ್ನಾಟಕದ ಹಲವೆಡೆ ಮಳೆಯಾಗಲಿದೆ. ಇನ್ನೂ ದೇಶದ ಹಲವು ರಾಜ್ಯಗಳಲ್ಲೂ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ.

ದೆಹಲಿ ನಿವಾಸಿಗಳು ಶುಕ್ರವಾರ ಬೆಳಿಗ್ಗೆ ಮೋಡ ಕವಿದ ವಾತಾವರಣ, ಚಳಿಯ ಗಾಳಿಯೊಂದಿಗೆ ಲಘು ಮಳೆಯನ್ನು ಕಂಡರು. ಭಾರತದ ಹವಾಮಾನ ಇಲಾಖೆ (IMD) ಪ್ರಕಾರ, ಹಗಲಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಮಳೆ ಬೀಳುವ ನಿರೀಕ್ಷೆಯಿದೆ. ಜೊತೆಗೆ IMD ಶುಕ್ರವಾರದಿಂದ ಅಕ್ಟೋಬರ್ 7ರವೆಗೆ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಮಳೆಯ ಎಚ್ಚರಿಕೆ ನೀಡಿದೆ. ವಿವಿಧ ರಾಜ್ಯಗಳ ಮುನ್ಸೂಚನೆ ಹೀಗಿದೆ.

ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ

ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಶುಕ್ರವಾರದಂದು ಗರಿಷ್ಠ ತೀವ್ರತೆಯೊಂದಿಗೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮುಂದಿನ ಮೂರು ದಿನಗಳ ಕಾಲ ತೀವ್ರ ಮಳೆಯಾಗುವ ನಿರೀಕ್ಷೆಯಿದೆ.

ಈ ಮುನ್ನೋಟಗಳ ದೃಷ್ಟಿಯಿಂದ ಎರಡೂ ರಾಜ್ಯಗಳು ಮುಂದಿನ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್‌ನಲ್ಲಿ ಇರುತ್ತವೆ. ಆದರೆ ಉತ್ತರಾಖಂಡದ ಪೂರ್ವಾರ್ಧದ ಸಲಹೆಯನ್ನು ಶುಕ್ರವಾರದ ಕೆಂಪು ಎಚ್ಚರಿಕೆಗೆ ಅಪ್‌ಗ್ರೇಡ್ ಮಾಡಲಾಗಿದೆ. ಭಾನುವಾರದಿಂದ, ಎರಡೂ ರಾಜ್ಯಗಳಲ್ಲಿನ ಎಚ್ಚರಿಕೆಗಳನ್ನು ಎಲ್ಲೋ ಅಲರ್ಟ್ಗೆ ಬದಲಾಯಿಸಲಾಗುತ್ತದೆ ಎಂದು ಐಎಂಡಿ ತಿಳಿಸಿದೆ.

ಹವಾಮಾನ ಇಲಾಖೆಯ ತೀವ್ರ ಮಳೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ 1 ರಿಂದ 12 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚುವಂತೆ ತೆಹ್ರಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

19 ಪರ್ವತಾರೋಹಿಗಳು ಸಾವು

19 ಪರ್ವತಾರೋಹಿಗಳು ಸಾವು

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ದ್ರೌಪದಿಯ ದಂಡ II ಶಿಖರದಲ್ಲಿ ಹಿಮಕುಸಿತ ಸಂಭವಿಸಿ 19 ಜನರು ಸಾವನ್ನಪ್ಪಿದ್ದಾರೆ. ಉತ್ತರಕಾಶಿಯ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನ ಪರ್ವತಾರೋಹಿಗಳ ತಂಡವು ಶಿಖರದಿಂದ ಹಿಂತಿರುಗುವಾಗ ಹಿಮಪಾತದಲ್ಲಿ ಸಿಕ್ಕಿಬಿದ್ದ ನಂತರ ನಾಪತ್ತೆಯಾಗಿದ್ದರು. ಬಳಿಕ ಅವರು ರಕ್ಷಣಾ ಕಾರ್ಯ ನಡೆದಿತ್ತು. ಬಳಿಕ ಅವರು ಸಾವನ್ನಪ್ಪಿರುವುದಾಗಿ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ ಸಂಸ್ಥೆ ತಿಳಿಸಿದೆ. ಮಂಗಳವಾರ ತಂಡವು ದ್ರೌಪದಿಯ ದಂಡ II ಶಿಖರವನ್ನು ತಲುಪಿ ಹಿಂತಿರುಗುತ್ತಿದ್ದಾಗ 17,000 ಅಡಿ ಎತ್ತರದಲ್ಲಿ ಹಿಮಕುಸಿತ ಸಂಭವಿಸಿದೆ.

ಹೈದರಾಬಾದ್‌ನಲ್ಲಿ ಲಘು ಮಳೆ

ಹೈದರಾಬಾದ್‌ನಲ್ಲಿ ಲಘು ಮಳೆ

ಆಂಧ್ರಪ್ರದೇಶದ ಎನ್‌ಟಿಆರ್‌ ಜಿಲ್ಲೆಯ ತಿರುವೂರು ಪಟ್ಟಣದಲ್ಲಿ ಗುರುವಾರ ರಾತ್ರಿ ಅಧಿಕ ಮಳೆಯಾಗಿದೆ. ಇದಲ್ಲದೆ, ಮುಂದಿನ ಐದು ದಿನಗಳಲ್ಲಿ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಎಚ್ಚರಿಕೆ ನೀಡಲಾಗಿದೆ. ಹೈದರಾಬಾದ್‌ನಲ್ಲಿ ಗುರುವಾರ ರಾತ್ರಿ ಮೋಡ ಕವಿದ ವಾತಾವರಣವಿದ್ದು, ಲಘು ಮಳೆಯಾಗಿದೆ. ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳ ಕಾಲ ಹಲವು ಬಾರಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ.

ಇತರ ಸ್ಥಳಗಳಿಗೆ ಮುನ್ಸೂಚನೆ

ಇತರ ಸ್ಥಳಗಳಿಗೆ ಮುನ್ಸೂಚನೆ

ಮುಂದಿನ 2-3 ದಿನಗಳಲ್ಲಿ ಒಡಿಶಾ, ಕರಾವಳಿ ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನಾ ಸಂಸ್ಥೆ ಮುನ್ಸೂಚನೆ ನೀಡಿದೆ. ಆಂಧ್ರಪ್ರದೇಶದ ಕರಾವಳಿಯಲ್ಲಿ ಶುಕ್ರವಾರ ಕೂಡ ಭಾರಿ ಮಳೆಯಾಗುವ ಸಾಧ್ಯತೆಯಿದೆ.

English summary
It will be cloudy in Bangalore. The weather will be like this in these regions of other states of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X